• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Andrew Symonds: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ! ಕಾರು ಅಪಘಾತದಲ್ಲಿ ಖ್ಯಾತ ಕ್ರಿಕೆಟಿಗ ನಿಧನ

Andrew Symonds: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ! ಕಾರು ಅಪಘಾತದಲ್ಲಿ ಖ್ಯಾತ ಕ್ರಿಕೆಟಿಗ ನಿಧನ

ಆಂಡ್ರ್ಯೂ ಸೈಮಂಡ್ಸ್

ಆಂಡ್ರ್ಯೂ ಸೈಮಂಡ್ಸ್

ಆಸ್ಟ್ರೇಲಿಯಾದ (Australia) ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ (Andrew Symonds) ಶನಿವಾರ ತಡರಾತ್ರಿ ಕಾರು ಅಪಘಾತದಲ್ಲಿ (Car Crash) ಸಾವನ್ನಪ್ಪಿದ್ದಾರೆ (Dies) ಎಂದು ವರದಿಯಾಗಿದೆ.

  • Share this:

ಆಸ್ಟ್ರೇಲಿಯಾದ (Australia) ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ (Andrew Symonds) ಶನಿವಾರ ತಡರಾತ್ರಿ ಕಾರು ಅಪಘಾತದಲ್ಲಿ (Car Crash) ಸಾವನ್ನಪ್ಪಿದ್ದಾರೆ (Dies) ಎಂದು ವರದಿಯಾಗಿದೆ. ಆಸ್ಟ್ರೇಲಿಯನ್ ಪೊಲೀಸರ ಪ್ರಕಾರ, ಅವರು ಕಾರಿನಲ್ಲಿ ಒಬ್ಬರೇ ಇದ್ದರು ಎಂದು ತಿಳಿದುಬಂದಿದೆ. ಶನಿವಾರ ತಡರಾತ್ರಿ ಅವರ ಕಾರು ಟೌನ್ಸ್‌ವಿಲ್ಲೆಯಲ್ಲಿ ರಸ್ತೆ ಅಪಘಾತ ಆಗಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಅಪಘಾತದ ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇನ್ನು, ಕಳೆದ ಕೆಲ ತಿಂಗಳುಗಳ ಹಿಂದೆಯಷ್ಟೇ ಆಸ್ಟ್ರೇಲಿಯಾ ಕ್ರಿಕೆಟ್ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಕ್ರಿಕೆಟ್ ಜಗತ್ತು ಇದೀಗ ಇಬ್ಬರು ಲಜೇಂಡ್ ಕ್ರಿಕೆಟಿಗರನ್ನು ಕಳೆದುಕೊಂಡಂತಾಗಿದೆ.


ರಾತ್ರಿ 11ರ ಸಮಯದಲ್ಲಿ ಅಪಘಾತ:


ಸ್ಥಳೀಯ ಪೊಲೀಸ್ ಹೇಳಿಕೆಯ ಪ್ರಕಾರ, ‘ಪ್ರಾಥಮಿಕ ಮಾಹಿತಿಯು ರಾತ್ರಿ 11 ಗಂಟೆಯ ನಂತರ ಎಲ್ಲಿಸ್ ರಿವರ್ ಬ್ರಿಡ್ಜ್ ಬಳಿಯ ಹರ್ವೆ ರೇಂಜ್ ರಸ್ತೆಯಲ್ಲಿ ಕಾರು ಚಲಿಸುತ್ತಿರುವುದಾಗಿ ವರದಿಯಾಗಿದ್ದು, ನಂತರದಲ್ಲಿ ಆಂಡ್ರ್ಯೂ ಸೈಮಂಡ್ಸ್ ಅವರ ಕಾರು ಅಸಮತೋಲನಗೊಂಡು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದ್ದು, ಫೋರೆನ್ಸಿಕ್ ಕ್ರ್ಯಾಶ್ ಯುನಿಟ್ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ. ಅಲ್ಲದೇ ತುರ್ತು ಸೇವೆ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ.


ಸೈಮಂಡ್ಸ್ ವೃತ್ತಿ ಜೀವನ:


ಸೈಮಂಡ್ಸ್ 1998 ರಿಂದ 2009 ರವರೆಗೆ ಆಸ್ಟ್ರೇಲಿಯನ್ ತಂಡದ ಭಾಗವಾಗಿದ್ದರು. ಈ ಸಮಯದಲ್ಲಿ, ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ನೇತೃತ್ವದ ಕಾಂಗರೂ ತಂಡವನ್ನು ಅಜೇಯವೆಂದು ಪರಿಗಣಿಸಲಾತ್ತು. ಸೈಮಂಡ್ಸ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 26 ಟೆಸ್ಟ್, 198 ODI ಮತ್ತು 14 T20Iಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 1462 ರನ್, ಏಕದಿನದಲ್ಲಿ 5088 ರನ್ ಮತ್ತು ಟಿ20ಯಲ್ಲಿ 337 ರನ್ ಗಳಿಸಿದ್ದಾರೆ. ಅವರು ತಮ್ಮ ಆಕ್ರಮಣಕಾರಿ ಶೈಲಿ ಮತ್ತು ಮೈದಾನದಲ್ಲಿ ಅತ್ಯುತ್ತಮ ಫೀಲ್ಡಿಂಗ್‌ಗೆ ಹೆಸರುವಾಸಿಯಾಗಿದ್ದರು.


ಇದನ್ನೂ ಓದಿ: Mohammed Shami: ಉಮ್ರಾನ್ ಮಲಿಕ್ ಪ್ರಬುದ್ಧರಾಗಲು ಸ್ವಲ್ಪ ಸಮಯ ಬೇಕು; ಮೊಹಮ್ಮದ್ ಶಮಿ


ಗಣ್ಯರಿಂದ ಸಂತಾಪ ಸೂಚನೆ:


ಇನ್ನು, ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಆಸೀಸ್​ ಲೆಂಜಡ್ ಸೈಮಂಡ್ಸ್ ಗೆ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಕ್ರಿಕೆಟ್ ಲೋಕದ ಅನೇಕ ಹಿರಿಯ ಹಾಗೂ ಕಿರಿಯ ಆಟಗಾರರು ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.


ಈ ಸಂಬಂಧ ಟ್ವೀಟ್ ಮಾಡಿರುವ ಪಾಕಿಸ್ತಾನದ ಮಾಜಿ ಆಟಗಾರ ವೇಗಿ ಶೊಯಬ್ ಅಖ್ತರ್, ‘ಆಂಡ್ರ್ಯೂ ಸೈಮಂಡ್ಸ್ ಆಸ್ಟ್ರೇಲಿಯದಲ್ಲಿ ಕಾರು ಅಪಘಾತದಲ್ಲಿ ನಿಧನರಾದ ಬಗ್ಗೆ ಕೇಳಿ ಆಘಾತವಾಯಿತು. ನಾವು ಮೈದಾನದ ಒಳಗೆ ಮತ್ತು ಹೊರಗೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ‘ ಎಂದು ಟ್ವೀಟ್ ಮಾಡಿದ್ದಾರೆ.


4 ವರ್ಷಗಳಲ್ಲಿ 3 ICC ಪ್ರಶಸ್ತಿ:


ಇನ್ನು, ಆಂಡ್ರ್ಯೂ ಸೈಮಂಡ್ಸ್ ಆಸ್ಟ್ರೇಲಿಯಾದ ODI ತಂಡದ ಖಾಯಂ ಸದಸ್ಯರಾಗಿದ್ದರು. ಇವರು ಇದ್ದ ತಂಡವು ನಾಲ್ಕು ವರ್ಷಗಳಲ್ಲಿ ಮೂರು ICC ಪ್ರಶಸ್ತಿಗಳನ್ನು ಗೆದ್ದಿದೆ. ಅವರು 2003 ರಲ್ಲಿ ODI ವಿಶ್ವಕಪ್, 2006 ರಲ್ಲಿ ICC ಚಾಂಪಿಯನ್ಸ್ ಟ್ರೋಫಿ ಮತ್ತು 2007 ರಲ್ಲಿ ODI ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು. ಅಲ್ಲದೇ ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಅವಕಾಶ ಪಡೆದ ಈ ಆಟಗಾರ 6ನೇ ಕ್ರಮಾಂಕದಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 143 ರನ್ ಗಳಿಸಿ ದಅಖಲೆ ನಿರ್ಮಿಸಿದ್ದರು. ಈ ಇನ್ನಿಂಗ್ಸ್ ನಂತರ, ಅವರು ಮುಂದಿನ ಆರು ವರ್ಷಗಳ ಕಾಲ ತಂಡದ ಅತ್ಯಂತ ವಿಶ್ವಾಸಾರ್ಹ ಆಲ್ ರೌಂಡರ್ ಆಟಗಾರರಾಗಿ ಉಳಿದರು.


ಇದನ್ನೂ ಓದಿ: 36 ಎಸೆತಗಳಲ್ಲಿ 100 ರನ್, IPL ನಲ್ಲಿ RCB ಬೌಲಿಂಗ್ ಜೋಡಿಯ ಕೆಟ್ಟ ದಾಖಲೆ


ಐಪಿಎಲ್ ಪ್ರಶಸ್ತಿಯನ್ನು ಗೆದ್ದ:


ಆಂಡ್ರ್ಯೂ ಸೈಮಂಡ್ಸ್ 2008 ರಲ್ಲಿ ಐಪಿಎಲ್‌ನ ಆರಂಭಿಕ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್‌ ತಂಡದ ಭಾಗವಾಗಿದ್ದರು. 2009 ರಲ್ಲಿ ಆಡಮ್ ಗಿಲ್‌ಕ್ರಿಸ್ಟ್ ನಾಯಕತ್ವದಲ್ಲಿಡೆಕ್ಕನ್ ಚಾರ್ಜರ್ಸ್‌ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತು. 2009 ರ ಫೈನಲ್‌ನಲ್ಲಿ ಅವರು 21 ಎಸೆತಗಳಲ್ಲಿ 33 ರನ್ ಗಳಿಸಿದರು. ಇದಲ್ಲದೇ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.


ಐಪಿಎಲ್‌ನಲ್ಲಿ ಶತಕ ಸಿಡಿಸಿದ್ದ ಸೈಮಂಡ್ಸ್:


ಸೈಮಂಡ್ಸ್ 39 ಐಪಿಎಲ್ ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 974 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು 30 ಇನ್ನಿಂಗ್ಸ್‌ಗಳಲ್ಲಿ 20 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಒಟ್ಟಾರೆಯಾಗಿ ಕ್ರಿಕೆಟ್ ಜಗತ್ತು ಮತ್ತೊಂದು ಲಜೆಂಡರಿ ಕ್ರಿಕೆಟರನ್ನು ಕಳೆದುಕೊಂಡಿದೆ.

Published by:shrikrishna bhat
First published: