ಪ್ರಸ್ತುತ ಭಾರತ ಮತ್ತು ಬಾಂಗ್ಲಾದೇಶ (IND vs BAN Test) ನಡುವಿನ ಟೆಸ್ಟ್ ಸರಣಿ ನಡೆಯುತ್ತಿದೆ. ಏತನ್ಮಧ್ಯೆ, ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ (Sony Sports Network) ಭಾರತದ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಸಂದರ್ಶನದ ವೀಡಿಯೊವನ್ನು ಹಂಚಿಕೊಂಡಿದೆ. ಬಾಂಗ್ಲಾದೇಶದ ಕೋಚ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಅಲನ್ ಡೊನಾಲ್ಡ್. ಅವರು 25 ವರ್ಷಗಳ ಹಿಂದೆ ರಾಹುಲ್ ದ್ರಾವಿಡ್ ಅವರ ಅನುಚಿತ ವರ್ತನೆಗಾಗಿ ಕ್ಷಮೆಯಾಚಿಸಿದ್ದಾರೆ. ಅಲನ್ ಡೊನಾಲ್ಡ್ ದಕ್ಷಿಣ ಆಫ್ರಿಕಾದ ಆಕ್ರಮಣಕಾರಿ ಆಟಗಾರರಲ್ಲಿ ಒಬ್ಬರು. ಅವರ ವೇಗದ ಬೌಲಿಂಗ್‌ನ ಹೊರತಾಗಿ, ಅವರು ತಮ್ಮ ಸ್ಲೆಡ್ಜಿಂಗ್‌ನಿಂದ ಪ್ರತಿಸ್ಪರ್ಧಿ ತಂಡದ ಆಟಗಾರರಿಗೆ ತೊಂದರೆ ನೀಡುತ್ತಿದ್ದರು. ಇದೀಗ 25 ವರ್ಷಗಳ ಬಳಿಕ ರಾಹುಲ್ ದ್ರಾವಿಡ್ ಬಳಿ ಸ್ಲೆಡ್ಜಿಂಗ್ ಮಾಡಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ರಾಹುಲ್ ದ್ರಾವಿಡ್ ಕೂಡ ಪ್ರತಿಕ್ರಿಯಿಸಿದ್ದಾರೆ.
ದ್ರಾವಿಡ್ ಬಳಿ ಕ್ಷಮೆಯಾಚಿಸಿದ ಕೋಚ್:
ಭಾರತದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ 1997ರಲ್ಲಿ ಡರ್ಬನ್‌ನಲ್ಲಿ ನಡೆದ ODI ನಲ್ಲಿ ಅಲನ್ ಡೊನಾಲ್ಡ್ ಅವರ ವೇಗದ ಬೌಲಿಂಗ್ ಮತ್ತು ಸ್ಲೆಡ್ಜಿಂಗ್ ಅನ್ನು ಎದುರಿಸಿದರು. ಇದೀಗ, ಎರಡು ದಶಕಗಳ ನಂತರ, ಪ್ರಸ್ತುತ ಬಾಂಗ್ಲಾದೇಶದ ಕೋಚ್ ಆಗಿರುವ ಅಲನ್ ಡೊನಾಲ್ಡ್ ಅವರು ದ್ರಾವಿಡ್ ಜೊತೆಗಿನ ಅನುಚಿತ ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಡೊನಾಲ್ಡ್ ಅವರು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಸಹ ಭೋಜನಕ್ಕೆ ಆಹ್ವಾನಿಸಿದ್ದಾರೆ.
𝐒𝐩𝐨𝐫𝐭𝐬𝐦𝐚𝐧𝐬𝐡𝐢𝐩 𝐚𝐭 𝐢𝐭𝐬 𝐛𝐞𝐬𝐭! 🤝
📹 | Bangladesh's bowling coach Allan Donald sends out a special message to India's head coach Rahul Dravid 💙
P.S. The end will certainly bring a smile to your face 😄#AllanDonald #RahulDravid #SonySportsNetwork pic.twitter.com/UgYy5QGf5e
— Sony Sports Network (@SonySportsNetwk) December 14, 2022
ವಿಡಿಯೋ ನೋಡಿದ ದ್ರಾವಿಡ್:
ಸಂದರ್ಶನದ ವೇಳೆ ಅಲನ್ ಡೊನಾಲ್ಡ್ ಕ್ಷಮೆಯಾಚನೆಯ ವಿಡಿಯೋವನ್ನು ರಾಹುಲ್ ದ್ರಾವಿಡ್ ಅವರಿಗೆ ತೋರಿಸಲಾಯಿತು. ಅಲನ್ ಡೊನಾಲ್ಡ್ ಅವರ ಔತಣಕೂಟದ ಆಹ್ವಾನಕ್ಕೆ ಪ್ರತಿಕ್ರಿಯಿಸಿದ ರಾಹುಲ್ ದ್ರಾವಿಡ್ ಅವರು ನಗುತ್ತಲೇ, 'ಖಂಡಿತ, ನಾನು ಸಿದ್ಧನಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: Rohit Sharma: ಟೀಂ ಇಂಡಿಯಾಗೆ ಭರ್ಜರಿ ಗುಡ್ ನ್ಯೂಸ್, ರೋಹಿತ್ ಇಂಜುರಿ ಬಗ್ಗೆ ಹೊರಬಿತ್ತು ಬಿಗ್ ಅಪ್‌ಡೇಟ್
ರಾಹುಲ್ ದ್ರಾವಿಡ್ ಮತ್ತು ಡೊನಾಲ್ಡ್ ಪ್ರಸ್ತುತ ಭಾರತ ಮತ್ತು ಬಾಂಗ್ಲಾದೇಶದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾರೆ. ಇಬ್ಬರೂ ತಮ್ಮ ತಮ್ಮ ತಂಡಗಳೊಂದಿಗೆ ಮೊದಲ ಟೆಸ್ಟ್ ಪಂದ್ಯದ ಸ್ಥಳದಲ್ಲಿದ್ದಾರೆ. ಪ್ರಸ್ತುತ ಟೆಸ್ಟ್ ಸರಣಿ ಭಾರತಕ್ಕೆ ಮಹತ್ವದ್ದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಲು ಭಾರತ ಈ ಟೆಸ್ಟ್ ಸರಣಿಯ ಜೊತೆಗೆ ಇತರ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ