• Home
  • »
  • News
  • »
  • sports
  • »
  • Glenn Maxwell Wedding: ತಮಿಳು ಸಂಪ್ರದಾಯದಂತೆ ವಿವಾಹವಾದ RCB ಸ್ಟಾರ್ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್

Glenn Maxwell Wedding: ತಮಿಳು ಸಂಪ್ರದಾಯದಂತೆ ವಿವಾಹವಾದ RCB ಸ್ಟಾರ್ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್

ಮ್ಯಾಕ್ಸ್​ವೆಲ್-ವಿನಿ ರಾಮನ್

ಮ್ಯಾಕ್ಸ್​ವೆಲ್-ವಿನಿ ರಾಮನ್

ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)  ತಂಡದ ಸ್ಟಾರ್ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) ಭಾರತೀಯ ಮೂಲದ ತಮಿಳುನಾಡಿನ ವಿನಿ ರಾಮನ್​ ಅವರನ್ನು ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

  • Share this:

ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)  ತಂಡದ ಸ್ಟಾರ್ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) ಭಾರತೀಯ ಮೂಲದ ತಮಿಳುನಾಡಿನ ವಿನಿ ರಾಮನ್​ ಅವರನ್ನು ವಿವಾಹವಾಗಿದ್ದಾರೆ. ಮಾರ್ಚ್ 18ರಂದು ಆಸ್ಟ್ರೇಲಿಯಾದಲ್ಲಿ ಕ್ರಿಶ್ಚಿಯನ್​ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಆದರೆ ಇದೀಗ ಈ ನವವಾಹಿತ ಜೋಡಿ ಮತ್ತೆ ಮದುವೆಯಾಗಿದ್ದಾರೆ. ಹೌದು, ಇವರಿಬ್ಬರು ಮಾರ್ಚ್ 27ರಂದು ತಮಿಳುನಾಡಿನಲ್ಲಿ ತಮಿಳು (Tamil) ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಸಧ್ಯ ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದ್ದು, ನೂತನ ಜೋಡಿಗೆ ನೆಟ್ಟಿಗರು ಸೇರಿದಂತೆ ಗಣ್ಯರು ಶುಭ ಹಾರೈಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಭಾರತೀಯ ಮೂಲದ ತಮಿಳು ಹುಡುಗಿ ವಿನಿ ರಾಮನ್ (Vini Raman) ಅವರನ್ನು ವಿವಾಹವಾಗಿದ್ದಾರೆ. ಇದೀಗ ತಮಿಳು ಸಂಪ್ರದಾಯದಲ್ಲಿ ಮೂರು ಕುಣಿತಗಳೊಂದಿಗೆ ಮತ್ತೆ ವಿವಾಹವಾಗಿದ್ದಾರೆ.


ಶೇರ್ವಾನಿಯಲ್ಲಿ ಮಿಂಚಿದ ಮ್ಯಾಕ್ಸಿ:


ಮದುವೆಯಲ್ಲಿ ಮ್ಯಾಕ್ಸ್‌ವೆಲ್ ಪೂರ್ಣ ಪ್ರಮಾಣದ ಭಾರತೀಯರಾಗಿದ್ದಾರೆ. ಶೇರ್ವಾನಿಯಲ್ಲಿ ಮ್ಯಾಕ್ಸ್ ವೆಲ್ ಮಿಂಚಿದರೆ, ವಿನ್ನಿ ರಾಮನ್ ಸೀರೆಯಲ್ಲಿ ಗೊಂಬೆಯಂತೆ ಕಂಡರು. ನಂತರ ಇಬ್ಬರೂ ಹಾರ ಬದಲಾಯಿಸಿಕೊಂಡು ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ತಮಿಳು ಭಾಷೆಯಲ್ಲಿ ವಿವಾಹ ಆಮಂತ್ರಣ ಮುದ್ರಣ:


ಮ್ಯಾಕ್​ವೆಲ್ ಮತ್ತು ವಿನಿ ರಾಮನ್ ವಿವಾಹದ ಲಗ್ನಪತ್ರಿಕೆ ತಮಿಳು ಭಾಷೆಯಲ್ಲಿ ಮುದ್ರಿಸಲಾಗಿತ್ತು. ಇದರಲ್ಲಿ ಮಾರ್ಚ್‌​ 27ರಂದು ವಿವಾಹ ಎಂದು ಪ್ರಕಟಿಸಿಸಲಾಗಿತ್ತು. ಆದರೆ ಇದಕ್ಕೂ ಮೊದಲು ಇಬ್ಬರೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಉಂಗುರವನ್ನು ಬದಲಿಸಿಕೊಂಡು ವಿವಾಹವಾಗಿದ್ದರು. ಅಲ್ಲದೇ ಗ್ಲೇನ್ ಮ್ಯಕ್​ವೆಲ್ ಮತ್ತು ವಿನಿ ರಾಮನ್ ಕಳೆದ 4 ವರ್ಷಗಳಿಂದ ಡೇಟಿಂಗ್​ ನಲ್ಲಿ ಇದ್ದರು. ಇವರು ಪೆಬ್ರವರಿ 2020ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.


ಇದನ್ನೂ ಓದಿ: Glenn Maxwell Wedding: ಚೆನ್ನೈ ನಾರಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮ್ಯಾಕ್ಸ್​ವೆಲ್, ಮ್ಯಾಕ್ಸಿ ಈಗ ಭಾರತದ ಅಳಿಯ


ಆಸೀಸ್​ನಲ್ಲಿ ನೆಲೆಸಿರುವ ವಿನಿ ಕುಟುಂಬ:


ತಮಿಳುನಾಡು ಮೂಲದ ವಿನಿ ರಾಮನ್ ಅವರನ್ನು ಮ್ಯಾಕ್ಸ್​ವೆಲ್ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿನಿ ಆಸ್ಟ್ರೇಲಿಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವಾಗ ಮ್ಯಾಕ್ಸಿ ಪರಿಚಯವಾಗಿ, ಇದೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಮೊದಲ ಬಾರಿಗೆ 2013 ರಲ್ಲಿ ಭೇಟಿಯಾದರು. ಇವರಿಬ್ಬರನ್ನು ಮೆಲ್ಬೋರ್ನ್ ಸ್ಟಾರ್ಸ್ ಸಮಾರಂಭದಲ್ಲಿ ಪರಿಚಯಿಸಲಾಯಿತು. ಇಬ್ಬರೂ 2017 ರಿಂದ ಡೇಟಿಂಗ್ ನಡೆಸುತ್ತಿದ್ದಾರೆ.


ಐಪಿಎಲ್​​ನಿಂದ ದೂರವಿರು ಮ್ಯಾಕ್ಸ್​ವೆಲ್:


ಮದುವೆಯ ಕಾರಣದಿಂದ ಪಾಕಿಸ್ತಾನ ಪ್ರವಾಸದಿಂದ ದೂರವಿರುವ ಗ್ಲೇನ್ ಮ್ಯಾಕ್​ವೇಲ್​, ಸದ್ಯ ಐಪಿಎಲ್​ ನಲ್ಲಿ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡದ ಪರ ಕಣಕ್ಕೀಳಿಯುತ್ತಿದ್ದಾರೆ. ಆದರೆ ಐಪಿಎಲ್ ಮೂಲಗಳ ಪ್ರಕಾರ ಅವರು ಏಪ್ರಿಲ್ 5ರ ನಂತರ ಆರ್‌ಸಿಬಿ ಪಾಳಯ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಗಣ್ಯರಿಂದ ಶುಭ ಹಾರೈಕೆ:


ಭಾರತೀಯ ಕ್ರಿಕೆಟಿಗರಾದ ಕೆಎಲ್ ರಾಹುಲ್, ಯಜ್ವೇಂದ್ರ ಚಹಾಲ್, ಅವರ ಪತ್ನಿ ಧನಶ್ರೀ ವರ್ಮಾ ಮತ್ತು ಮಯಾಂಕ್ ಅಗರ್ವಾಲ್ ಅವರ ಪತ್ನಿ ಆಶಿತಾ ಸೂದ್ ಅವರು ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಅವರನ್ನು ಅಭಿನಂದಿಸಿದ್ದಾರೆ.


ಇದನ್ನೂ ಓದಿ: IPL 2022: RCB ನಾಯಕ ಯಾರು ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಯಾವಾಗ?


ಭಾರತೀಯಳನ್ನು ವರಿಸಿದ ಆಸೀಸ್​ನ 2ನೇ ಕ್ರಿಕೆಟಿಗ:


ಮ್ಯಾಕ್ಸ್‌ವೆಲ್ ಭಾರತೀಯ ಮಹಿಳೆಯನ್ನು ವರಿಸುತ್ತಿರುವ ಎರಡನೇ ಆಸೀಸ್ ಕ್ರಿಕೆಟಿಗರಾಗಿದ್ದಾರೆ.ಈ ಹಿಂದೆ ಆಸೀಸ್ ವೇಗದ ಬೌಲರ್ ಶಾನ್ ಟೈಟ್ ಸಹ ಭಾರತೀಯ ಮಹಿಳೆಯನ್ನು ವಿವಾಹವಾಗಿದ್ದರು. ಇದೀಗ ಗ್ಲೇನ್​ ಮ್ಯಾಕ್ಸ್​ವೆಲ್ ವಿನಿ ರಾಮನ್ ವಿವಾಹವಾಗುವ ಮೂಲಕ 2ನೇ ಅವರಾಗಿ ಸ್ಥಾನ ಪಡೆದಿದ್ದಾರೆ.

Published by:shrikrishna bhat
First published: