ಟಿ-20 ವಿಶ್ವಕಪ್​ಗೂ ಮುನ್ನವೇ ಪಾಕ್ ಎದುರಿನ ಭಾರತ ಐತಿಹಾಸಿಕ ಗೆಲುವು ನೆನಪಿಸಿದ #Baapbaaphotahai ಟ್ರೆಂಡ್!

ಎಲ್ಲ ಕ್ರಿಕೆಟಿಗರೂ ಫಾರ್ಮ್ ನಲ್ಲಿ ಇದ್ದರು ಸಹ ಎಲ್ಲರ ಕ್ರಿಕೆಟ್ ಪ್ರೇಮಿಗಳ ಕಣ್ಣು ವಿರಾಟ್ ಕೊಹ್ಲಿ, ಎಂಎಸ್ ಧೋನಿ ಹಾಗೂ ರವಿಶಾಸ್ತ್ರಿ ಮೇಲೆ ಇರಲಿದೆ. ಏಕೆಂದರೆ. ಈ ವಿಶ್ವಕಪ್ ನಂತರ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ. ಧೋನಿ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಕೋಹ್ಲಿ ಮತ್ತು ದೋನಿ

ಕೋಹ್ಲಿ ಮತ್ತು ದೋನಿ

  • Share this:
    ಬೆಂಗಳೂರು : ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಟಿ 20 ವಿಶ್ವಕಪ್‌ನ ಫೈನಲ್‌ನಲ್ಲಿ (T-20 World Cup Final) ಎಂಎಸ್ ಧೋನಿ (MS Dhoni) ನೇತೃತ್ವದ ಯುವ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಐತಿಹಾಸಿಕ ದಿನವನ್ನು ಕ್ರಿಕೆಟ್ ಪ್ರೇಮಿಗಳು ನೆನಪಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದರ ಹೊಳೆಯೇ ಹರಿದಿದೆ. ಸುಮಾರು 14 ವರ್ಷಗಳ ಹಿಂದೆ ಅಂದರೆ 2007 ಸೆಪ್ಟೆಂಬರ್ 24ರಂದು ಭಾರತ ಕ್ರಿಕೆಟ್ (Team India) ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನ.

    ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 5 ರನ್‌ಗಳ ರೋಚಕ ಗೆಲುವನ್ನಾಚರಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಭಾರತದಿಂದ ಗೌತಮ್ ಗಂಭೀರ್ 75, ಯೂಸೂಫ್ ಪಠಾಣ್ 15, ರಾಬಿನ್ ಉತ್ತಪ್ಪ 8, ಯುವರಾಜ್ ಸಿಂಗ್ 14, ಎಂಎಸ್ ಧೋನಿ 4, ರೋಹಿತ್ ಶರ್ಮಾ 30, ಇರ್ಫಾನ್ ಪಠಾಣ್ 3 ರನ್‌ ಸೇರಿಸಿದ್ದರು. ಎಂಎಸ್ ಧೋನಿ ಯುಗ ಆರಂಭವಾಗಿದ್ದೂ ಈ ಆವತ್ತಿನಿಂದಲೇ. ಪ್ರತಿಭಾವಂತ ಇರ್ಫಾನ್ ಪಠಾಣ್ ತನ್ನ ಮ್ಯಾಜಿಕ್ 3/16 ಸಾಧನೆಯೊಂದಿಗೆ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದರು.

    ನಾಯಕತ್ವ ವಹಿಸಿಕೊಂಡ ಮೊದಲ ಟೂರ್ನಿಯಲ್ಲೇ ಧೋನಿ ತಂಡ ಟ್ರೋಫಿ ಗೆದ್ದು ಬೀಗಿದ್ದು ಇತಿಹಾಸ. ಈ ವಿಶೇಷ ದಿನವನ್ನು ನೆನಪಿಸಿಕೊಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಧೋನಿಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ಈ ಟೂರ್ನಿಗೆ ಧೋನಿ ನಾಯಕರಾಗಿ ಆಯ್ಕೆಯಾದದ್ದು ಮತ್ತು ಭಾರತದ ಯುವ ಪಡೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಪಾರಮ್ಯ ಮೆರೆದದ್ದೆ ಒಂದು ರೋಚಕ ಕಥೆ.

    2007ರ ಏಕದಿನ ವಿಶ್ವಕಪ್ ಸೋಲಿನ ನಂತರ ಭಾರತ ಕ್ರಿಕೆಟ್ ತಂಡ ಅಕ್ಷರಶಃ ಕುಗ್ಗಿ ಹೋಗಿತ್ತು. ಅಭಿಮಾನಿಗಳೂ ಸಹ ನಿರಾಸೆಯಲ್ಲಿ ಮುಳುಗಿದ್ದರು. ಈ ವೇಳೆ ಆರಂಭವಾದ ಟಿ20 ವಿಶ್ವಕಪ್​ಗೆ ಹಿರಿಯ ಆಟಗಾರರು ಯಾರೂ ಭಾಗವಹಿಸುವುದಿಲ್ಲ ಎಂದು ಅಂದಿನ ನಾಯಕ ರಾಹುಲ್ ದ್ರಾವಿಡ್ ಘೋಷಿಸಿದ್ದರು. ಇದೇ ಕಾರಣಕ್ಕೆ ಟಿ20 ವಿಶ್ವಕಪ್​ಗೆ ಸಂಪೂರ್ಣ ಯುವಕರನ್ನು ಆಯ್ಕೆ ಮಾಡಲಾಗಿತ್ತು. ಮತ್ತು ಸಚಿನ್ ತೆಂಡೂಲ್ಕರ್​ ಒಲವಿನ ಮೇರೆಗೆ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ಲಭಿಸಿತ್ತು. ಧೋನಿ ನಾಯಕತ್ವದ ಯುವ ತಂಡ ದಕ್ಷಿಣ ಆಫ್ರಿಕಾದಲ್ಲಿ ಅಭುತಪೂರ್ವ ಪ್ರದರ್ಶನ ನೀಡಿತ್ತು. ಲೀಗ್ ಹಂತದಲ್ಲೇ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ ನಂತಹ ಬಲಿಷ್ಠ ತಂಡಗಳಿಗೆ ಸುಲಭವಾಗಿ ಸೋಲುಣಿಸಿತ್ತು. ಪಾಕಿಸ್ತಾನದ ವಿರುದ್ಧ ಡ್ರಾ ಸಾಧಿಸಿದ್ದ ಪಂದ್ಯದಲ್ಲಿ ಬೌಲ್​ ಔಟ್ ಮೂಲಕ ಜಯಿಸಿತ್ತು. ಸೆಮಿ ಫೈನಲ್​ನಲ್ಲಿ ಆಸ್ಟ್ರೇಲಿಯಾಗೆ ಮನೆ ದಾರಿ ತೋರಿಸಿದ್ದ ಭಾರತ ತಂಡ ಫೈನಲ್​ನಲ್ಲಿ ಮತ್ತೆ ಪಾಕಿಸ್ತಾನವನ್ನು ಎದುರುಗೊಂಡಿತ್ತು. ನಂತರ ರೋಚಕ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತು.

    ಇದನ್ನು ಓದಿ: Watch| ಜೋಗಿಂದರ್ ಶರ್ಮಾ ಕೊನೆಯ ಎಸೆತಕ್ಕೆ ಭಾರತ 2007 T20 ವಿಶ್ವಕಪ್ ಗೆದ್ದು ಇಂದಿಗೆ 14 ವರ್ಷ!

    ಈ ವರ್ಷದ ಟಿ 20 ವಿಶ್ವಕಪ್ ಕೂಡ ಮತ್ತೊಂದು ರೋಚಕತೆಗೆ ನಾಂದಿ ಹಾಡಲಿದೆ. ಏಕೆಂದರೆ ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24 ರಂದು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಖಂಡಿತವಾಗಿಯೂ ಇದು ಸಹ ಭರ್ಜರಿ ಪಂದ್ಯವಾಗಿರಿಲಿದೆ.

    ಭಾರತ- ಪಾಕ್ ಮುಖಾಮುಖಿಯಾದ 12 ವಿಶ್ವಕಪ್ ಗಳಲ್ಲಿ (ಟಿ 20 ಮತ್ತು 50 ಓವರ್‌ಗಳ ಪಂದ್ಯ) ಇದುವರೆಗೂ ಭಾರತವೇ ಗೆಲುವು ಸಾಧಿಸಿದೆ. ಇದನ್ನು ನೋಡಿಯೇ ಮೈಕ್ರೊಬ್ಲಾಗಿಂಗ್ ಆಪ್ 'ಕೂ' ವಿನಲ್ಲಿ #Baapbaaphotahai ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ. ಪಾಕಿಸ್ತಾನದ ವಿರುದ್ಧ ಭಾರತೀಯ ತಂಡದ 13 ನೇ ವಿಶ್ವಕಪ್ ವಿಜಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ.







    ಎಲ್ಲ ಕ್ರಿಕೆಟಿಗರೂ ಫಾರ್ಮ್ ನಲ್ಲಿ ಇದ್ದರು ಸಹ ಎಲ್ಲರ ಕ್ರಿಕೆಟ್ ಪ್ರೇಮಿಗಳ ಕಣ್ಣು ವಿರಾಟ್ ಕೊಹ್ಲಿ, ಎಂಎಸ್ ಧೋನಿ ಹಾಗೂ ರವಿಶಾಸ್ತ್ರಿ ಮೇಲೆ ಇರಲಿದೆ. ಏಕೆಂದರೆ. ಈ ವಿಶ್ವಕಪ್ ನಂತರ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ. ಧೋನಿ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಮುಖ್ಯ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗೆ ಇಳಿಯಲಿದ್ದು, ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಈ ಬಾರಿಯ ಟಿ 20 ವಿಶ್ವಕಪ್ ಸಾಕಷ್ಟು ರೋಚಕ ಕಥೆಗಳಿಂದ ಕೂಡಿರಲಿದೆ ಎನ್ನಬಹುದು.
    Published by:HR Ramesh
    First published: