• Home
  • »
  • News
  • »
  • sports
  • »
  • T20 World Cup: ಬಾಬರ್​ ಮಾಡಿದ್ದ ತಪ್ಪನ್ನೇ ಮಾಡ್ತಿದ್ದಾನೆ, ನಾಯಕತ್ವ ಬಿಟ್ಟು ಕೊಡಲಿ ಎಂದ ಪಾಕ್​ ಮಾಜಿ ಕ್ಯಾಪ್ಟನ್​!

T20 World Cup: ಬಾಬರ್​ ಮಾಡಿದ್ದ ತಪ್ಪನ್ನೇ ಮಾಡ್ತಿದ್ದಾನೆ, ನಾಯಕತ್ವ ಬಿಟ್ಟು ಕೊಡಲಿ ಎಂದ ಪಾಕ್​ ಮಾಜಿ ಕ್ಯಾಪ್ಟನ್​!

ಬಾಬರ್​ ಅಜಮ್​

ಬಾಬರ್​ ಅಜಮ್​

ಮೊಹಮ್ಮದ್ ಹಫೀಜ್ ಅವರು ಬಾಬರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಮತ್ತೊಬ್ಬ ಪಾಕ್ ಮಾಜಿ ನಾಯಕ ಬಾಬರ್ ಅವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ ನೋಡಿ.

  • Share this:

ಕಳೆದ ಭಾನುವಾರ ಮೆಲ್ಬೋರ್ನ್ (Malborne) ಕ್ರಿಕೆಟ್ ಮೈದಾನದಲ್ಲಿ ನಡೆದ 2022 ರ ಟ್ವೆಂಟಿ20 ವಿಶ್ವಕಪ್ (T20 World Cup) ಪಂದ್ಯವೊಂದರಲ್ಲಿ ಪಾಕಿಸ್ತಾನ (Pakistan) ಕ್ರಿಕೆಟ್ ತಂಡವನ್ನು ಭಾರತ ಕ್ರಿಕೆಟ್ ತಂಡ (Team India) ವು ನಾಲ್ಕು ವಿಕೆಟ್ ಗಳಿಂದ ಸೋಲಿಸಿದ್ದು ನಮಗೆಲ್ಲಾ ಗೊತ್ತೇ ಇದೆ. ಈ ವಿಶ್ವಕಪ್ ಪಂದ್ಯದ ನಂತರ ಅಮೋಘ ಆಟಕ್ಕಾಗಿ ವಿರಾಟ್ ಕೊಹ್ಲಿ (Virat Kohli) ಅವರನ್ನು ಸಾಮಾಜಿಕ ಮಾಧ್ಯಮ (Social Media) ಗಳಲ್ಲಿ ಸಾಕಷ್ಟು ಪ್ರಶಂಸೆ ಮಾಡಲಾಗುತ್ತಿದೆ ಅಂತ ಹೇಳಬಹುದು. ಇತ್ತ ಭಾರತದ ವಿರುದ್ಧ ಗೆಲ್ಲಬೇಕಾದ ಪಂದ್ಯವನ್ನು ಸೋತಿದ್ದಾರೆ ಎಂದು ಪಾಕ್ ನ ಮಾಜಿ ಆಟಗಾರರು ನಾಯಕ ಬಾಬರ್ ಅಜಮ್ (Babar Azam) ಮೇಲೆ ಫುಲ್ ಗರಂ ಆಗಿದ್ದಾರೆ.


ಸೋಮವಾರ ಮಾಜಿ ಆಟಗಾರ ಮೊಹಮ್ಮದ್ ಹಫೀಜ್ ಅವರು ಬಾಬರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಮತ್ತೊಬ್ಬ ಪಾಕ್ ಮಾಜಿ ನಾಯಕ ಬಾಬರ್ ಅವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ ನೋಡಿ.


ರೋಚಕ ಅಂತ್ಯ ಕಂಡಿತ್ತು ಭಾನುವಾರದ ಪಂದ್ಯ


ಭಾನುವಾರ ನಡೆದ ವಿಶ್ವಕಪ್ ಪಂದ್ಯದ ಎರಡನೇ ಇನ್ನಿಂಗ್ಸ್ ನ ಮೊದಲ 10 ಓವರ್ ಗಳವರೆಗೂ ಪಾಕಿಸ್ತಾನವು ಪಂದ್ಯವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿತ್ತು. ಆದರೆ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ನಂತರ ವೇಗವಾಗಿ ರನ್ ಗಳನ್ನು ಸೇರಿಸಲು ಶುರು ಮಾಡಿದರು. ಅದರ ನಂತರ ಪ್ರತಿ ಓವರ್ ಗಳಲ್ಲಿಯೂ ಬೌಂಡರಿಗಳು ಬರಲು ಶುರುವಾದವು.


ಮೊದಲು ಸ್ಪಿನ್ನರ್ ಗಳಿಗೆ ವೇಗವಾಗಿ ಆಡಲು ಶುರು ಮಾಡಿದ ಭಾರತೀಯ ಬ್ಯಾಟ್ಸ್ಮನ್ ಗಳು ನಂತರ ಪಾಕ್ ವೇಗಿಗಳ ಓವರ್ ಗಳಲ್ಲಿಯೂ ಬೌಂಡರಿ ಮತ್ತು ಸಿಕ್ಸರ್ ಬಾರಿಸುವುದರ ಮೂಲಕ ಪಂದ್ಯವನ್ನು ಕೊನೆಯ ಎಸೆತದವರೆಗೂ ಕೊಂಡೊಯ್ದು ರೋಚಕವಾದ ಸ್ಥಿತಿಯಲ್ಲಿ ತಂದಿರಿಸಿದರು. ಆದರೆ ಅದೃಷ್ಟ ಭಾರತದ ಕಡೆಗೆ ಇತ್ತು ಮತ್ತು ಕೊನೆಯ ಎರಡು ಎಸೆತಗಳು ಪಂದ್ಯಕ್ಕೆ ಒಂದು ರೀತಿಯ ನಾಟಕೀಯವಾದ ತಿರುವು ನೀಡಿತು ಅಂತ ಹೇಳಬಹುದು.


ಇದನ್ನೂ ಓದಿ: ಕ್ರಿಕೆಟಿಗರ ಜೊತೆ ರಾಷ್ಟ್ರಗೀತೆಗೆ ದನಿಗೂಡಿಸುವ ಈ ಮಕ್ಕಳು ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ


ಬಾಬರ್  ತರಾಟೆ ತೆಗೆದುಕೊಂಡ ಪಾಕ್ ಮಾಜಿ ನಾಯಕ!


ಈ ಸೋಲಿನ ನಂತರ, ಪಾಕಿಸ್ತಾನ ನಾಯಕ ಬಾಬರ್ ಅಜಮ್ ಅವರನ್ನು ಮಾಜಿ ನಾಯಕ ಸಲೀಮ್ ಮಲಿಕ್ ಸಹ ತರಾಟೆಗೆ ತೆಗೆದುಕೊಂಡರು, ಅವರು ಅದೇ ತಪ್ಪನ್ನು ಮತ್ತೆ ಮತ್ತೆ ಪುನರಾವರ್ತಿಸಲು ಒಲವು ತೋರಿದರೆ 28 ವರ್ಷದ ಆಟಗಾರ ನಾಯಕತ್ವವನ್ನು ತ್ಯಜಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.


"ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ತಂಡದಲ್ಲಿನ ಹಿರಿಯ ಆಟಗಾರರು ತಂಡದಲ್ಲಿ ಇರುವುದು ತುಂಬಾನೇ ಮುಖ್ಯವಾಗುತ್ತದೆ ಮತ್ತು ನಾಯಕ ಯಾವುದಾದರೂ ಸಮಯದಲ್ಲಿ ತಪ್ಪಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ, ಅವರು ಹೋಗಿ ಆ ನಿರ್ಧಾರದ ಬಗ್ಗೆ ಮಾತಾಡಬೇಕು. ಅದಕ್ಕಾಗಿ ನಾನು ಯಾವಾಗಲೂ ಹೇಳುತ್ತೇನೆ ನಿಮ್ಮ ಬೌಲರ್ ಹತ್ತಿರ ಒಬ್ಬ ಅನುಭವಿ ಮತ್ತು ಹಿರಿಯ ಆಟಗಾರನನ್ನು ನಿಲ್ಲಿಸುವುದು ಒಳ್ಳೆಯದು ಅಂತ. ಇಷ್ಟು ವರ್ಷಗಳ ನಂತರವೂ ನಿಮಗೆ ಇದೆಲ್ಲ ಅರ್ಥವಾಗುತ್ತಿಲ್ಲ ಅಂತಾದರೆ, ನೀವು ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತಿದ್ದರೆ, ನಾಯಕತ್ವದಿಂದ ಕೆಳಗಿಳಿಯುವುದು ಒಳ್ಳೆಯದು” ಅಂತ ಹೇಳಿದರು.


ಇದನ್ನೂ ಓದಿ: ಭಾರತ ಪಾಕಿಸ್ತಾನವನ್ನು ಸೋಲಿಸಿದರೆ ಟ್ವಿಟರ್‌ನಿಂದ ನಿರ್ಗಮಿಸ್ತೀನಿ! ಹೀಗೆ ಹೇಳಿದ್ದ ನಟಿಗೆ ನೆಟ್ಟಿಗರ ತರಾಟೆ


“ಈ ಹಿಂದೆ ಸಹ ಅನೇಕ ಆಟಗಾರರು ತಮಗೆ ನಾಯಕತ್ವದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ಬಾರದೇ ಇದ್ದರೆ ನಾಯಕತ್ವವನ್ನು ಬಿಟ್ಟಿರುವ ಉದಾಹರಣೆಗಳಿವೆ” ಎಂದು ಮಲಿಕ್ ಅವರು ಹೇಳಿದರು.


ಬಾಬರ್ ವಿರುದ್ಧ ವಾಗ್ದಾಳಿ ನಡೆಸಿದ ಹಫೀಜ್


ಇದಕ್ಕೂ ಮುನ್ನ ಮೊಹಮ್ಮದ್ ಹಫೀಜ್ ಸಹ ಬಾಬರ್ ಅವರ ವಿರುದ್ಧ ವಾಗ್ದಾಳಿ ನಡೆಸಿ "ಬಾಬರ್ ಅಜಮ್ ಅವರ ನಾಯಕತ್ವವು ಒಂದು ಪವಿತ್ರವಾದ ಹಸುವಿನಂತೆ, ಅದನ್ನು ಟೀಕಿಸಲು ಸಾಧ್ಯವಿಲ್ಲ. ಬಾಬರ್ ನಾಯಕತ್ವದಲ್ಲಿನ ನ್ಯೂನತೆಗಳು ನಮಗೆ ಕಾಣುತ್ತಿವೆ. ಆ ಪಂದ್ಯದಲ್ಲಿ, 7ನೇ ಓವರ್ ನಿಂದ 11ನೇ ಓವರ್ ವರೆಗೂ ಭಾರತವು ಓವರ್ ಗೆ 4 ರನ್ ಗಳಿಸಲು ಸಹ ಹೆಣಗಾಡುತ್ತಿದ್ದಾಗ, ಆ ಸಮಯದಲ್ಲಿ ಬಾಬರ್ ಸ್ಪಿನ್ನರ್ ಗಳ ಉಳಿದ ಓವರ್ ಗಳನ್ನು ಏಕೆ ಮುಗಿಸಲಿಲ್ಲ" ಎಂದು ಹಫೀಜ್ ಕೇಳಿದರು.

Published by:ವಾಸುದೇವ್ ಎಂ
First published: