Bajrang Punia: ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ 6ನೇ ಪದಕ: ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಭಜರಂಗ್ ಪೂನಿಯಾ

Bajrang Punia Won Bronze Medal: 65 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ಭಜರಂಗ್​ ಪೂನಿಯಾ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಜರಂಗ ಪೂನಿಯಾ ಮೂಲಕ ಭಾರತಕ್ಕೆ 6ನೇ ಪದಕ ದಕ್ಕಿದೆ.

ಭಜರಂಗ ಪೂನಿಯಾ

ಭಜರಂಗ ಪೂನಿಯಾ

  • Share this:
    ಟೊಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಇಂದು 6ನೇ ಮೆಡಲ್​​ ಭಾರತದ ಪಾಲಾಗಿದೆ. 65 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ಭಜರಂಗ್​ ಪೂನಿಯಾ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಜಕಿಸ್ತಾನದ ದುಲೆಟ್​​ ನಿಯಾಜ್​ಬೆವ್​​(Daulet Niyazbekov) ಅವರನ್ನು 8-0 ಅಂತರದಲ್ಲಿ ಸೋಲಿಸುವ ಮೂಲಕ ಪೂನಿಯಾ ರೋಚಕ ಗೆಲುವು ದಾಖಲಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟರು. 27 ವರ್ಷದ ಕುಸ್ತಿಪಟು ಭಜರಂಗ ಪೂನಿಯಾ ಆಟ ಶುರುವಾದಗಿನಿಂದ ಆಕ್ರಮಣಾಕಾರಿ ಆಟವನ್ನು ಪ್ರದರ್ಶಿಸಿ ಭರ್ಜರಿ ಗೆಲುವು ದಾಖಲಿಸಿದರು.

    ಭಜರಂಗ ಪೂನಿಯಾ ಮೂಲಕ ಭಾರತಕ್ಕೆ 6ನೇ ಪದಕ ದಕ್ಕಿದೆ. ಆ ಮೂಲಕ ಒಲಿಂಪಿಕ್​​ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಪದಕವೀರ ಪೂನಿಯಾಗೆ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಅಭಿನಂದನೆ ತಿಳಿಸಿದ್ದಾರೆ.





    ನಿನ್ನೆ 57 ಕೆಜಿ ಕುಸ್ತಿ ವಿಭಾಗದಲ್ಲಿ ರವಿ ದಹಿಯಾ ಬೆಳ್ಳಿಯ ಪದಕವನ್ನು ಗೆದ್ದಿದ್ದರು. ಫೈನಲ್​ ಪಂದ್ಯದಲ್ಲಿ ರಷ್ಯಾದ ಝುವರ್​​​ ಉಗ್ವೆ( Zavur Uguev ) ವಿರುದ್ಧ ಸೋಲು ಕಂಡಿದ್ದು, ಆ ಮೂಲಕ ಬೆಳ್ಳಿ ಪದಕಕ್ಕೆ ಅರ್ಹರಾಗಿದ್ದರು. 57 ಕೆಜಿ ವಿಭಾಗದಲ್ಲಿ 2ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

    ಆ.5ರಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ 5-4 ಗೋಲುಗಳ ಅಂತರದಿಂದ ರೋಚಕ ರೀತಿಯಲ್ಲಿ ಸೋಲಿಸಿ ಕಂಚಿನ ಪದಕ ಪಡೆಯಿತು. 1980ರ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಬಳಿಕ ಭಾರತ ಹಾಕಿ ತಂಡ ಒಲಿಂಪಿಕ್​ನಲ್ಲಿ ಗಿಟ್ಟಿಸಿರುವ ಮೊದಲ ಪದಕ ಇದಾಗಿದೆ. ಭಾರತದ ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ (Lovlina Borgohain) ಅವರು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

    ಆ.4ರಂದು ನಡೆದ ಪದ್ಯದಲ್ಲಿ ಪಿ.ವಿ.ಸಿಂಧು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಒಲಿಂಪಿಕ್ಸ್​​​ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ. ಬ್ಯಾಡ್ಮಿಂಟನ್​​ ಮಹಿಳಾ ಸಿಂಗಲ್​ ವಿಭಾಗದಲ್ಲಿ ಚೀನಾದ ಹಿ ಬಿಂಗ್​ಜಿಯೋ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಸಿಂಧು ಮುತ್ತಿಟ್ಟಿದ್ದಾರೆ. ಮಹಿಳಾ  ಸಿಂಗಲ್ಸ್​​ ಬ್ಯಾಡ್ಮಿಂಟನ್​ ನಲ್ಲಿ ಚೀನಾ ಆಟಗಾರ್ತಿಯನ್ನು 21-13, 21-15 ನೇರ ಸೆಟ್​​ಗಳಿಂದ ಮಣಿಸುವ ಮೂಲಕ ಕಂಚಿನ ಪದಕವನ್ನು ಸಿಂಧು ತಮ್ಮದಾಗಿಸಿಕೊಂಡರು. ಪಿ.ವಿ.ಸಿಂಧು ಒಲಿಂಪಿಕ್ಸ್​ನಲ್ಲಿ 2ನೇ ಬಾರಿ ಪದಕ ಗೆಲ್ಲುವ ಮೂಲಕ ಹೊಸ ಸಾಧನೆಗೆ ಪಾತ್ರರಾಗಿದ್ದಾರೆ. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್​​ನಲ್ಲಿ ಸಿಂಧು ಬೆಳ್ಳಿ ಪದಕವನ್ನು ಗೆದ್ದಿದ್ದರು. ಈಗ ಕಂಚಿನ ಪದಕದೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

    ಜುಲೈ 24ರಂದು ಭಾರತ ಒಲಿಂಪಿಕ್ಸ್​ನಲ್ಲಿ ಮೊದಲ ಪದಕವನ್ನು ತನ್ನದಾಗಿಸಿಕೊಂಡಿತ್ತು. ವೇಯ್ಟ್​​ ಲಿಫ್ಟಿಂಗ್​ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
    Published by:Kavya V
    First published: