ಕಳೆದ ಎರಡು ವಾರಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಾರತೀಯ ಹಾಕಿ ಲೆಜೆಂಡ್ ಬಲ್ಬೀರ್ ಸಿಂಗ್ ಕೊನೆಯುಸಿರೆಳೆದಿದ್ದಾರೆ. ಮೂರು ಬಾರಿಯ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಚಂಡೀಘಡದ ಆಸ್ಪತ್ರೆಯಲ್ಲ ಇಂದು ಬೆಳಿಗ್ಗೆ 6.30 ರ ಸುಮಾರಿಗೆ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಮೇ 12ರಂದು ಅವರಿಗೆ ಹೃದಯಸ್ತಂಭನವಾಗಿತ್ತು. ಅಂದು ತಡರಾತ್ರಿ ಮತ್ತೆ ಹೃದಯ ತೊಂದರೆ ತೀವ್ರಗೊಂಡಿತ್ತು. ಆದರೆ, ಬಲ್ಬೀರ್ ಸಿಂಗ್ ಅವರು ಇಂದು ಮುಂಜಾನೆ 6.30 ಸಮಯದಲ್ಲಿ ಅಗಲಿದ್ದಾರೆ ಎಂದು ಮೊಹಾಲಿಯ ಆಸ್ಪತ್ರೆಯ ವೈದ್ಯ ಅಭಿಜಿತ್ ಸಿಂಗ್ ಹೇಳಿದ್ದಾರೆ.
ಮೈದಾನಕ್ಕಿಳಿದು ಅಭ್ಯಾಸ ನಡೆಸಿದ ಟೀಂ ಇಂಡಿಯಾ ಆಟಗಾರನ ಮೇಲೆ ಬಿಸಿಸಿಐ ಗರಂ
ಒಲಿಂಪಿಕ್ ಫೈನಲ್ ಪಂದ್ಯದಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಎಂಬ ಬಲ್ಬೀರ್ ಅವರ ದಾಖಲೆ ಇನ್ನೂ ಯಾರೂ ಮುರಿಯಲಾಗಿಲ್ಲ. ಭಾರತದ ಶ್ರೇಷ್ಠ ಕ್ರೀಡಾಳುಗಳಲ್ಲಿ ಒಬ್ಬರಾಗಿರುವ ಬಲ್ಬೀರ್ ಸಿಂಗ್, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಆಧುನಿಕ ಒಲಿಂಪಿಕ್ ಇತಿಹಾಸದ ವಿಶ್ವದ 16 ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಗೌರವ ಪಡೆದಿರುವ ಏಕೈಕ ಭಾರತೀಯ ಬಲ್ಬೀರ್ ಸಿಂಗ್ ಸೀನಿಯರ್.
ಅಲ್ಲದೆ 1948, 1952 ಹಾಗೂ 1956ರ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡಕ್ಕೆ ಚಿನ್ನದ ಪದಕ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1952ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ನೆದರ್ಲೆಂಡ್ ವಿರುದ್ಧ ಐದು ಗೋಲು ಬಾರಿಸಿ ಭಾರತವನ್ನು 6-1ರಿಂದ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಟಿ20 ವಿಶ್ವಕಪ್ಗೆ ಕೊಹ್ಲಿ ಅಲ್ಲ ರೋಹಿತ್ ಕ್ಯಾಪ್ಟನ್; ಟೀಂ ಇಂಡಿಯಾದಲ್ಲಿ ಆಗಲಿದೆ ಭಾರೀ ಬದಲಾವಣೆ?
ಭಾರತ ಗೆದ್ದ ಏಕೈಕ ವಿಶ್ವಕಪ್ ತಂಡದ ಮ್ಯಾನೇಜರ್ ಹಾಗೂ ಹಾಕಿ ಒಲಿಂಪಿಕ್ಸ್ ಫೈನಲ್ನಲ್ಲಿ ಹೆಚ್ಚು ಗೋಲು(5) ಗಳಿಸಿದ ದಾಖಲೆ ಹೊಂದಿರುವ ಬಲ್ಬೀರ್ ಸಿಂಗ್ಗೆ 1957ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ