ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ (IND vs AUS) ಸರಣಿ ಫೆ. 9ರಿಂದ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಆಸೀಸ್ ತಂಡಕ್ಕೆ ಬೇಸರದ ಸುದ್ದಿಯೊಂದು ಕೇಳಿಬಂದಿದೆ. ವಾಸ್ತವವಾಗಿ, ಆಸ್ಟ್ರೇಲಿಯಾದ T20 ತಂಡದ ನಾಯಕ ಆರೋನ್ ಫಿಂಚ್ (Aaron Finch) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಫಿಂಚ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ವಿಚಾರವನ್ನು ಫಿಂಚ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (Cricket Australia) ಅಧಿಕೃತವಾಗಿ ತಿಳಿಸಿದೆ.
ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಫಿಂಚ್:
ನಿವೃತ್ತಿಯ ನಿರ್ಧಾರದ ಕುರಿತು ಆರೋನ್ ಫಿಂಚ್ ಅಧಿಕೃತವಾಗಿ ತಿಳಿಸಿದ್ದು, ‘ನಾನು 2024ರ ಟಿ 20 ವಿಶ್ವಕಪ್ ವರೆಗೆ ಆಡುವುದಿಲ್ಲ ಎಂದು ಅರಿತುಕೊಂಡಿದ್ದೇನೆ, ಇದೀಗ ವಿಶ್ವಕಪ್ಗಾಗಿ ತಂಡವನ್ನು ಸಿದ್ಧಪಡಿಸಲು ನಾನು ಈ ನಿರ್ಧಾರ ಕೈಗೊಳ್ಳಲು ಸರಿಯಾದ ಸಮಯವಾಗಿದೆ. ನನ್ನ ಅಂತರರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲ ಅಭಿಮಾನಿಗಳಿಗೆ ನಾನು ದೊಡ್ಡ ಧನ್ಯವಾದ ಹೇಳಲು ಬಯಸುತ್ತೇನೆ‘ ಎಂದು ಅವರು ಹೇಳಿದ್ದಾರೆ. ಫಿಂಚ್ ನಿವೃತ್ತಿಯಿಂದ ಆಸ್ಟ್ರೇಲಿಯ ಟಿ20ಯಲ್ಲಿ ಹೊಸ ನಾಯಕನನ್ನು ಹುಡುಕಬೇಕಿದೆ.
Our World Cup winning, longest serving men's T20I captain has called time on a remarkable career.
Thanks for everything @AaronFinch5 🤝 pic.twitter.com/cVdeJQmCXN
— Cricket Australia (@CricketAus) February 6, 2023
ಇದನ್ನೂ ಓದಿ: IND vs AUS 2023: ಆಸೀಸ್ ವಿರುದ್ಧ ಭಾರತ ಸೋಲಲಿದೆ! ಬಾರ್ಡರ್ ಗವಾಸ್ಕರ್ ಟ್ರೋಫಿಯ ಭವಿಷ್ಯ ನುಡಿದ ಮಾಜಿ ಸ್ಟಾರ್ ಕ್ರಿಕೆಟಿಗ
ಫಿಂಚ್ ವೃತ್ತಿಜೀವನ:
ಇನ್ನು, ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಆರೋನ್ ಫಿಂಚ್ ಸಹ ಕ್ರಿಕೆಟ್ ಲೋಕದ ದಿಗ್ಗಜ ಕ್ರಿಕೆಟಿಗರಲ್ಲಿ ಒಬ್ಬರು. ಅವರ ನಾಯಕತ್ವದಲ್ಲಿಆಸ್ಟ್ರೇಲಿಯಾ ಟಿ20 ಕ್ರಿಕೆಟ್ ತಂಡ 76 ಪಂದ್ಯಗಳನ್ನು ಆಡಿದ್ದು, ಓರ್ವ ಯಶಸ್ವಿ ನಾಯಕ ಎಂಬ ಸಾಧನೆ ಮಾಡಿದ್ದಾರೆ. ಅಲ್ಲದೇ, ಆಸ್ಟ್ರೇಲಿಯಾ 2021ರಲ್ಲಿ ಯುಎಇನಲ್ಲಿ ಫಿಂಚ್ ನಾಯಕತ್ವದಲ್ಲಿ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತ್ತು. ಇನ್ನು, ಆರೋನ್ ಫಿಂಚ್ ತಮ್ಮ ವೃತ್ತಿಜೀವನದಲ್ಲಿ 146 ಏಕದಿನ ಪಂದ್ಯಗಳಲ್ಲಿ 39ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಜೊತೆಗೆ 103 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 34.28ರ ಸರಾಸರಿ ಮತ್ತು 142.53ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಇದರೊಂದಿಗೆ ಫಿಂಚ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಬಾರಿ ಅತ್ಯಧಿಕ ಸ್ಕೋರ್ ಗಳಿಸಿದ ದಾಖಲೆಯನ್ನು ಹೊಂದಿದ ಆಟಗಾರನಾಗಿದ್ದಾರೆ. ಟಿ20 ತಂಡಕ್ಕೆ ಬದಲಿ ನಾಯಕನನ್ನು ಕ್ರಿಕೆಟ್ ಆಸ್ಟ್ರೇಲಿಯಾ ಇನ್ನೂ ಪ್ರಕಟಿಸಿಲ್ಲ.
ಇನ್ನು, ಐಪಿಎಲ್ ನಲ್ಲಿ ಆರೋನ್ ಫಿಂಚ್ ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಸೇರಿದಂತೆ 9 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರು 92 ಪಂದ್ಯಗಳಿಂದ 15 ಅರ್ಧಶತಕ ಸೇರಿದಂತೆ 2091 ರನ್ ಗಳಿಸಿದ್ದಾರೆ. 2020ರ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಆರಂಭಿಕ ಬ್ಯಾಟರ್ ಆಗಿದ್ದ ಆರೋನ್ ಫಿಂಚ್ 12 ಪಂದ್ಯಗಳಲ್ಲಿ 268 ರನ್ ಗಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ