ಈ ಸಲ ಕಪ್ ನಮ್ದೆ: ಪ್ರೋ ಕಬ್ಬಡಿಯಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್

ಇನ್ನೇನು ಪಂದ್ಯ ಮುಗಿಯಲಿದೆ ಎನ್ನುವಷ್ಟರಲ್ಲಿ ಉಭಯ ತಂಡಗಳು 29-29ರಿಂದ ಸಮಬಲ ಸಾಧಿಸಿದ್ದು ಮತ್ತಷ್ಟು ರೋಚಕತೆಗೆ ಸಾಕ್ಷಿಯಾಯಿತು.

zahir | news18
Updated:January 6, 2019, 3:00 PM IST
ಈ ಸಲ ಕಪ್ ನಮ್ದೆ: ಪ್ರೋ ಕಬ್ಬಡಿಯಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್
ಬೆಂಗಳೂರು ಬುಲ್ಸ್
  • News18
  • Last Updated: January 6, 2019, 3:00 PM IST
  • Share this:
ಮುಂಬೈ: ಈ ಬಾರಿಯ ಪ್ರೋ ಕಬ್ಬಡಿ ಫೈನಲ್​ನಲ್ಲಿ ಬೆಂಗಳೂರು ಬುಲ್ಸ್​ ಚಾಂಪಿಯನ್​ ಆಗಿ ಹೊರ ಹೊಮ್ಮಿದೆ. ಅಂತಿಮ ಹಣಾಹಣಿಯಲ್ಲಿ ಗುಜರಾತ್​ ಫಾರ್ಚೂನ್ ಜೈಂಟ್ಸ್​ ತಂಡವನ್ನು 38-33 ಅಂಕಗಳ ಅಂತರದಲ್ಲಿ ಮಣಿಸಿದ ಬೆಂಗಳೂರು ಬುಲ್ಸ್ ತಂಡ​ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.

ಇಂದು ಎನ್‍ಎಸ್‍ಸಿಐ ಕ್ರೀಡಾಂಗಣದಲ್ಲಿ ನಡೆದ ರೋಚಕ ಕಾದಾಟದಲ್ಲಿ ಸ್ಟಾರ್‌ ರೈಡರ್‌ ಪವನ್‌ ಶೆಹ್ರಾವತ್‌ ಅವರು ಭರ್ಜರಿ ಹೋರಾಟ ನಡೆಸಿದ್ದರು. ಇದರ ಫಲವಾಗಿ ಬೆಂಗಳೂರು ತಂಡವು ಗುಜರಾತ್​ ಅನ್ನು 05 ಪಾಯಿಂಟ್​ಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು.

6ನೇ ಆವೃತಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ ಉತ್ತಮ ಆಟವಾಡಿದ್ದ ಪ್ರದರ್ಶಿಸಿದ್ದ ಬೆಂಗಳೂರು ಬುಲ್ಸ್ ತಂಡ 22ರಲ್ಲಿ 13 ಗೆಲುವು ದಾಖಲಿಸಿದೆ. ಅದರಲ್ಲೂ ಫೈನಲ್​ನಲ್ಲಿ ಬೆಂಗಳೂರು ತಂಡದ ಒಟ್ಟು  38 ಅಂಕಗಳಲ್ಲಿ 22 ಅಂಕಗಳನ್ನು ಪವನ್ ಒಬ್ಬರೇ ಗಳಿಸಿದ್ದು ವಿಶೇಷವಾಗಿತ್ತು.

ಸಮಬಲದಿಂದ ಕೂಡಿದ್ದ ಈ ಪಂದ್ಯಾಟದಲ್ಲಿ ಆರಂಭದಲ್ಲಿ ಎರಡು ತಂಡದ ಆಟಗಾರರು ಉತ್ತಮ ಹೋರಾಟ ನಡೆಸಿದ್ದರು. ಆದರೆ ಮಿಂಚಿನ ವೇಗ ಮತ್ತು ಚುರುಕಿನ ಚಲನೆಯ ಮೂಲಕ ಬೆಂಗಳೂರು ತಂಡದ ಪವನ್‌, ರೋಹಿತ್‌ ಗುಜರಾತ್ ಆಟಗಾರರನ್ನು ಹೆಚ್ಚು ಬಾರಿ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಚೊಚ್ಚಲ ಬಾರಿ ಪ್ರಶಸ್ತಿಗೆ ಮುತ್ತಿಕ್ಕಲು ಸಾಧ್ಯವಾಯಿತು.

ಮೊದಲಾರ್ಧದ ಪರಾಕ್ರಮದಲ್ಲಿ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ ಗುಜರಾತ್ ತಂಡ, ಮೊದಲ ಸುತ್ತಿನ ಆಟ ಮುಗಿಯಲು ಎರಡು ನಿಮಿಷ ಬಾಕಿ ಇದ್ದಾಗ ಸೂಪರ್‌ ರೇಡ್​ನಲ್ಲಿ ಬುಲ್ಸ್​ ಆವರಣವನ್ನು ಖಾಲಿ ಮಾಡಿದ್ದರು. ಈ ಮೂಲಕ ಪ್ರಪಾಂಜನ್​ ಗುಜರಾತ್‌ಗೆ 15-9ರ ಮುನ್ನಡೆ ತಂದುಕೊಟ್ಟಿದ್ದರು.

ಆದರೆ ದ್ವಿತೀಯಾರ್ಧದಲ್ಲಿ ಕೋರ್ಟ್​ನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ ಪವನ್​ ಮತ್ತು ಬೆಂಗಳೂರು ತಂಡದ ಆಟಗಾರರು ಸತತ ಎರಡು ಟ್ಯಾಕಲ್‌ ಪಾಯಿಂಟ್ಸ್‌ ಕಲೆಹಾಕುವಲ್ಲಿ ಯಶಸ್ಸು ಕಂಡರು. ಅಭಿಮಾನಿಗಳ ಕೇಕೆಯಿಂದ ಹುರಿದುಂಬಿದ ಪವನ್ ನಿರಂತರ ರೇಡ್​ಮೂಲಕ ಪಾಯಿಂಟ್​ಗಳನ್ನು ಸಂಪಾದಿಸಿದರು.

31 ನೇ ನಿಮಿಷದಲ್ಲಿ ಎದುರಾಳಿಗಳನ್ನು ಆಲೌಟ್‌ ಮಾಡಿದ ಬೆಂಗಳೂರು ಬುಲ್ಸ್​ ಬೋನಸ್‌ ಸೇರಿದಂತೆ ಒಟ್ಟು ಮೂರು ಪಾಯಿಂಟ್ಸ್‌ ಕಲೆಹಾಕಿತ್ತು. ಈ ಸಂದರ್ಭದಲ್ಲಿ ಎರಡು ತಂಡಗಳ ಪಾಯಿಂಟ್ ಅಂತರ 23-22 ಕ್ಕೆ ಇಳಿದಿತ್ತು. ಪಂದ್ಯದ ಅಂತಿಮ ಘಟ್ಟದಲ್ಲಿ ಸೂಪರ್ ರೇಡ್ ಮೂಲಕ ಮೂಲಕ ಗುಜರಾತ್ ತಂಡದ ರೋಹಿತ್ ತಂಡಕ್ಕೆ​ 27-25ರ ಮುನ್ನಡೆ ತಂದುಕೊಟ್ಟರು.ಇನ್ನೇನು ಪಂದ್ಯ ಮುಗಿಯಲಿದೆ ಎನ್ನುವಷ್ಟರಲ್ಲಿ ಉಭಯ ತಂಡಗಳು 29-29ರಿಂದ ಸಮಬಲ ಸಾಧಿಸಿದ್ದು ಮತ್ತಷ್ಟು ರೋಚಕತೆಗೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಅಸಲಿ ಆಟ ಪ್ರದರ್ಶಿಸಿದ ಬುಲ್ಸ್​ ತಂಡದ ಪವನ್ ತೂಫಾನಿ ರೇಡ್​ ಮೂಲಕ ಕ್ರೀಡಾಂಗಣದಲ್ಲಿ ಅಲೆಯೆಬ್ಬಿಸಿದ್ದರು. ಕೊನೆಯ 5 ನಿಮಿಷಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿದ ಬೆಂಗಳೂರು ತಂಡದ ಆಟಗಾರರು ಗುಜರಾತ್​ನ್ನು ಆಲೌಟ್ ಮಾಡಿ 36-29 ಮುನ್ನಡೆ ಕಾಯ್ದುಕೊಂಡರು.

ಕೊನೆಯ ನಿಮಿಷಗಳಲ್ಲಿ ಪಾಯಿಂಟ್​ ಕಳೆದುಕೊಳ್ಳದಂತೆ ಎಚ್ಚರ ವಹಿಸಿದ ಬೆಂಗಳೂರು ತಂಡದ ಆಟಗಾರರು ಗುಜರಾತ್​ ಅನ್ನು  38-33 ಅಂಕಗಳ ಅಂತರದಲ್ಲಿ ಮಣಿಸುವಲ್ಲಿ ಯಶಸ್ವಿಯಾದರು.

First published: January 5, 2019, 10:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading