Vinay BhatVinay Bhat
|
news18 Updated:February 12, 2019, 6:34 PM IST
ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಮ್
- News18
- Last Updated:
February 12, 2019, 6:34 PM IST
ಟೀಂ ಇಂಡಿಯಾ ನಾಯಕ, ರನ್ ಮೆಶಿನ್ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಕ್ರಿಕೆಟಿಗ. ಈಗಾಗಲೇ ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಪುಡಿಪುಡಿ ಮಾಡುತ್ತಿರುವ ಕೊಹ್ಲಿ ಅನೇಕ ಕ್ರಿಕೆಟಿಗರಿಗೆ ಸ್ಪೂರ್ತಿ ಕೂಡ ಔದು.
ಅದರಂತೆ 2016ರ ಹೊತ್ತಿಗೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕಾಲಿಟ್ಟ ಬ್ಯಾಟ್ಸ್ಮನ್ ಬಾಬರ್ ಅಜಮ್ ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಕ್ರಿಕೆಟ್ ಜಗತ್ತಿಗೆ ಪರಿಚಿತರಾದರು. ತಾನಾಡಿದ ಕೆಲವೇ ಪಂದ್ಯಗಳಲ್ಲಿ ದಾಖಲೆ ಮೇಲೆ ದಾಖಲೆ ಬರೆಯಲಾರಂಭಿಸಿದ ಬಾಬರ್ ಅನ್ನು ಅನೇಕರು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡುತ್ತಿದ್ದಾರೆ. ಇದನ್ನ ಮನಗಂಡು ಬಾಬರ್ ಅವರು ಕೊಹ್ಲಿಯನ್ನು ನನಗೆ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತವರಿನಲ್ಲಿ ಆಸೀಸ್ ವಿರುದ್ಧ ಸರಣಿ: ಫೆ. 15ಕ್ಕೆ ಭಾರತ ತಂಡ ಪ್ರಕಟ; ಸ್ಟಾರ್ ಆಟಗಾರರಿಗೆ ವಿಶ್ರಾಂತಿ?
'ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ. ಅವರು ಬ್ಯಾಟಿಂಗ್ ಮಾಡುವ ಶೈಲಿ ಅದ್ಭುತ. ನಾನು ಕ್ರಿಕೆಟ್ ಜಗತ್ತಿಗೆ ಕಾಲಿಡುತ್ತಿರುವಾಗಲೇ ಅವರು ಬಹಳಷ್ಟು ಸಾಧನೆ ಮಾಡಿದ್ದಾರೆ. ಅವರೆತ್ತರಕ್ಕೆ ನಾನಿನ್ನು ಬೆಳೆದಿಲ್ಲ. ನಾನು ಸಾಧಿಸುವುದು ಬೇಕಾದಷ್ಟಿದೆ. ಹೀಗಾಗಿ ದಯವಿಟ್ಟು ಅವರೊಂದಿದೆ ನನ್ನನ್ನು ಹೋಲಿಕೆ ಮಾಡಬೇಡಿ' ಎಂದು ಬಾಬರ್ ಹೇಳಿದ್ದಾರೆ.
ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ಕನಿಷ್ಠ ಸ್ಕೋರ್ಗೆ ಆಲೌಟ್: ಆರ್ಸಿಬಿಗೆ ಮೊದಲ ಸ್ಥಾನ
ಸದ್ಯ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿರುವ ಬಾಬರ್ ಇತ್ತೀಚೆಗಷ್ಟೆ ಟಿ-20 ಕ್ರಿಕೆಟ್ನಲ್ಲಿ ಕೊಹ್ಲಿ ದಾಖಲೆಯನ್ನು ಪುಡಿ ಮಾಡಿದ್ದರು. ಅಂತರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಕೊಹ್ಲಿ 27 ಇನ್ನಿಂಗ್ಸ್ನಲ್ಲಿ 1,000 ರನ್ ಸಾಧನೆ ಮಾಡಿದ್ದರೆ, ಬಾಬರ್ 26 ಇನ್ನಿಂಗ್ಸ್ಗಳಲ್ಲೇ 1,000 ರನ್ ಪೂರೈಸಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದರು.
First published:
February 12, 2019, 6:20 PM IST