ಖಾಸಗಿ ಸಂದರ್ಶನಕ್ಕೆ ನಿರ್ಭಂದ: ಬಿಸಿಸಿಐಯಿಂದ ಹಾರ್ದಿಕ್ ಪಾಂಡ್ಯ-ಕೆ ಎಲ್ ರಾಹುಲ್​ಗೆ ನೊಟೀಸ್

Vinay Bhat | news18
Updated:January 9, 2019, 1:34 PM IST
ಖಾಸಗಿ ಸಂದರ್ಶನಕ್ಕೆ ನಿರ್ಭಂದ: ಬಿಸಿಸಿಐಯಿಂದ ಹಾರ್ದಿಕ್ ಪಾಂಡ್ಯ-ಕೆ ಎಲ್ ರಾಹುಲ್​ಗೆ ನೊಟೀಸ್
Image Courtesy: Hardik Pandya/ Twitter
Vinay Bhat | news18
Updated: January 9, 2019, 1:34 PM IST
ಖಾಸಗಿ ಚಾನೆಲ್ ಒಂದರಲ್ಲಿ ಪ್ರಸಾರವಾಗುವ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೆ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ ಎಲ್ ರಾಹುಲ್ ಭಾಗವಹಿಸಿದ್ದರು.

ಇದರಲ್ಲಿ ಕರಣ್ ಅವರು ಕೇಳಿದ ಪ್ರಶ್ನೆಗೆ ಪಾಂಡ್ಯ ನೀಡಿದ ಉತ್ತರ ಅನೇಕರ ಕೆಂಗಟ್ಟಿಗೆ ಗುರಿಯಾಗಿತ್ತು. ಇದನ್ನ ಮನಗಂಡು ಪಾಂಡ್ಯ ಕ್ಷಮೆಕೂಡ ಕೇಳಿದ್ದರು. ಆದರೆ, ಸದ್ಯ ಬಿಸಿಸಿಐ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ ಈ ವಿಚಾರವಾಗಿ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಇನ್ನುಮುಂದೆ ಈ ರೀತಿಯ ಯಾವುದೆ ಖಾಸಗಿ ಸಂದರ್ಶನದಲ್ಲಿ ಭಾಗವಹಿಸದಂತೆ ನಿರ್ಭಂದ ಹೇರಿದೆ.

ಇದನ್ನೂ ಓದಿ: ಧೋನಿ ಅಥವಾ ಕೊಹ್ಲಿ: 'ಬೆಸ್ಟ್ ಕ್ಯಾಪ್ಟನ್' ಪ್ರಶ್ನೆಗೆ ರಾಹುಲ್-ಹಾರ್ದಿಕ್ ಉತ್ತರ ಕೇಳಿ ದಂಗಾದ ಕರಣ್

‘ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಯ ಕುರಿತು ನಾವು ಹಾರ್ದಿಕ್ ಪಾಂಡ್ಯ ಹಾಗೂ ಕೆ ಎಲ್ ರಾಹುಲ್ ಅವರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಇದಕ್ಕೆ ಉತ್ತರಿಸಲು 24 ಗಂಟೆಯ ಕಾಲವಕಾಶ ನೀಡಲಾಗಿದೆ’ ಎಂದು ಬಿಸಿಸಿಐ ನಿರ್ವಾಹಕ ಸಮಿತಿಯ ಮುಖ್ಯಸ್ಥ ವಿನೋದ್ ರೈ ಹೇಳಿದ್ದಾರೆ.

ಈ ಶೋನಲ್ಲಿ ಕರಣ್ ಅವರು ಪಾಂಡ್ಯ ಬಳಿ 'ನೀವು ಕ್ಲಬ್​ನಲ್ಲಿ ಹುಡುಗಿಯರ ಹೆಸರು ಯಾಕೆ ಕೇಳುವುದಿಲ್ಲ? ಅವರೊಂದಿಗೆ ಏನು ಮಾತನಾಡುತ್ತೀರಿ' ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ಪಾಂಡ್ಯ, ಸಾಮಾನ್ಯವಾಗಿ ನಾನು ಮೊದಲಿಗೆ ಹಡುಗಿಯರು ಯಾವ ರೀತಿ ವರ್ತಿಸುತ್ತಾರೆಂದು ನೋಡಲು ಇಷ್ಟಪಡುತ್ತೇನೆ ಎಂದಿದ್ದರು. ಇದರ ಜೊತೆಗೆ ವರ್ಣಬೇಧದ ಮಾತುಗಳನ್ನು ಆಡಿದ್ದರು.

ಇದನ್ನೂ ಓದಿ: ಬಿಸಿಸಿಐಯಿಂದ ಬಂಪರ್ ಬಹುಮಾನ: ಭಾರತೀಯ ಆಟಗಾರರಿಗೆ ಸಿಗುವ ಬೋನಸ್ ಎಷ್ಟು ಗೊತ್ತಾ?

ಪಾಂಡ್ಯ ಅವರ ಈ ಮಾತುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಸ್ತ್ರಿ ದ್ವೇಶಿ, ವರ್ಣಬೇಧ ಹಾಗೂ ಲಿಂಗ ತಾರತಮ್ಯ ಎಂಬ ಕಮೆಂಟ್​ಗಳು ಬಂದಿದ್ದವು. ಬಳಿಕ ಪಾಂಡ್ಯ ಅವರು ತಮ್ಮ ತಪ್ಪಿನ ಅರಿವಾಗಿ ಟ್ವಿಟ್ಟರ್​​ನಲ್ಲಿ ಕ್ಷಮೆ ಕೇಳಿದ್ದರು.
Loading...

First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ