ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ರೋಜರ್ ಫೆಡರರ್ ಪೆಡರರ್ರನ್ನು ಮಣಿಸುವ ಮೂಲಕ ನೊವಾಕ್ ಜೊಕೋವಿಕ್ ಫೈನಲ್ ಪ್ರವೇಶಿಸಿದ್ದಾರೆ. ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ದಿಗ್ಗಜರ ಸೆಣಸಾಟದಲ್ಲಿ ಸೋಲುವ ಮೂಲಕ ಫೆಡರರ್ ಅವರ 7ನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ.
ಹಾಲಿ ಚಾಂಪಿಯನ್ ಸರ್ಬಿಯಾದ ಜೊಕೋವಿಕ್ ಈ ಗೆಲುವಿನೊಂದಿಗೆ ಎಂಟನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಸೆಮಿಫೈನಲ್ನ ಆರಂಭದಲ್ಲಿ ಜೊಕೋವಿಕ್ ಎಡವಿದರೂ, ನಂತರ ಕಂಬ್ಯಾಕ್ ಮಾಡುವ ಮೂಲಕ ಇಡೀ ಸೆಟ್ ಮೇಲೆ ನಿಯಂತ್ರಣ ಹೊಂದಿದರು.
ಈ ಮೂಲಕ ಸ್ವಿಸ್ ಅನುಭವಿ ಆಟಗಾರನನ್ನು 7-6 (7/1), 6-4, 6-3 ನೇರ್ ಸೆಟ್ಗಳಿಂದ ಸೋಲಿಸಿ ಅಂತಿಮ ಘಟ್ಟ ತಲುಪಿದರು. ಇದು ಜೊಕೋವಿಕ್ ಮತ್ತು ಫೆಡರರ್ ನಡುವಣ 50ನೇ ಪಂದ್ಯವಾಗಿದ್ದು, ಸೆಮಿಫೈನಲ್ನಲ್ಲಿ ಫೆಡರರ್ ವಿರುದ್ಧದ ನಾಲ್ಕನೇ ಜಯವಾಗಿದೆ.
ICYMI: The point that won @DjokerNole the second set 🤯
🎥 @Channel9 | @espn #AO2020 | #AusOpen pic.twitter.com/crGXrccYxh
— #AusOpen (@AustralianOpen) January 30, 2020
🇷🇸 U-N-S-T-O-P-P-A-B-L-E 🇷🇸@DjokerNole def. Roger Federer for the 27th time 7-6(1) 6-4 6-3 to earn the chance to play for his 8️⃣th #AusOpen title 🏆#AO2020 pic.twitter.com/Hy7lu8AIHo
— #AusOpen (@AustralianOpen) January 30, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ