ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ (KL Rahul-Athiya) ನಂತರ ಇದೀಗ ಭಾರತ ತಂಡದ ಆಲ್ ರೌಂಡರ್ ಅಕ್ಷರ್ ಪಟೇಲ್ (Axar Patel) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಭಾಗವಾಗಿ ಮೆಹಂದಿ ಸಮಾರಂಭ ನಡೆದಿದೆ. ಈ ಸಮಯದಲ್ಲಿ, ದಂಪತಿಗಳು ಸಾಕಷ್ಟು ಎಂಜಾಯ್ ಮಾಡಿದ್ದಾರೆ. ಪ್ರಸ್ತುತ, ಅಕ್ಷರ್ ಮತ್ತು ಅವರ ಪ್ರೇಯಸಿ ಮೇಹಾ ಪಟೇಲ್ (Meha Patel) ಅವರ ನೃತ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇವರಿಬ್ಬರ ಜೋಡಿ ತುಂಬಾ ಮುದ್ದಾಗಿ ಕಾಣುತ್ತಿದೆ. ಈ ವಿಡಿಯೋವನ್ನು ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಅದನ್ನು ನೋಡಿ ವೈರಲ್ ಆಗಿದೆ. ಅಲ್ಲದೇ ಇದೀಗ ಇವರಿಬ್ಬರ ಮದುವೆಯ ಫೋಟೋ ವೈರಲ್ ಆಗಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕ್ಷರ್:
ಈಗಾಗಲೇ ರಾಹುಲ್ ಜನವರಿ 23ರಂದು ಅಥಿಯಾ ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದರ ಬೆನ್ನಲ್ಲೇ ಇದೀಗ ಭಾರತ ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ಅಕ್ಷರ್ ಪಟೇಲ್ ಸಹ ವಿವಾಹವಾಗಿದ್ದಾರೆ. ಇದೇ ವೇಳೆ ಮೆಹಂದಿ ಸಮಾರಂಭದ ಈ ವಿಡಿಯೋ ವೈರಲ್ ಆಗಿದ್ದು, ಅಕ್ಷರ್ ಅವರು ವೇದಿಕೆಯ ಮೇಲೆ ನೃತ್ಯ ಮಾಡಿದ್ದಾರೆ. ಅಕ್ಷರ್ ಪಟೇಲ್ ಮತ್ತು ಮೇಹಾ ಇಂದು ಅಂದರೆ ಜನವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
अक्षर पटेल और उनकी पत्नी मेहा का संगीत सेरेमनी में खूबसूरत डांस परफॉरमेंस
Axar Patel & His Wife Meha Dance Performance at Sangeet Ceremony#axarpatel #AxarPatelWedding #cricketer #cricket #weddingdance #wedding #indvsnz pic.twitter.com/KF7RlGqdYo
— Shivam शिवम (@shivamsport) January 26, 2023
ಸರಣಿಯಿಂದ ಹೊರಗಿದ್ದ ಅಕ್ಷರ್:
ವಿವಾಹದ ಕಾರಣದಿಂದ ಅಕ್ಷರ್ ಪಟೇಲ್ ಭಾರತ-ನ್ಯೂಜಿಲೆಂಡ್ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿದ್ದರು. ಅವರು ಭಾರತ-ಶ್ರೀಲಂಕಾ ತವರಿನ ಸರಣಿಯಲ್ಲಿ ಮಾತ್ರ ಆಡಿದ್ದರು. ವಿವಾಹದ ಕಾರಣ, ಕಿವೀಸ್ ತಂಡದ ವಿರುದ್ಧದ ಸರಣಿಯಿಂದ ವಿರಾಮ ತೆಗೆದುಕೊಳ್ಳಲು ಅವರು ಈಗಾಗಲೇ ಬಿಸಿಸಿಐನಿಂದ ಅನುಮತಿ ಕೋರಿದ್ದರು. ಅಕ್ಷರ್ ಈಗ ಫೆಬ್ರವರಿಯಲ್ಲಿ ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಫೆಬ್ರವರಿ 8 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಗವಾಸ್ಕರ್ ಬಾರ್ಡರ್ ಸರಣಿ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ, ಭಾರತವು ಯಾವುದೇ ಬೆಲೆ ತೆತ್ತಾದರೂ ಈ ಸರಣಿಯನ್ನು ಗೆಲ್ಲಬೇಕಾಗಿದೆ. ಈ ಟೂರ್ನಿಯಲ್ಲಿ ಅಕ್ಷರ್ ಟೀಂ ಇಂಡಿಯಾದ ಪ್ರಮುಖ ಭಾಗವಾಗಲಿದ್ದಾರೆ.
ಯಾರು ಈ ಮೇಹಾ ಪಟೇಲ್?:
ಅಕ್ಷರ್-ಮೇಹಾ ಒಂದು ವರ್ಷದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ನಾಡಿಯಾಡ್‌ನಲ್ಲಿ ನಡೆದ ಐಸ್ ಬಾಲ್ ಈವೆಂಟ್‌ನಲ್ಲಿ ಇಬ್ಬರ ನಡುವೆ ಸ್ನೇಹ ಪ್ರಾರಂಭವಾಯಿತು. ಇದಾದ ನಂತರ ಅಕ್ಷರ್ ಮೇಹಾಳ ಹುಟ್ಟುಹಬ್ಬದಂದು ಪ್ರಪೋಸ್ ಮಾಡಿದ್ದರು. ಅಕ್ಷರ್ ಪಟೇಲ್ ಅವರ ಪತ್ನಿ ಮೇಹಾ ಅವರು ವೃತ್ತಿಯಲ್ಲಿ ಆಹಾರ ಮತ್ತು ಪೌಷ್ಟಿಕ ತಜ್ಞರಾಗಿದ್ದಾರೆ.
ಅಕ್ಷರ್ ಅವರ ಡಯಟ್ ಮತ್ತು ಫಿಟ್ನೆಸ್ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಇನ್ನು, ಮೇಹಾ ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದು, ಅದರಲ್ಲಿ 'AKSH' ಎಂದು ಬರೆಯಲಾಗಿದೆ. ಇವು ಭಾರತೀಯ ಆಲ್‌ರೌಂಡರ್‌ನ ಹೆಸರಿನ ಆರಂಭಿಕ ಅಕ್ಷರಗಳಾಗಿವೆ. ಐಪಿಎಲ್ ಸಮಯದಲ್ಲಿ, ಮೇಹಾ ಅನೇಕ ಬಾರಿ ಕ್ರೀಡಾಂಗಣದಲ್ಲಿ ಅಕ್ಷರ್ ಅವರನ್ನು ಪ್ರೋತ್ಸಾಹಿಸುತ್ತಿದನ್ನು ನೋಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ