• Home
  • »
  • News
  • »
  • sports
  • »
  • Litton Das: ದುರ್ಗಾ ಪೂಜೆಗೆ ಶುಭಕೋರಿ ಸಂಕಷ್ಟಕ್ಕೆ ಸಿಲುಕಿದ ಕ್ರಿಕೆಟರ್​, ಮತಾಂತರವಾಗುವಂತೆ ಬೆದರಿಕೆ!

Litton Das: ದುರ್ಗಾ ಪೂಜೆಗೆ ಶುಭಕೋರಿ ಸಂಕಷ್ಟಕ್ಕೆ ಸಿಲುಕಿದ ಕ್ರಿಕೆಟರ್​, ಮತಾಂತರವಾಗುವಂತೆ ಬೆದರಿಕೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Litton Das: ಬಾಂಗ್ಲಾದೇಶದ ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಇದೀಗ ಕೇವಲ ಒಂದೇ ಒಂದು ಫೋಟೋ ಹಂಚಿಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಅವರ ವಿರುದ್ಧ ಮತಾಂತರದ ಕೂಗು ಕೇಳಿಬರುತ್ತಿದೆ.

  • Share this:

ಈಗಾಗಲೇ ಭಾರತದ ಎಲ್ಲಡೆ ನವರಾತ್ರಿಯ (Navaratri ) ಹಬ್ಬ ಅದ್ಧೂರಿಯಾಗಿ ಆರಂಭವಾಗಿದೆ. ಎಲ್ಲಾ ಹಿಂದೂಗಳು ಈ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಇದಕ್ಕೆ ಕ್ರೀಡಾ ಲೋಕವೂ ಹೊರತಾಗಿಲ್ಲ. ಆದರೆ ಬಾಂಗ್ಲಾದೇಶದ (Bangladesh) ಹಿಂದೂ ಕ್ರಿಕೆಟಿಗ ಲಿಟನ್ ದಾಸ್ (Litton das) ತಮ್ಮ ಅಭಿಮಾನಿಗಳಿಗೆ ಫೇಸ್‌ಬುಕ್‌ನಲ್ಲಿ (Facebook) ಮಹಾಲಯದ ಶುಭಕೋರಿದ್ದರು.ಇದರಿಂದಾಗಿ ಲಿಟನ್ ದಾಸ್ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ದುರ್ಗಾ ಪೂಜೆಯನ್ನು (Durga Puja) ಅಭಿನಂದಿಸಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದಾದ ನಂತರ ಮೂಲಭೂತವಾದಿಗಳು ಅವರ ಮೇಲೆ ಕೋಪಗೊಂಡು ಧರ್ಮವನ್ನು ಬದಲಾಯಿಸುವಂತೆ ಕೇಳಲು ಪ್ರಾರಂಭಿಸಿದ್ದಾರಂತೆ. ಆದರೆ ಹಿಂದೂ ಧರ್ಮದವರು ಲಿಟನ್ ದಾಸ್ ಫೋಸ್ಟ್​ಗೆ ಬೆಂಬಲ ಸೂಚಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ದುರ್ಗಾ ಪೂಜೆ ಫೋಸ್ಟ್ ಮಾಡಿ ಸಂಕಷ್ಟ್ಕಕೆ ಸಿಲುಕಿದ ಕ್ರಿಕೆಟರ್:


ಹೌದು, ಬಾಂಗ್ಲಾದೇಶದ ಸ್ಟಾರ್​ ಕ್ರಿಕೆಟರ್​ ಲಿಟನ್ ದಾಸ್​ ದುರ್ಗಾ ಪೂಜೆ ಫೋಸ್ಟ್ ಮಾಡಿ ಸಂಕಷ್ಟ್ಕಕೆ ಸಿಲುಕಿದ್ದಾರೆ. ಅವರು ತಮ್ಮ ಅಭಿಮಾನಿಗಳಿಗೆ ದುರ್ಗಾ ಪೂಜೆಯ ಶುಭಾಷಯವನ್ನು ಫೇಸ್​ಬುಕ್​ ಮೂಲಕ ತಿಳಿಸಿದ್ದರು. ಇದಕ್ಕೆ ಇದೀಗ ಅಲ್ಲಿ ವಿರೋಧ ವ್ಯಕ್ತವಾಗುತ್ತಿದೆ.ಇದರೊಂದಿಗೆ ವಿಗ್ರಹ ಪೂಜೆಯನ್ನು ಖಂಡಿಸಿ ಹಿಂದೂ ಧರ್ಮವನ್ನು ಕಾಮೆಂಟ್​ನಲ್ಲಿ ಅವಹೇಳನ ಮಾಡಿದ್ದಾರೆ. ಜೊತೆಗೆ ಲಿಟನ್ ದಾಸ್ ಅವರಿಗೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಹೇಳಲಾಗುತ್ತಿದೆ. ಈ ಎಲ್ಲಾ ಕಾಮೆಂಟ್​ಗಳಿಗೆ ಲಿಟನ್ ದಾಸ್​ ಅವರ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಒಂದೇ ಒಂದು ಫೋಟೋ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.




ಲಿಟನ್ ದಾಸ್ ಪರ ನಿಂತ ಹಲವರು:


ಲಿಟನ್ ದಾಸ್​ ಅವರ ಫೋಸ್ಟ್ ಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದರೆ, ಅನೇಕ ಬಳಕೆದಾರರು ಲಿಟನ್ ದಾಸ್ ಅವರ ಪರವಾಗಿ ಮಾತನಾಡುತ್ತಿದ್ದಾರೆ. ಆದರೆ ಮೂಲಭೂತವಾದಿಗಳು ಲಿಟನ್ ದಾಸ್ ಅವರನ್ನು ನಿರಂತರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಲಿಟನ್ ದಾಸ್ ಅವರು ಬಂಗಾಳಿ ಭಾಷೆಯಲ್ಲಿ 'ಮಹಾಲಯಕ್ಕೆ ಅಭಿನಂದನೆಗಳು. ತಾಯಿ ಬರುತ್ತಿದ್ದಾರೆ‘ ಎಂದು ಬರೆದಿದ್ದಾರೆ. ಲಿಟನ್ ದಾಸ್ ಅವರು ಭಾನುವಾರ (25 ಸೆಪ್ಟೆಂಬರ್) ಮಹಾಲಯದಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮೂರು ದಿನಗಳಲ್ಲಿ ಈ ಪೋಸ್ಟ್‌ಗೆ 47 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದರೆ, 6.3 ಸಾವಿರಕ್ಕೂ ಹೆಚ್ಚು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: IND vs SA: ಗೆದ್ದರೂ ಕೆಟ್ಟ ದಾಖಲೆ ಬರೆದ ಟೀಂ ಇಂಡಿಯಾ, ಅದೂ ಸಹ ಯಾವುದರಲ್ಲಿ ಗೊತ್ತಾ?


ಮಗುವಿನ ವಿಡಿಯೋ ಕೂಡ ವೈರಲ್:


ಈ ಹಿಂದೆ ಈ ಬಾಂಗ್ಲಾದೇಶದ ಹಿಂದೂ ಕ್ರಿಕೆಟಿಗನನ್ನು ಕೃಷ್ಣ ಜನ್ಮಾಷ್ಟಮಿಯಂದು ಟ್ರೋಲ್ ಮಾಡಲಾಗಿತ್ತು. ಈ ವೇಳೆ ಈ ಕ್ರಿಕೆಟಿಗನಿಗೆ ಬೆದರಿಕೆ ಕೂಡ ಬಂದಿತ್ತು. ಆಗ ಮಗುವೊಂದು ತನ್ನ ನೆಚ್ಚಿನ ಬಾಂಗ್ಲಾದೇಶದ ಕ್ರಿಕೆಟಿಗರ ಹೆಸರನ್ನು ಹೇಳುತ್ತಿದ್ದ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು. ನಂತರ ಅವರು ನೆಚ್ಚಿನ ಆಟಗಾರರಲ್ಲಿ ಮಶ್ರಫೆ ಮೊರ್ತಜಾ ಹೆಸರನ್ನು ಹೇಳಿದ್ದರು. ತಸ್ಕಿನ್ ಅಹ್ಮದ್ ಮತ್ತು ಶರೀಫುಲ್ ಅವರನ್ನು ತನ್ನ ನೆಚ್ಚಿನ ಕ್ರಿಕೆಟಿಗರು ಎಂದು ಮಗು ವಿಡಿಯೋದಲ್ಲಿ ಬಣ್ಣಿಸಿತ್ತು. ಈ ಸಂದರ್ಭದಲ್ಲಿ ಮಗುವಿನ ಬಳಿ ಸೌಮ್ಯ ಸರ್ಕಾರ್ ಭೇಟಿಯಾಗುವ ಬಗ್ಗೆ ಕೇಳಿದಾಗ, ಅವನು ಹಿಂದೂ ಆಗಿರುವ ಕಾರಣ ಆತನನ್ನು ಇಷ್ಟಪಡುವುದಿಲ್ಲ ಮತ್ತು ಭೇಟಿಯಾಗಲು ಬಯಸುವುದಿಲ್ಲ ಎಂದು ಹೇಳಿತ್ತು.



ಲಿಟನ್ ದಾಸ್ ವೃತ್ತಿಜೀವನ:


ಲಿಟನ್ ದಾಸ್ ಇದುವರೆಗೆ 35 ಟೆಸ್ಟ್, 57 ಏಕದಿನ ಪಂದ್ಯಗಳನ್ನು ಆಡಿದ್ದಾರೆ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಲಿಟನ್ ದಾಸ್ ಮತ್ತು ಆಲ್‌ರೌಂಡರ್ ಸೌಮ್ಯ ಸರ್ಕಾರ್ ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಆಡುವ ಸಾಮಾನ್ಯ ಅಂತರರಾಷ್ಟ್ರೀಯ ಆಟಗಾರರಲ್ಲಿ ಸೇರಿದ್ದಾರೆ. ಲಿಟನ್ ದಾಸ್ ಅವರು ಮುಂದಿನ ತಿಂಗಳು ಅಂದರೆ ಅಕ್ಟೋಬರ್ 13 ರಂದು 28 ನೇ ವರ್ಷಕ್ಕೆ ಕಾಲಿಡುತ್ತಾರೆ. ಬಾಂಗ್ಲಾದೇಶ ಪರ ಇದುವರೆಗೆ 35 ಟೆಸ್ಟ್, 57 ODI ಮತ್ತು 55 T20 ಪಂದ್ಯಗಳನ್ನು ಆಡಿದ್ದಾರೆ. ಸೌಮ್ಯ ಸರ್ಕಾರ್ 16 ಟೆಸ್ಟ್, 61 ಏಕದಿನ ಮತ್ತು 66 ಟಿ20 ಪಂದ್ಯಗಳನ್ನು ಆಡಿದ್ದಾರೆ.

Published by:shrikrishna bhat
First published: