ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ Monkeygate ವಿವಾದ, ಏನಿದು ಬಜ್ಜಿ - ಸೈಮಂಡ್ಸ್ ನಡುವಿನ ಕಾಂಟ್ರವರ್ಸಿ?

ಶೇನ್ ವಾರ್ನ್ ನಿಧನದ ನಂತರ ಇದೀಗ ಮತ್ತೊಬ್ಬ ಅಪ್ರತಿಮ ಆಟಗಾರನ ಸಾವು ಕ್ರಿಕೆಟ್ (Cricket) ಅಭಿಮಾನಿಗಳನ್ನು ದುಃಖದಲ್ಲಿ ಮುಳುಗಿಸಿದೆ. ಸೆಲೆಬ್ರಿಟಿಗಳು, ಮಾಜಿ ಆಟಗಾರರು ಮತ್ತು ಕ್ರೀಡಾಭಿಮಾನಿಗಳು ಸೈಮಂಡ್ಸ್ ನಿಧನಕ್ಕೆ ಸಂತಾಪ ಸೂಚಿಸಿಸುತ್ತಿದ್ದಾರೆ.

ಮಂಕಿಗೇಟ್ ವಿವಾದ

ಮಂಕಿಗೇಟ್ ವಿವಾದ

  • Share this:
ಆಸ್ಟ್ರೇಲಿಯಾ (Australia) ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ದೊಡ್ಡ ಆಘಾತವಾಗಿದೆ. ಇತ್ತೀಚೆಗೆ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ (Shane Warne) ಅವರ ಅಕಾಲಿಕ ಮರಣವನ್ನು ಅನುಭವಿಸಿದ ತಂಡದ ಅಭಿಮಾನಿಗಳಿಗೆ ಇದು ಸಿಡಿಲು ಬಡಿದಂತತಾಗಿದೆ. ಆಸೀಸ್ ಲೆಜೆಂಡ್, ಮಾಜಿ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ (46) (Andrew Symonds) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಟೌನ್ಸ್‌ವಿಲ್ಲೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಸೈಮಂಡ್ಸ್‌ ಪ್ರಾಣ ಕಳೆದುಕೊಂಡಿದ್ದಾರೆ. ಸೈಮಂಡ್ಸ್ ಸಾವಿನಿಂದ ಕ್ರೀಡಾ ಜಗತ್ತು ಬೆಚ್ಚಿಬಿದ್ದಿದೆ. ಶೇನ್ ವಾರ್ನ್ ನಿಧನದ ನಂತರ ಇದೀಗ ಮತ್ತೊಬ್ಬ ಅಪ್ರತಿಮ ಆಟಗಾರನ ಸಾವು ಕ್ರಿಕೆಟ್ (Cricket) ಅಭಿಮಾನಿಗಳನ್ನು ದುಃಖದಲ್ಲಿ ಮುಳುಗಿಸಿದೆ. ಸೆಲೆಬ್ರಿಟಿಗಳು, ಮಾಜಿ ಆಟಗಾರರು ಮತ್ತು ಕ್ರೀಡಾಭಿಮಾನಿಗಳು ಸೈಮಂಡ್ಸ್ ನಿಧನಕ್ಕೆ ಸಂತಾಪ ಸೂಚಿಸಿಸುತ್ತಿದ್ದಾರೆ.

ಸೈಮಂಡ್ಸ್ ವೃತ್ತಿ ಜೀವನದಲ್ಲಿ ಅಳಿಸಲಾಗದ ವಿವಾದ:

ಆದಾಗ್ಯೂ, ಸೈಮಂಡ್ಸ್ ಜೀವನದಲ್ಲಿ ಅಳಿಸಲಾಗದ ಒಂದು ವಿವಾದವಿತ್ತು. ಅದೇ ಮಂಕಿ ಗೇಟ್ ವಿವಾದ. ಹೌದು, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 'ಮಂಕಿಗೇಟ್' ವಿವಾದ ಸಂಚಲನ ಮೂಡಿಸಿತ್ತು. 2008ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಅವರನ್ನು ಹರ್ಭಜನ್ ಸಿಂಗ್ ಅವರು "ಮಂಗ" ಎಂದು ಕರೆದಿದ್ದರು ಎಂದು ವಿವಾದವಾಗಿತ್ತು. ಕ್ರಿಕೆಟ್ ಆಸ್ಟ್ರೇಲಿಯಾ ಈ ಪದವನ್ನು ವರ್ಣಭೇದ ನೀತಿಯ ಸಂಕೇತವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿತ್ತು.

ಸಿಡ್ನಿ ಪಂದ್ಯದ ವೇಳಿನ ಮಂಕಿ ಗೇಟ್ ವಿವಾದ:

2008 ರ ಸಿಡ್ನಿ ಟೆಸ್ಟ್‌ನಲ್ಲಿ ಅಂಪೈರ್‌ಗಳ ನಿರ್ಧಾರಗಳು ಭಾರತ ತಂಡವನ್ನು ತೀವ್ರವಾಗಿ ಘಾಸಿಗೊಳಿಸಿದವು. ಆಗಿನ್ನೂ ಡಿಆರ್‌ಎಸ್ ಜಾರಿಯಾಗದ ಕಾರಣ ಟೀಂ ಇಂಡಿಯಾ ಸಂಕಷ್ಟ ಅನುಭವಿಸಬೇಕಾಯಿತು. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದಿದ್ದ ಹರ್ಭಜನ್ ಸಿಂಗ್ ಬ್ಯಾಟಿಂಗ್‌ನಲ್ಲಿ 63 ರನ್ ಗಳಿಸಿ ಆಟವಾಡುತ್ತಿದ್ದರು. ಆದರೆ, ಆಂಡ್ರ್ಯೂ ಸೈಮಂಡ್ಸ್ ಬೌಲಿಂಗ್ ಮಾಡುತ್ತಿದ್ದಾಗ ಬ್ಯಾಟಿಂಗ್ ಗೆ ಬಂದ ಹರ್ಭಜನ್ ಸಿಂಗ್ ಕಣ್ಣಲ್ಲೇ ಬೆದರಿದ ಆಸೀಸ್ ಆಲ್ ರೌಂಡರ್ ಗೆ ಏನೋ ಹೇಳಿದರು.

ಇದನ್ನೂ ಓದಿ: RIP Andrew Symonds: ವಿವಾದಗಳಿಂದ ಹೆಸರುವಾಸಿಯಾಗಿದ್ದ ಸೈಮಂಡ್ಸ್, ಖ್ಯಾತ ಕ್ರಿಕೆಟಿಗನ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು

ಬಜ್ಜಿ ಬೆಂಬಲಕ್ಕೆ ನಿಂತ ಸಚಿನ್:

ಆಂಡ್ರ್ಯೂ ಸೈಮಂಡ್ಸ್ ... ಹರ್ಭಜನ್ ಸಿಂಗ್ ತಮ್ಮನ್ನು 'ಮಂಕಿ' ಎಂದು ಕರೆದಿದ್ದಾರೆ ಎಂದು ಆರೋಪಿಸಿದರು. ಆದರೆ, ಹರ್ಭಜನ್ ಸಿಂಗ್ ತಾನು ಕೋತಿ ಎಂದು ಕರೆದಿಲ್ಲ ಎಂದು ಹೇಳಿದ್ದು, 'ಮೈ... ಕೀ' ಕರೆದಿದ್ದಾಗಿ ಹೇಳಿದ್ದರು. ಹರ್ಭಜನ್ ಸಿಂಗ್ ಅವರ ಇನ್ನೊಂದು ಬದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಚಿನ್ ತೆಂಡೂಲ್ಕರ್ ಮಧ್ಯಪ್ರವೇಶಿಸಿ, ಹರ್ಭಜನ್ ಮಂಕಿ ಎಂದು ಹೇಳಿಲ್ಲವೆಂದು ಬಜ್ಜಿ ಬೆಂಬಕ್ಕೆ ನಿಂತಿದ್ದರು.

ಕ್ರಿಕೆಟ್ ಲೋಕದಲ್ಲಿ ಚಂಚಲನ ಮೂಡಿಸದ ವಿವಾದ:

ಈ ವಿವಾದವು ಕ್ರಿಕೆಟ್ ಲೋಕದಲ್ಲಿ ದೊಡ್ಡ ಚಂಚಲನವನ್ನೇ ಮೂಡಿಸಿತು. ಹೀಗಾಗಿ ಈ ವಿವಾದದ ವಿಚಾರಣೆ ಅನೇಕ ದಿನಗಳ ಕಾಲ ನಡೆಯಿತು. ಸೈಮಂಡ್ಸ್ ಅವರನ್ನು 'ಮಂಕಿ' ಎಂದು ಕರೆದ ಆರೋಪದಲ್ಲಿ ಆಸ್ಟ್ರೇಲಿಯಾ ಹರ್ಭಜನ್ ಸಿಂಗ್‌ಗೆ ಶೇಕಡಾ 50 ಪಂದ್ಯ ಶುಲ್ಕವನ್ನು ವಿಧಿಸಿತು ಮತ್ತು ಮೂರು ಪಂದ್ಯಗಳ ನಿಷೇಧವನ್ನು ವಿಧಿಸಿತು. ಆದರೆ, ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಟೀಂ ಇಂಡಿಯಾ ಹರ್ಭಜನ್ ಸಿಂಗ್ ಬೆಂಬಲಕ್ಕೆ ಒಟ್ಟಾಗಿ ನಿಂತು, ಭಜ್ಜಿ ಮೇಲಿನ ನಿಷೇಧ ತೆರವು ಮಾಡದಿದ್ದರೆ ಆಸೀಸ್ ಪ್ರವಾಸ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.

ಸೈಮಂಡ್ಸ್ ವೃತ್ತಿ ಜೀವನದ ಕಪ್ಪುಚುಕ್ಕೆ ಮಂಕಿಗೇಟ್ ವಿವಾದ:

ಟೀಂ ಇಂಡಿಯಾದ ಬೇಡಿಕೆಯನ್ನು ಮುಂದಿಟ್ಟುಕೊಂಡು ಆಸ್ಟ್ರೇಲಿಯಾ ತಂಡ ಹರ್ಭಜನ್ ಸಿಂಗ್ ಮೇಲಿನ ನಿಷೇಧವನ್ನು ಹಿಂಪಡೆಯಿತು. ಮ್ಯಾಚ್ ರೆಫರಿ ಮೈಕ್ ಪ್ರಾಕ್ಟರ್ ಕೂಡ ಹರ್ಭಜನ್ ಸಿಂಗ್ ವಿವಾದದಲ್ಲಿ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿದರು. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 162 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 61 ರನ್ ಗಳಿಸಿದ್ದ ಆಂಡ್ರ್ಯೂ ಸೈಮಂಡ್ಸ್ ಬೌಲಿಂಗ್‌ನಲ್ಲಿ 3 ವಿಕೆಟ್ ಪಡೆದು ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಪಡೆದಿದ್ದರು.

ಇದನ್ನೂ ಓದಿ:  Andrew Symonds: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ! ಕಾರು ಅಪಘಾತದಲ್ಲಿ ಖ್ಯಾತ ಕ್ರಿಕೆಟಿಗ ನಿಧನ

ಅಲ್ಲಿಯವರೆಗೂ ಸ್ಟಾರ್ ಆಟಗಾರರಾಗಿದ್ದ ಆಂಡ್ರ್ಯೂ ಸೈಮಂಡ್ಸ್ ಮಂಕಿ ಗೇಟ್ ವಿವಾದದ ನಂತರ ಫಾರ್ಮ್ ಕಳೆದುಕೊಂಡಿದ್ದರು. ಐಪಿಎಲ್‌ನಲ್ಲಿ ಆಡದಿರಲು ನಿರ್ಧರಿಸಿದ ಅವರು ನಂತರ ಅಕ್ಷರಶಃ ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದರು. ಆಂಡ್ರ್ಯೂ ಸೈಮಂಡ್ಸ್ ಅವರ ಕ್ರಿಕೆಟ್ ವೃತ್ತಿಜೀವನವು ಮಂಕಿಗೇಟ್ ವಿವಾದದಿಂದ ಅರ್ಥಪೂರ್ಣವಾಗಿ ಕೊನೆಗೊಂಡಿತು ಎಂದು ಆಗಿನ ನಾಯಕ ರಿಕಿ ಪಾಂಟಿಂಗ್ ನಂಬಿದ್ದಾರೆ. ಈ ವಿಷಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ (ಸಿಎ) ಅಧಿಕಾರಿಗಳು ಸೈಮಂಡ್ಸ್‌ಗೆ ಬೆಂಬಲ ನೀಡಲಿಲ್ಲ ಎಂದು ಅವರು ಹೇಳಿದರು. ಇದರಿಂದ ಸೈಮಂಡ್ಸ್ "ಆಳವಾಗಿ ಅಸಮಾಧಾನಗೊಂಡಿದ್ದಾರೆ" ಎಂದು ಪಾಂಟಿಂಗ್ ಒಮ್ಮೆ ಹೇಳಿಕೊಂಡಿದ್ದರು.

ಸೈಮಂಡ್ಸ್ ನಿಧನಕ್ಕೆ ಗಣ್ಯರಿಂದ ಸಂತಾಪ:

ಅನೇಕ ಗಣ್ಯರು ಮತ್ತು ಕ್ರಿಕೆಟಿಗರು ಸೈಮಂಡ್ಸ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇದು ನಮಗೆ ದುಃಖದ ದಿನವಾಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಲರ್ ಹೇಳಿದ್ದಾರೆ. ಇದಲ್ಲದೇ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್ ಕ್ರಿಸ್ಟ್ ಹೇಳಿದ್ದಾರೆ. ಇವರಲ್ಲದೇ ಪಾಕ್​ನ ವೇಗಿ ಶೋಯೆಬ್ ಮಲ್ಲಿಕ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಆಂಡ್ರ್ಯೂ ಸೈಮಂಡ್ಸ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಅವರ ನಿಧನದ ದುಖಃವನ್ನು ತಡೆದುಕೊಳ್ಳು ಶಕ್ತಿಯನ್ನು ಕುಟುಂಬ ಮತ್ತು ಸ್ನೇಹಿತರಿಗೆ ನೀಡಲಿ. ಅಗಲಿದ ಸೈಮಂಡ್ಸ್ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಂತಾಪದ ಟ್ವೀಟ್ ಮಾಡಿದ್ದಾರೆ.
Published by:shrikrishna bhat
First published: