ಬಿಸಿಸಿಐಯಿಂದ ಬಂಪರ್ ಬಹುಮಾನ: ಭಾರತೀಯ ಆಟಗಾರರಿಗೆ ಸಿಗುವ ಬೋನಸ್ ಎಷ್ಟು ಗೊತ್ತಾ?

ಟೀಂ ಇಂಡಿಯಾ ಆಸೀಸ್ ನೆಲದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ತಂಡದ ಸದಸ್ಯರಿಗೆ, ಕೋಚ್​ಗಳಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಬಂಪರ್ ಬಹುಮಾನ ಘೋಷಿಸಿದೆ.

Vinay Bhat | news18
Updated:January 9, 2019, 11:45 AM IST
ಬಿಸಿಸಿಐಯಿಂದ ಬಂಪರ್ ಬಹುಮಾನ: ಭಾರತೀಯ ಆಟಗಾರರಿಗೆ ಸಿಗುವ ಬೋನಸ್ ಎಷ್ಟು ಗೊತ್ತಾ?
Pic: Twitter (edited)
Vinay Bhat | news18
Updated: January 9, 2019, 11:45 AM IST
ನವ ದೆಹಲಿ: ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಇತಿಹಾಸ ನಿರ್ಮಿಸಿದೆ. ನಾಲ್ಕು ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ 2-1 ಅಂತರದಲ್ಲಿ ಜಯಿಸಿ ಕಾಂಗುರೂಗಳ ನಾಡಲ್ಲಿ ಇದೆ ಮೊದಲ ಬಾರಿಗೆ ಟೆಸ್ಟ್​ ಸರಣಿ ಗೆದ್ದ ಸಾಧನೆ ಮಾಡಿದೆ.

ಇದಕ್ಕಾಗಿಯೆ ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ತಂಡದ ಸದಸ್ಯರಿಗೆ, ಕೋಚ್​ಗಳಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಬಂಪರ್ ಬಹುಮಾನ ಘೋಷಿಸಿದೆ.

ಇದನ್ನೂ ಓದಿ: (VIDEO): ಐತಿಹಾಸಿಕ ಗೆಲುವಿನ ಬಳಿಕ ಪಂತ್​ ಮಾಡಿದ 'ಬೇಬಿ ಸಿಟ್ಟರ್' ಡ್ಯಾನ್ಸ್ ಫುಲ್ ವೈರಲ್

ಬಾರ್ಡರ್ ಗವಾಸ್ಕರ್ ಟ್ರೋಫಿ ಮುಡಿಗೇರಿಸಿಕೊಂಡ ವಿರಾಟ್ ಕೊಹ್ಲಿ ಪಡೆಗೆ, ಟೆಸ್ಟ್​ ಪಂದ್ಯವೊಂದಕ್ಕೆ ಪಡೆಯುವ ಆದಾಯವನ್ನು ಬಿಸಿಸಿಐ ಬೋಸನ್ ರೂಪದಲ್ಲಿ ನೀಡಲಿದೆ. ಕಣಕ್ಕಿಳಿದು ಬೆವರು ಹರಿಸಿದ ಆಟಗಾರರು ಪ್ರತಿ ಪಂದ್ಯಕ್ಕೆ 15 ಲಕ್ಷ ರೂ. ಪಡೆಯಲಿದ್ದಾರೆ. ಅಂತೆಯೆ ಬೆಂಚ್ ಕಾದಿದ್ದ ಮೀಸಲು ಆಟಗಾರರು 7.5 ಲಕ್ಷ ರೂ., ಕೋಚ್​ಗಳಿಗೆ 25 ಲಕ್ಷ ರೂ. ನೀಡಲಿದ್ದೇವೆ ಎಂದು ಬಿಸಿಸಿಐ ತಿಳಿಸಿದೆ.

ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿ ಪೈಕಿ ಅಡಿಲೇಡ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 31 ರನ್​ಗಳ ಗೆಲುವು ದಾಖಲಿಸಿದರೆ, ಪರ್ಥ್​​ನಲ್ಲಿ ನಡೆದ ಎರಡನೇ ಟೆಸ್ಟ್​​​​ 146 ರನ್​ಗಳಿಂದ ಆಸೀಸ್ ಪಾಲಾಗಿತ್ತು. ಅಂತೆಯ ಮೆಲ್ಬೋರ್ನ್​​ನಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಭರ್ಜರಿ 137 ರನ್​​ಗಳ ಜಯ ಸಾಧಿಸಿತು.

ಇದನ್ನೂ ಓದಿ: IPL​ vs PSL: ಐಪಿಎಲ್​ನ ಒಬ್ಬ ಆಟಗಾರನಿಗೆ ಸಿಗುವ ಮೊತ್ತಕ್ಕೆ ಇಡೀ ಪಾಕ್ ತಂಡವನ್ನೇ ಖರೀದಿಸಬಹುದು..!

ಅಂತಿಮ ನಾಲ್ಕನೇ ಟೆಸ್ಟ್​ ಪಂದ್ಯ ಮಳೆಯಿಂದ ಡ್ರಾನಲ್ಲಿ ಅಂತ್ಯಕಂಡ ಪರಿಣಾಮ, ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸರಣಿಯಲ್ಲಿ 2-1 ಅಂತರದದಲ್ಲಿ ಟೆಸ್ಟ್​ ಸರಣಿ ವಶ ಪಡಿಸಿಕೊಂಡು, ಐತಿಹಾಸಿಕ ಗೆಲುವು ಕಂಡಿತ್ತು. ಸದ್ಯ ಏಕದಿನ ಸರಣಿಗಾಗಿ ಸಿಡ್ನಿಯಲ್ಲಿರುವ ಭಾರತ ಜನವರಿ 12 ರಂದು ಮೊದಲ ಪಂದ್ಯವನ್ನಾಡಲಿದೆ.
Loading...

First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ