ಐಪಿಎಲ್ 2022ರ (IPL 2022) 15ನೇ ಸೀಸನ್ ನ ಪ್ಲೇ ಆಫ್ (Playoff) ಮತ್ತು ಫೈನಲ್ (Final) ಪಂದ್ಯಗಳ ದಿನಾಂಕವ ಮತ್ತು ಸ್ಥಳಗಳನ್ನು ಬಿಸಿಸಿಐ (BCCI) ಘೊಷಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ ಫ್ಲೇ ಆಫ್ ಮತ್ತು ಫೈನಲ್ ಐಪಿಎಲ್ 2022ರ ಪಂದ್ಯಗಳನ್ನು ಯಾವಾಗ ಮತ್ತು ಎಲ್ಲಿ ನಡೆಸಲಾಗುವುದು ಎಂದು ಅಧಿಕೃತವಾಗಿ ತಿಳಸಿದೆ. ಅದರ ಪ್ರಕಾರ ಪ್ಲೇ ಆಫ್ ಪಂದ್ಯಗಳಿಗಾಗಿ BCCI ಒಟ್ಟು 6 ದಿನಗಳನ್ನು ನಿಗಧಿಸಪಡಿಸಿದೆ. ಅಲ್ಲದೇ ಈ ಪಂದ್ಯಗಳು ಲೀಗ್ ರೀತಿಯಲ್ಲಿ ಮುಂಬೈಯಲ್ಲಿ ನಡೆಯುವುದಿಲ್ಲ. ಬದಲಿಗೆ ಕೋಲ್ಕತ್ತಾ ಮತ್ತು ಅಹ್ಮದಾಬಾದ್ ನಲ್ಲಿ 4 ಪಂದ್ಯಗಳು ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಇದರ ನಡುವೆ ಮಹಿಳೆಯರ ಟಿ20 ಚಾಲೆಂಜ್ ಲೀಗ್ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ.
ಯಾವ ಪಂದ್ಯ ಯಾವಾಗ?:
ಐಪಿಎಲ್ 2022ರ ಫ್ಲೇ ಆಫ್ ಗೂ ಮೊದಲ ಕ್ವಾಲಿಫೈಯರ್ ಪಂದ್ಯವು ಮೇ 24ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದರೆ, ಮೇ 27ರಂದು 2ನೇ ಕ್ವಾಲಿಪೈಯರ್ ಪಂದ್ಯವೂ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಲಿದೆ. ಮೊದಲ ಕ್ವಾಲಿಪೈಯರ್ ನಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಲಿದೆ. ಇದರಲ್ಲಿ ಸೋತ ಹಾಗೂ 2ನೇ ಕ್ವಾಲಿಪೈಯರ್ ಪಂದ್ಯದಲ್ಲಿ ಗೆದ್ದ ತಂಡ ಮೇ 26ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯ ಆಡಲಿದೆ. ಇದರಲ್ಲಿ ಸೋತ ತಂಡ ಟೂರ್ನಿಯಿಂದ ಹೊರನಡೆದರೆ ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ.
ಅಹ್ಮದಾಬಾದ್ ನಲ್ಲಿ ಫೈನಲ್ ಪಂದ್ಯ:
ಮೊದಲ ಕ್ವಾಲಿಫೈರ್ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡಗಳು ಐಪಿಎಲ್ 2022ರ ಫೈನಲ್ ಪಂದ್ಯದಲ್ಲಿ ಆಡಲಿದೆ. ಇನ್ನು, ಮೇ 29ರಂದು ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಫೈನಲ್ ಪಂದ್ಯ ನಡೆಯಲಿವೆ. ಈ ಮೂಲಕ ಐಪಿಎಲ್ 15ನೇ ಆವೃತ್ತಿಗೆ ಮೇ 29ರಂದು ಅಧಿಕೃತವಾಗಿ ತೆರೆಬಿಳಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಇನ್ನು, ಐಪಿಎಲ್ 2022ರ ಪ್ಲೇ ಆಫ್ ವೇಳಾಪಟ್ಟಿ ಜೊತೆ ಬಿಸಿಸಿಐ ಮಹಿಳಾ ಟಿ20 ಚಾಲೆಂಜ್ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಅದರಂತೆ ಮೇ 23 ರಿಂದ ಮೇ 28ರ ವರೆಗೆ ಮಹಿಳಾ ಟಿ20 ಚಾಲೆಂಜ್ ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯ ಮೇ 23ರಂದು ಸಂಜೆ 7:30ಕ್ಕೆ ಪುಣೆಯಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳೂ ಹಾಗೂ ಫೈನಲ್ ಸಹ ಪುಣೆಯಲ್ಲಿ ನಡೆಯಲಿದೆ. ಇನ್ನು, ಉಳಿದ ಪಂದ್ಯಗಳು ಕ್ರಮವಾಗಿ ಮೇ 24, ಮೇ 26 ಮತ್ತು ಮೇ 28ರಂದು ನಡೆಯಲಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಐಪಿಎಲ್ 2022ರ ಫ್ಲೇ ಆಫ್ ಪಂದ್ಯಗಳಿಗೆ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಶೇ.50ರಷ್ಟು ಅಂದರೆ ಮೈದಾನದ ಅರ್ಧದಷ್ಟು ವೀಕ್ಷಕರಿಗೆ ಲೀಗ್ ಹಂತದ ಪಂದ್ಯಗಳಿಗೆ ಬರುವ ಅವಕಾಶ ನೀಡಲಾಗಿದೆ. ಆದರೆ ಫ್ಲೇ ಆಫ್ ಪಂದ್ಯಗಳಿಗೆ 100ರಷ್ಟು ಅವಕಾಶ ಕುರಿತು ಇನ್ನು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ