• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Australian Open 2021 Men's Final: ನೊವಾಕ್ ಜೊಕೊವಿಚ್​ಗೆ ಒಲಿದ 9ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ

Australian Open 2021 Men's Final: ನೊವಾಕ್ ಜೊಕೊವಿಚ್​ಗೆ ಒಲಿದ 9ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ

Novak Djokovic

Novak Djokovic

ಇದರೊಂದಿಗೆ ನೊವಾಕ್ ಜೊಕೊವಿಚ್ ತಮ್ಮ ವೃತ್ತಿಜೀವನದ 18ನೇ ಗ್ರ್ಯಾಂಡ್ ಸ್ಲ್ಯಾಮ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಂತಾಗಿದೆ. ಸದ್ಯ ಅತೀ ಹೆಚ್ಚು ಪುರುಷರ ಸಿಂಗಲ್ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿಯಲ್ಲಿ ನೊವಾಕ್ 3ನೇ ಸ್ಥಾನದಲ್ಲಿದ್ದಾರೆ.

  • Share this:

ವಿಶ್ವದ ನಂಬರ್ 1 ಟೆನಿಸ್ ತಾರೆ ಸೆರ್ಬಿಯಾದ ನೊವಾಕ್ ಜೊಕೊವಿಚ್ ಆಸ್ಟ್ರೇಲಿಯನ್ ಓಪನ್ 2021 ಪ್ರಶಸ್ತಿಯೊಂದಿಗೆ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದಾರೆ. ಮೆಲ್ಬೋರ್ನ್​ನಲ್ಲಿ ನಡೆದ ಫೈನಲ್‌ನಲ್ಲಿ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರನ್ನು 7-5, 6-2, 6-2 ಸೆಟ್​ಗಳಿಂದ ಮಣಿಸುವ ಮೂಲಕ 9 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗೆ ಮುತ್ತಿಕ್ಕಿದರು.


ಸತತ 20 ಪಂದ್ಯಗಳನ್ನು ಗೆದ್ದಿದ್ದ ಮೆಡ್ವೆಡೆವ್ ಮತ್ತು ಜೊಕೊವಿಚ್ ನಡುವಿನ ಅಂತಿಮ ಕಾಳಗ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಅಂತಿಮ ಹಣಾಹಣಿಯಲ್ಲಿ ಮೆಡ್ವೆಡೆವ್ ಕಡೆಯಿಂದ ತೀವ್ರ ಪೈಪೋಟಿ ಕಂಡು ಬಂದಿರಲಿಲ್ಲ. ಆರಂಭಿಕ ಸೆಟ್‌ನಲ್ಲಿ ಮಾತ್ರ ಕೊಂಚ ಪ್ರತಿರೋಧ ತೋರಿದ್ದು ನೀಡಿದ್ದು ಬಿಟ್ಟರೆ ಉಳಿದಂತೆ ಇಡೀ ಪಂದ್ಯದಲ್ಲಿ ಜೊಕೊವಿಚ್ ಪಾರಮ್ಯ ಸಾಧಿಸಿದ್ದರು.



ಇದರೊಂದಿಗೆ ನೊವಾಕ್ ಜೊಕೊವಿಚ್ ತಮ್ಮ ವೃತ್ತಿಜೀವನದ 18ನೇ ಗ್ರ್ಯಾಂಡ್ ಸ್ಲ್ಯಾಮ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಂತಾಗಿದೆ. ಸದ್ಯ ಅತೀ ಹೆಚ್ಚು ಪುರುಷರ ಸಿಂಗಲ್ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿಯಲ್ಲಿ ನೊವಾಕ್ 3ನೇ ಸ್ಥಾನದಲ್ಲಿದ್ದಾರೆ.



ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸ್ಪೇನ್‌ನ ರಾಫೆಲ್ ನಡಾಲ್ 20 ಗ್ರ್ಯಾಂಡ್ ಸ್ಲ್ಯಾಮ್ ಪುರುಷರ ಸಿಂಗಲ್ಸ್ ಪ್ರಶಸ್ತಿಗಳೊಂದಿಗೆ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ.

First published: