ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಮಾಸ್ಟರ್ಕಾರ್ಡ್ ಹೋಮ್ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಭಾರತ ತಂಡದ (Team India) ಮುಂದಿನ ವರ್ಷ ಅಂತರಾಷ್ಟ್ರೀಯ ಸರಣಿಯ ಭಾಗವಾಗಿ ಮದೊಲಿಗೆ ಜನವರಿಯಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಮೂರು ಪಂದ್ಯಗಳ T20I ಮತ್ತು ಮೂರು ಪಂದ್ಯಗಳ ODI ಸರಣಿಯೊಂದಿಗೆ ಪ್ರಾರಂಭಿಸಲಿದೆ. ಇದಾದ ಬಳಿಕ ನ್ಯೂಜಿಲ್ಯಾಂಡ್ (New Zealand) ಮತ್ತು ಆಸ್ಟ್ರೇಲಿಯಾವನ್ನು (Australia) ಎದುರಿಸಲಿದೆ. ಇವುಗಳ ಸಂಪೂರ್ಣ ವೇಳಾಪಟ್ಟಿ ಈ ರೀತಿ ಇದೆ ನೋಡಿ.
ಭಾರತ- ಶ್ರೀಲಂಕಾ ಪ್ರವಾಸದ ವೇಳಾಪಟ್ಟಿ:
ಭಾರತ ಮತ್ತು ಶ್ರೀಲಂಕಾ ತಂಡಗಳು ಮುಂದಿನ ವರ್ಷ ಮುಖಾಮುಖಿ ಆಗಲಿದೆ. ಈ ವೇಳೆ ಉಭಯ ತಂಡಗಳು 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ.
ಮೊದಲ ಟಿ20: ಜನವರಿ 3, 2023 ಮಂಗಳವಾರ - ಮುಂಬೈ
2ನೇ ಟಿ20: ಜನವರಿ 5, 2023 ಗುರುವಾರ - ಪುಣೆ
3ನೇ ಟಿ20: ಜನವರಿ 7, ಶನಿವಾರ - ರಾಜ್ಕೋಟ್
1ನೇ ಏಕದಿನ ಪಂದ್ಯ: ಜನವರಿ 10, ಮಂಗಳವಾರ - ಗುವಾಹಟಿ
2ನೇ ಏಕದಿನ ಪಂದ್ಯ: ಜನವರಿ 12, ಗುರುವಾರ - ಕೋಲ್ಕತ್ತಾ
3ನೇ ಏಕದಿನ ಪಂದ್ಯ: ಜನವರಿ 15, ರವಿವಾರ - ತಿರುವನಂತಪುರ.
🚨 NEWS 🚨: BCCI announces schedule for Mastercard home series against Sri Lanka, New Zealand & Australia. #TeamIndia | #INDvSL | #INDvNZ | #INDvAUS | @mastercardindia
More Details 🔽https://t.co/gEpahJztn5
— BCCI (@BCCI) December 8, 2022
ಮೊದಲ ಏಕದಿನ: ಜನವರಿ 18 - ಹೈದರಾಬಾದ್
ಎರಡನೇ ಏಕದಿನ: ಜನವರಿ 21 - ರಾಯಪುರ
ಮೂರನೇ ಏಕದಿನ: ಜನವರಿ 24 - ಇಂದೋರ್
1ನೇ ಟಿ20: ಜನವರಿ 27 - ರಾಂಚಿ
2ನೇ ಟಿ20: ಜನವರಿ 29 - ಲಕ್ನೋ
3ನೇ ಟಿ20: ಫೆಬ್ರವರಿ 1 - ಅಹಮದಾಬಾದ್
ಅದರಂತೆ ಟೀಂ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸರಣಿಯು ಈ ಬಾರಿ ಭಾರತದಲ್ಲಿಯೇ ನಡೆಯಲಿದೆ. ಈ ವೇಳೆ ಉಭಯ ತಂಡಗಳು 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ.
ಆಸ್ಟ್ರೇಲಿಯಾ vs ಭಾರತ ಪ್ರವಾಸ, 2022-23 - ಟೆಸ್ಟ್ ಸರಣಿ:
ಇನ್ನು, ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿಯಲ್ಲಿ ಕೊನೆಯದಾಗಿ ಪ್ರವಾಸಕ್ಕೆ ಬರಲಿರುವ ಆಸೀಸ್ ತಂಡವು ಭಾರತದಲ್ಲಿ ಮೊದಲಿಗೆ 4 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.
ಮೊದಲ ಟೆಸ್ಟ್: ಫೆಬ್ರವರಿ 9-13 - ನಾಗ್ಪುರ
ಎರಡನೇ ಟೆಸ್ಟ್: ಫೆಬ್ರವರಿ 17-21 - ದೆಹಲಿ
ಮೂರನೇ ಟೆಸ್ಟ್: ಮಾರ್ಚ್ 1-5 - ಧರ್ಮಶಾಲಾ
ನಾಲ್ಕನೇ ಟೆಸ್ಟ್: ಮಾರ್ಚ್ 9-13 - ಅಹಮದಾಬಾದ್.
ಇದನ್ನೂ ಓದಿ: Rohit Sharma: ಗಾಯದ ನಡುವೆಯೇ ದಾಖಲೆ ಬರೆದ ಹಿಟ್ಮ್ಯಾನ್, ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್
ಆಸ್ಟ್ರೇಲಿಯಾದ ಭಾರತ ಪ್ರವಾಸ, 2022-23 - ODI ಸರಣಿ:
1 ನೇ ODI: ಮಾರ್ಚ್ 17 ಶುಕ್ರವಾರ - ಮುಂಬೈ
2ನೇ ODI: ಮಾರ್ಚ್ 19 ರವಿವಾರ - ವೈಜಾಗ್
3ನೇ ODI: ಮಾರ್ಚ್ ಬುಧವಾರ - ಚೆನ್ನೈ.
ಬಾಂಗ್ಲಾ ವಿರುದ್ಧ ಸರಣಿ ಸೋತ ಭಾರತ:
ಸದ್ಯ ಭಾರತ ತಂಡ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಈ ವೇಳೆ ಭಾರತ ತಂಡವು ಬಾಂಗ್ಲಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಹಿನ್ನಡೆಯನ್ನು ಅನುಭವಿಸಿದ್ದು, ಡಿಸೆಂಬರ್ 14ರಿಂದ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದ್ದು, ಇಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದರ ನಡುವೆ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾದ ಪ್ರದರ್ಶನದಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಜೊತೆಗೆ ತಂಡದಲ್ಲಿ ಗಾಯಾಳುಗಳ ಸಮಸ್ಯೆ ಹೆಚ್ಚವಾಗುತ್ತಿರುವುದು ಬಿಸಿಸಿಐಗೆ ದೊಡ್ಡ ತಲೆನೋವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ