ಮೌನ ಮುರಿದ ಕಾರ್ತಿಕ್; ಸಿಂಗಲ್ ರನ್ ನಿರಾಕರಿಸಿದ ಬಗ್ಗೆ ಸ್ಪಷ್ಟನೆ ನೀಡಿದ ಡಿಕೆ

ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ದಿನೇಶ್ ಕಾರ್ತಿಕ್ ಎಂದು ಹೇಳಲಾಗುತ್ತಿತ್ತು. ಕೊನೆಯ ಓವರ್​ನ ಮೂರನೇ ಎಸೆತದಲ್ಲಿ 1 ರನ್ ಕಲೆಹಾಕುವ ಅವಕಾಶವಿದ್ದರು ಕ್ರುನಾಲ್ ಪಾಂಡ್ಯಗೆ ಬ್ಯಾಟಿಂಗ್ ಕೊಡದೆ ತಾವೇ ಮುಂದಿನ ಬಾಲ್ ಎದುರಿಸಲು ಕಾರ್ತಿಕ್ ಸಿದ್ಧರಾದರು. ಆದರೆ, ಕಾರ್ತಿಕ್​​ಗೆ ಪಂದ್ಯ ಗೆಲ್ಲಿಸಿ ಕೊಡಲು ಸಾಧ್ಯವಾಗಿಲ್ಲ.

Vinay Bhat | news18
Updated:February 14, 2019, 2:22 PM IST
ಮೌನ ಮುರಿದ ಕಾರ್ತಿಕ್; ಸಿಂಗಲ್ ರನ್ ನಿರಾಕರಿಸಿದ ಬಗ್ಗೆ ಸ್ಪಷ್ಟನೆ ನೀಡಿದ ಡಿಕೆ
ದಿನೇಶ್ ಕಾರ್ತಿಕ್
  • News18
  • Last Updated: February 14, 2019, 2:22 PM IST
  • Share this:
ಭಾರತ-ನ್ಯೂಜಿಲೆಂಡ್ ನಡುವಣ ಮೂರನೇ ಟಿ-20 ಪಂದ್ಯದಲ್ಲಿ ಭಾರತ 4 ರನ್​ಗಳ ಸೋಲುಕಂಡಿತು. ಈ ಮೂಲಕ ಕಿವೀಸ್ ನೆಲದಲ್ಲಿ ಐತಿಹಾಸಿಕ ಗೆಲುವನ್ನು ಸಂಭ್ರಮಿಸುವ ಟೀಂ ಇಂಡಿಯಾ ಆಟಗಾರರ ಕನಸು ಕನಸಾಗಿಯೆ ಉಳಿಯುವಂತಾಯಿತು.

ಈ ಮಧ್ಯೆ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ದಿನೇಶ್ ಕಾರ್ತಿಕ್ ಎಂದು ಹೇಳಲಾಗುತ್ತಿತ್ತು. ಕೊನೆಯ ಓವರ್​ನ ಮೂರನೇ ಎಸೆತದಲ್ಲಿ 1 ರನ್ ಕಲೆಹಾಕುವ ಅವಕಾಶವಿದ್ದರು ಕ್ರುನಾಲ್ ಪಾಂಡ್ಯಗೆ ಬ್ಯಾಟಿಂಗ್ ಕೊಡದೆ ತಾವೇ ಮುಂದಿನ ಬಾಲ್ ಎದುರಿಸಲು ಕಾರ್ತಿಕ್ ಸಿದ್ಧರಾದರು. ಆದರೆ, ಕಾರ್ತಿಕ್​​ಗೆ ಪಂದ್ಯ ಗೆಲ್ಲಿಸಿ ಕೊಡಲು ಸಾಧ್ಯವಾಗಿಲ್ಲ.

ಹೀಗಾಗಿ ಕಾರ್ತಿಕ್​​ ವಿರುದ್ಧ ಟ್ವಿಟ್ಟರ್​​ನಲ್ಲಿ ಅಭಿಮಾನಿಗಳು ಆಕ್ರೋಶಭರಿತವಾಗಿ ಕಮೆಂಟ್ ಮಾಡಿದ್ದರು. ಅದರಲ್ಲು ಕೊನೆಯ ಬಾಲ್​ಗೆ ಮ್ಯಾಚ್ ಫಿನಿಶ್ ಮಾಡಲು ನೀವೇನು ಎಂ ಎಸ್ ಧೋನಿ ಎಂದುಕೊಂಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಟೀಂ ಇಂಡಿಯಾದಿಂದ ಇಂತಹ ಆಟಗಾರನನ್ನು ಹೊರಗಿಡಿ ಸೇರಿದಂತೆ ಅನೇಕ ನೆಗಟಿವ್ ಕಮೆಂಟ್​ಗಳು ಬಂದಿದ್ದವು.

ಇದನ್ನೂ ಓದಿ: 'ಮ್ಯಾಚ್ ಫಿನಿಶ್ ಮಾಡಲು ನೀವೆನು ಎಂ ಎಸ್ ಧೋನಿಯೇ?'; ಕಾರ್ತಿಕ್​ರನ್ನು ದೂರುವುದು ಎಷ್ಟು ಸರಿ?

ಸದ್ಯ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾರ್ತಿಕ್, 'ನಾನು ಹಾಗೂ ಕೃನಾಲ್ ಪಾಂಡ್ಯ ಉತ್ತಮವಾಗಿಯೇ ಬ್ಯಾಟ್ ಬೀಸುತ್ತಿದ್ದೆವು. ಅವತ್ತು ನನಗೆ ಸಿಕ್ಸರ್​​ ಭಾರಿಸುವ ಆತ್ಮವಿಶ್ವಾಸವಿತ್ತು. ಅದಕ್ಕಾಗಿ ಸಿಂಗಲ್ ರನ್ ಪಡೆಯಲು ನಿರಾಕರಿಸಿ, ಕೃನಾಲ್​​ಗೆ ಮತ್ತೆ ಕ್ರೀಸ್​​ಗೆ ಹೋಗುವಂತೆ ಹೇಳಿದೆ' ಎಂದಿದ್ದಾರೆ.

ಇದನ್ನೂ ಓದಿ: ನಮ್ಮ ತಂಡ ಬಲಿಷ್ಠವಾಗಿದೆ, ವಿಶ್ವಕಪ್​​ನಲ್ಲಿ ಭಾರತವನ್ನು ಸೋಲಿಸುವುದೆ ಗುರಿ: ಪಾಕ್​​ ಮಾಜಿ ನಾಯಕ

'ಅಂತೆಯೆ ಕೆಲವು ಬಾರಿ ನಾವು ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಆವೇಳೆ ಟಿಮ್ ಸೌಧಿ ಅವರು ಒತ್ತಡದ ನಡುವೆಯು ಅದ್ಭುತ ಬೌಲಿಂಗ್ ಮಾಡಿದರು. ಅವರಿಂದ ಸಣ್ಣ ತಪ್ಪಾಗಿದ್ದರು ಗೆಲುವು ನಮಗಾಗುತ್ತಿತ್ತು. ಇಲ್ಲಿ ಬೌಲರ್ ಮೇಲುಗೈ ಸಾಧಿಸಿದರು' ಎಂದಿದ್ದಾರೆ.
First published:February 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading