• Home
  • »
  • News
  • »
  • sports
  • »
  • Glenn Maxwell: ಬರ್ತಡೇ ಪಾರ್ಟಿಯಲ್ಲಿ ಬಿದ್ದು ಕಾಲು ಮುರಿದುಕೊಂಡ RCB ಸ್ಟಾರ್​ ಆಲ್​ರೌಂಡರ್

Glenn Maxwell: ಬರ್ತಡೇ ಪಾರ್ಟಿಯಲ್ಲಿ ಬಿದ್ದು ಕಾಲು ಮುರಿದುಕೊಂಡ RCB ಸ್ಟಾರ್​ ಆಲ್​ರೌಂಡರ್

ಗ್ಲೆನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್

Glenn Maxwell: ಮೆಲ್ಬೋರ್ನ್‌ನಲ್ಲಿ ನಡೆದ ಹುಟ್ಟುಹಬ್ಬದ ಸಂಭ್ರಮಾಚರಣೆಯ ವೇಳೆ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಪಘಾತಕ್ಕೀಡಾಗಿದ್ದಾರೆ. ಬರ್ತಡೇ ಪಾರ್ಟಿ ವೇಳೆ ಮ್ಯಾಕ್ಸ್​ವೆಲ್ ಕಾಲುಜಾರಿ ಬಿದ್ದು ಎಡ ಫೈಬುಲಾ ಮುರಿತಕ್ಕೆ ಒಳಗಾಗಿದ್ದಾರೆ.

  • Share this:

ಮೆಲ್ಬೋರ್ನ್‌ನಲ್ಲಿ ನಡೆದ ಹುಟ್ಟುಹಬ್ಬದ (Birthday) ಸಂಭ್ರಮಾಚರಣೆಯ ವೇಳೆ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅಪಘಾತಕ್ಕೀಡಾಗಿದ್ದಾರೆ. ಬರ್ತಡೇ ಪಾರ್ಟಿ ವೇಳೆ ಮ್ಯಾಕ್ಸ್​ವೆಲ್ ಕಾಲು ಜಾರಿಬಿದ್ದು ಎಡ ಫೈಬುಲಾ ಮುರಿತಕ್ಕೆ ಒಳಗಾಗಿದ್ದಾರೆ. ಇದರ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದರಿಂದಾಗಿ ಅವರು ಬೇಸಿಗೆಯಲ್ಲಿ ನಡೆಯಲಿರುವ ಸಂಪೂರ್ಣ ಆಸೀಸ್ (Australian Cricket Team)​ ಪ್ರವಾಸದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಮುಂದಿನ ವಾರ ಆರಂಭವಾಗಲಿರುವ ಇಂಗ್ಲೆಂಡ್ (England) ವಿರುದ್ಧದ ಆಸ್ಟ್ರೇಲಿಯಾದ ODI ಸರಣಿಯಿಂದ ಅವರು ಹೊರಗುಳಿದಿದ್ದಾರೆ.


ಕಾಲುಮುರಿತಕ್ಕೆ ಒಳಗಾದ ಮ್ಯಾಕ್ಸಿ:


ಇನ್ನು, ಆಸೀಸ್​ ಮತ್ತು ಆರ್​ಸಿಬಿ ತಂಡದ ಸ್ಟಾರ್​ ಆಲ್​ರೌಂಡರ್ ಆದ ಗ್ಲೇನ್ ಮ್ಯಾಕ್ಸ್​ವೆಲ್ ಮೆಲ್ಬೋರ್ನ್​ನಲ್ಲಿ ನಡೆದ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಾಗ ಜಾರಿಬಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದಾರೆ. ಸದ್ಯ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಮುಂಬರಲಿರುವ ಕೆಲಸ ಸರಣಿಯಿಂದ ಅವರು ಹೊರಗುಳಿಯಲಿದ್ದಾರೆ. ಅಲ್ಲದೇ ಮುಂದಿನ 12 ವಾರಗಳ ಕಾಲ ಕ್ರಿಕೆಟ್‌ನಿಂದ ದೂರವಿರಲಿದ್ದಾರೆ ಎಂದು ವರದಿಯಾಗಿದೆ.ಮ್ಯಾಕ್ಸಿ ಆರ್​ಸಿಬಿ ತಂಡದ ಭಾಗವಾಗಿದ್ದು, ಅವರಿಗೆ ಆರ್​ಸಿಬಿ ಟ್ವೀಟ್​ ಮಾಡುವ ಮೂಲಕ ಆದಷ್ಟು ಬೇಗ ಗುಣಮುಖರಾಗಿ ಎಂದು ತಿಳಿಸಿದೆ,‘ದುರದೃಷ್ಟಕರ ಘಟನೆಯಲ್ಲಿ, ನಮ್ಮ ಸ್ಟಾರ್​ ಆಲ್ ರೌಂಡರ್ ಎಡಗಾಲು ಮುರಿತವಾಯಿತು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ನೀವು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇವೆ. ನೀವು ಮತ್ತೆ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸುವುದನ್ನು ನೋಡಲು ಕಾತುರಾಗಿದ್ದೇವೆ‘ ಎಂದು ಬರೆದುಕೊಂಡಿದೆ.


ಇದನ್ನೂ ಓದಿ: IPL 2023: ಮುಂಬೈ ಇಂಡಿಯನ್ಸ್ ಪಾಲಾದ ಬೆಂಗಳೂರು ತಂಡದ ಸ್ಟಾರ್​ ಬೌಲರ್!


ಟಿ20 ವಿಶ್ವಕಪ್​ನಲ್ಲಿ ಅಬ್ಬರಿಸಿದ್ದ ಮ್ಯಾಕ್ಸಿ:


T20 ವಿಶ್ವಕಪ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ನಾಲ್ಕು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 39.33 ಸರಾಸರಿಯಲ್ಲಿ ಒಟ್ಟು 118 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 160 ಕ್ಕಿಂತ ಹೆಚ್ಚಿತ್ತು ಮತ್ತು ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 54 ಆಗಿತ್ತು. ಅವರ ಇನ್ನಿಂಗ್ಸ್ ಸಮಯದಲ್ಲಿ, ಮ್ಯಾಕ್ಸ್‌ವೆಲ್ ಅವರ ಬ್ಯಾಟ್ 11 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಸಿಡಿಸಿದ್ದರು.


ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ODI ಸರಣಿ:


1 ನೇ ODI: ನವೆಂಬರ್ 17, ಅಡಿಲೇಡ್
2 ನೇ ODI: ನವೆಂಬರ್ 19, SCG
3 ನೇ ODI: ನವೆಂಬರ್ 22, MCG


ಇದನ್ನೂ ಓದಿ: IPL 2023: ಪೊಲಾರ್ಡ್ ಕೈಬಿಟ್ಟ ಮುಂಬೈ, ಮತ್ತೆ ಯಲ್ಲೋ ಜೆರ್ಸಿಯಲ್ಲಿ ಜಡ್ಡು; ಮುಂಬೈ-ಚೆನ್ನೈ-ಜಿಟಿ ರಿಟೈನ್​​ ಲಿಸ್ಟ್


ಇಂಗ್ಲೆಂಡ್ ಸರಣಿಗೆ ಶಾನ್ ಆಯ್ಕೆ:


ಇನ್ನು, ಮುಂಬರುವ ಆಸೀಸ್​ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಗೆ ಇದೀಗ ಮ್ಯಾಕ್ಸ್​ವೆಲ್ ಬದಲಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಶಾನ್ ಅಬಾಟ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಇದಲ್ಲದೇ ಈ ಬಾರಿಯ ಟಿ20 ವಿಶ್ವಕಪ್ ವೇಳೆ ಆಸೀಸ್​ನ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಕೂಡ ಗಾಲ್ಫ್ ಆಡುವಾಗ ಗಾಯ ಮಾಡಿಕೊಂಡಿದ್ದರು. ಇದರಿಂದ ಅವರು ಸಂಪೂರ್ಣ ವಿಶ್ವಕಪ್​ನಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಟೀಂ ಆಸೀಸ್​ಗೆ ಸಾಲು ಸಾಲು ಗಾಯಾಳುಗಳ ಸಮಸ್ಯೆ ಕಾಡುತ್ತಿದೆ.

Published by:shrikrishna bhat
First published: