HOME » NEWS » Sports » AUSTRALIAN CRICKET SIDE ALL OUT FOR 10 RUNS

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಪಂದ್ಯ: ಆಸ್ಟ್ರೇಲಿಯಾ ತಂಡ ಕೇವಲ 10 ರನ್​ಗೆ ಆಲೌಟ್!

ಇದರಲ್ಲಿ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ ಸೌತ್ ಆಸ್ಟ್ರೇಲಿಯಾ ತಂಡದ ಗಳಿಸಿದ ಮೊತ್ತಕ್ಕಿಂತ ಇತರೆ ರನ್​ಗಳು ಹೆಚ್ಚಾಗಿತ್ತು.

zahir | news18
Updated:February 7, 2019, 5:37 PM IST
ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಪಂದ್ಯ: ಆಸ್ಟ್ರೇಲಿಯಾ ತಂಡ ಕೇವಲ 10 ರನ್​ಗೆ ಆಲೌಟ್!
ಸಾಂದರ್ಭಿಕ ಚಿತ್ರ
  • News18
  • Last Updated: February 7, 2019, 5:37 PM IST
  • Share this:
ಕ್ರಿಕೆಟ್​ ಜಗತ್ತಿನಲ್ಲಿ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುವುದು ಸಾಮಾನ್ಯ. ಇಂತಹ ದಾಖಲೆಗಳು ಕೂಡ ಶಾಶ್ವತವಲ್ಲ. ಹೀಗಾಗಿಯೇ ಹೊಸ ರೆಕಾರ್ಡ್​ಗಳು ದಾಖಲಾಗುತ್ತಿದ್ದಂತೆ ಹಳೆಯ ದಾಖಲೆಗಳು ಮರೆಯಾಗುತ್ತವೆ. ಆದರೆ ಕೆಲವೊಂದು ದಾಖಲೆಗಳು ಇಡೀ ಕ್ರಿಕೆಟ್​ ಪ್ರೇಮಿಗಳನ್ನು ಅಚ್ಚರಿಗೆ ದೂಡುತ್ತದೆ. ಅಂತಹದೊಂದು ಕಳಪೆ ವಿಶ್ವ ದಾಖಲೆ ನಿರ್ಮಾಣವಾಗಿದೆ. ಆಸ್ಟ್ರೇಲಿಯಾ ದೇಶೀಯ ಮಹಿಳಾ ಟಿ20 ಕ್ರಿಕೆಟ್​ ವಿಶ್ವದ ಹೀನಾಯ ದಾಖಲೆಗೆ ಸಾಕ್ಷಿಯಾಗಿದೆ.

ಬುಧವಾರ ನಡೆದ ನ್ಯೂ ಸೌತ್ ವೇಲ್ಸ್​ ವಿರುದ್ಧದ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಾ ತಂಡ ಕೇವಲ 10 ರನ್​ಗೆ ಆಲೌಟ್​ ಆಗಿದ್ದಾರೆ. ಇದರೊಂದಿಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟಾದ ತಂಡ ಎಂಬ ಕುಖ್ಯಾತಿ ಸೌತ್ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್​ ಟೀಂ ಪಡೆದುಕೊಂಡಿದೆ. ಇದರೊಂದಿಗೆ ಒಂದು ಪಂದ್ಯದಲ್ಲಿ ಅತಿ ಹೆಚ್ಚು ಸೊನ್ನೆ ಸುತ್ತಿದ ತಂಡ ಎಂಬ ದಾಖಲೆಯನ್ನು ಆಟಗಾರ್ತಿಯರು ನಿರ್ಮಿಸಿದ್ದಾರೆ. ಕ್ರಿಕೆಟ್​ ಲೋಕದ ಅಚ್ಚರಿಗೆ ಕಾರಣವಾದ ಈ ಪಂದ್ಯದಲ್ಲಿ 10 ಆಟಗಾರ್ತಿಯರು ಡಕೌಟ್​ ಆಗಿ ಕ್ರೀಸ್​ನಿಂದ ಕಾಲ್ಕಿತ್ತಿದ್ದರು.

ಇದರಲ್ಲಿ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ ಸೌತ್ ಆಸ್ಟ್ರೇಲಿಯಾ ತಂಡದ ಗಳಿಸಿದ ಮೊತ್ತಕ್ಕಿಂತ ಇತರೆ ರನ್​ಗಳು ಹೆಚ್ಚಾಗಿದ್ದವು. ಆರಂಭಿಕ ಬ್ಯಾಟ್ಸ್​ವುಮೆನ್ ಬೌಂಡರಿ ಬಾರಿಸಿ 4 ರನ್​ಗಳಿಸಿದ್ದೇ ಹೆಚ್ಚು. ಇನ್ನುಳಿದ 6 ರನ್​ಗಳು ಇತರೆ ರೂಪದಲ್ಲಿ ದೊರೆತಿದೆ. ಈ ಆರು ರನ್​ಗಳನ್ನು ವೈಡ್​ ಮೂಲಕ ನ್ಯೂ ಸೌತ್ ವೇಲ್ಸ್ ನೀಡಿದ್ದರಿಂದ ಎರಡಂಕಿ ಮೊತ್ತ ದಾಖಲಾಗಿತ್ತು.

10.2 ಓವರ್‌ಗಳ ಕಾಲ ಬ್ಯಾಟ್​ ಮಾಡಿದ ಸೌತ್ ಆಸ್ಟ್ರೇಲಿಯಾ 10 ರನ್​ಗಳಿಗೆ ಸರ್ವಪತನ ಕಂಡಿತು. ಇನ್ನು ಮಾರಕ ದಾಳಿ ನಡೆಸಿದ ನ್ಯೂ ಸೌತ್ ವೇಲ್ಸ್​ನ ವೇಗಿ ರೋಕ್ಸನೆ ವ್ಯಾನ್ 2 ಓವರ್‌ಗಳಲ್ಲಿ 1 ರನ್‌ ನೀಡಿ 5 ವಿಕೆಟ್‌ ಕಿತ್ತರು.


11 ರನ್​ಗಳ ಗುರಿ ಬೆನ್ನತ್ತಿದ್ದ ಸೌತ್​ ವೇಲ್ಸ್​ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ. 15 ಎಸೆತಗಳನ್ನು ಎದುರಿಸಿದ ತಂಡ 2 ವಿಕೆಟ್​ ಕಳೆದುಕೊಂಡು 11 ರನ್​ಗಳ ಗುರಿ ಮುಟ್ಟಿತು. ಈ ಪಂದ್ಯವು ಕ್ರಿಕೆಟ್​ ಜಗತ್ತಿನ ಅತ್ಯಂತ ಕಳಪೆ ಪಂದ್ಯಗಳಲ್ಲಿ ಒಂದು ವಿಶ್ಲೇಷಲಾಗುತ್ತಿದೆ.

ಇದನ್ನೂ ಓದಿ: ನಟಸಾರ್ವಭೌಮ ಅಪ್ಪು ಆರ್ಭಟ: ಕೆ.ಜಿ.ಎಫ್ ದಾಖಲೆ ಧೂಳೀಪಟ!

First published: February 7, 2019, 12:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading