PV Sindhu: ಎಲ್ಲಾ ಓಕೆ, ಪಿವಿ ಸಿಂಧು ಫೋಟೋ ವಾರ್ನರ್​ ಹಾಕಿದ್ಯಾಕೆ?

ಕಾಮನ್​ವೆಲ್ತ್​ನಲ್ಲಿ ಚಿನ್ನದ ಪದಕ ಸ್ವೀಕರಿಸಿದ ಸಿಂಧು ಅವರ ಫೋಟೋವನ್ನು ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಅದರ ಅಡಿಯಲ್ಲಿ ಶೀರ್ಷಿಕೆಯನ್ನು ನೀಡಿ ಸಿಂಧುವನ್ನು ಹೊಗಳಿದ್ದಾರೆ.

ವಾರ್ನರ್​ - ಪಿವಿ ಸಿಂಧು

ವಾರ್ನರ್​ - ಪಿವಿ ಸಿಂಧು

  • Share this:
ಆಸ್ಟ್ರೇಲಿಯಾದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ (David Warner) ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ Instagram ವೀಡಿಯೊಗಳು ಮತ್ತು ಟ್ವೀಟ್‌ಗಳ ಮೂಲಕ ಮೈದಾನದ ಹೊರಗೆ ಅಭಿಮಾನಿಗಳನ್ನು ರಂಜಿಸುತ್ತಿತ್ತಾರೆ. ವಾರ್ನರ್ ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲದೆ ಕ್ರಿಕೆಟ್ ಆಡುವ ಪ್ರಪಂಚದ ಇತರ ದೇಶಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ. ಐಪಿಎಲ್‌ನಿಂದಾಗಿ ವಾರ್ನರ್‌ಗೆ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದೇ ವಾರ್ನ್ ತಮ್ಮ ಪೋಸ್ಟ್ ಒಂದರಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಈ ಬಾರಿ ಅವರ ಪೋಸ್ಟ್​ ಭಾತೀಯರ ಮೆಚ್ಚುಗೆಗೆ ಪಾತ್ರವಾಗಿದೆ.  ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಒಲಿಂಪಿಕ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu) ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ( Commonwealth games) ಚಿನ್ನದ ಪದಕವನ್ನೂ ಗೆದ್ದಿದ್ದಾರೆ. ಪದಕ ಸ್ವೀಕರಿಸಿದ ಸಿಂಧು ಅವರ ಫೋಟೋವನ್ನು ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಅದರ ಅಡಿಯಲ್ಲಿ ಶೀರ್ಷಿಕೆಯನ್ನು ನೀಡಿ ಸಿಂಧುವನ್ನು ಹೊಗಳಿದ್ದಾರೆ.

ಪಿ.ವಿ ಸಿಂಧು ಫೋಟೋ ಹಂಚಿಕೊಂಡ ವಾರ್ನರ್​:

ಹೌದು, ಭಾರತೀಯ ಹಾಡುಗಳಿಗೆ, ರೀಲ್ಸ್ ಗಳನ್ನು ಮಾಡುವ ಮೂಲಕ ಸಖತ್ ಚರ್ಚೆಯಲ್ಲಿರುತ್ತಿದ್ದ ಆಸೀಸ್​ನ ಡೇವಿಡ್​ ವಾರ್ನರ್​ ಇದೀಗ ಮತ್ತೊಂದು ಪೋಸ್ಟ್ ಮಾಡುವ ಮೂಲಕ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಈ ಬಾರಿ  ಕಾಮನ್​ವೆಲ್ತ್ 2022ರಲ್ಲಿ ಚಿನ್ನ ಗೆದ್ದ ಭಾರತೀಯ ಆಟಗಾರ್ತಿಯಾದ ಪಿ.ವಿ ಸಿಂಧು ಅವರ ಫೋಟೋವನ್ನು ಹಂಚಿಕೊಂಡು ಶುಭಾಷಯವನ್ನು ಕೋರಿದ್ದಾರೆ. ಅಲ್ಲದೇ ‘ವೆಲ್​ ಡನ್​ ಪಿವಿ ಸಿಂಧು. ಅದ್ಭುತವಾದ ಪ್ರದರ್ಶನ‘ ಎಂದು ಬರೆದುಕೊಂಡಿದ್ದಾರೆ.


ವಾರ್ನರ್ ಅವರ ಈ ಇನ್‌ಸ್ಟಾಗ್ರಾಮ್ ಪೋಸ್ಟ್ ಇದುವರೆಗೆ ಐದೂವರೆ ಲಕ್ಷ ಲೈಕ್‌ಗಳನ್ನು ಪಡೆದಿದೆ. ಅಷ್ಟೇ ಅಲ್ಲ, ಡೇವಿಡ್ ಪತ್ನಿ ಕ್ಯಾಂಡಿಸ್ ವಾರ್ನನ್ ಕೂಡ ಕಮೆಂಟ್ ಮಾಡಿ 'ವೆರಿ ನೈಸ್' ಎಂದಿದ್ದಾರೆ.

ಕಾಮನ್‌ವೆಲ್ತ್‌ನಲ್ಲಿ ಸಿಂಧು ' ಗೋಲ್ಡನ್ ರನ್ ':

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಅಂತಿಮ ದಿನದಂದು ಭಾರತದ ಬ್ಯಾಡ್ಮಿಂಟನ್ ಆಟಗಾರರು ಮೂರು ಚಿನ್ನದ ಪದಕಗಳನ್ನು ಪಡೆದರು. ಆದರೆ ಸಿಂಧು ಅವರ ಯಶಸ್ಸು ವಿಶೇಷವಾಗಿತ್ತು. ಸಿಂಧು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಕೆನಡಾದ ಮಿಚೆಲ್ ಲೀ ಅವರನ್ನು ಸೋಲಿಸಿದರು. ಸಿಂಧು ಫೈನಲ್‌ನಲ್ಲಿ 21-15, 21-13 ಅಂತರದಲ್ಲಿ ಗೆದ್ದು ಚೊಚ್ಚಲ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ಗೆದ್ದರು.

ಇದನ್ನೂ ಓದಿ: PV Sindhu: ಚಿನ್ನ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು; ಇತಿಹಾಸ ನಿರ್ಮಿಸಿದ ಆಟಗಾರ್ತಿ!

ಅದಕ್ಕೂ ಮುನ್ನ 2014ರಲ್ಲಿ ಸಿಂಧು ಮೊದಲ ಬಾರಿಗೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಆದರೆ 2018 ರಲ್ಲಿ, ಸಿಂಗ್ ಗೋಲ್ಡ್ ಕೋಸ್ಟ್‌ನಲ್ಲಿ ಒಂದು ಹೆಜ್ಜೆ ಮುಂದಿಟ್ಟರು. ಸಿಂಧು ಗೋಲ್ಡ್ ಕೋಸ್ಟ್‌ನಲ್ಲಿ ಸ್ವಲ್ಪದರಲ್ಲೇ ಚಿನ್ನದ ಪದಕ ವಂಚಿತರಾದರು. ಫೈನಲ್‌ನಲ್ಲಿ ಸೋತಿದ್ದರಿಂದ ಬೆಳ್ಳಿ ಪದಕ ಗೆದ್ದುಕೊಂಡರು. ಆದರೆ ಸಿಂಧು ಅವರ ಚಿನ್ನದ ಯಶಸ್ಸಿನ ಕನಸು ಅಂತಿಮವಾಗಿ ಬರ್ಮಿಂಗ್ಹ್ಯಾಮ್ನಲ್ಲಿ ನನಸಾಯಿತು.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ಗೆ ಟೀಂ ಇಂಡಿಯಾ ಪಕ್ರಟ, ಕನ್ನಡಿಗನಿಗೆ ಉಪ ನಾಯಕನ ಪಟ್ಟ

ಆಸ್ಟ್ರೇಲಿಯಾ ಅಗ್ರಸ್ಥಾನ, ಭಾರತಕ್ಕೆ 4ನೇ ಸ್ಥಾನ:

ಅದು ಕ್ರಿಕೆಟ್ ಮೈದಾನವಾಗಲಿ ಅಥವಾ ಇತರ ಅಂತಾರಾಷ್ಟ್ರೀಯ ಸ್ಪರ್ಧೆಯಾಗಲಿ. ಆಸ್ಟ್ರೇಲಿಯಾ ಆಟಗಾರರು ಎಲ್ಲೆಡೆ ಪ್ರಾಬಲ್ಯ ಹೊಂದಿದ್ದಾರೆ. ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಆಸ್ಟ್ರೇಲಿಯಾದ ಅಥ್ಲೀಟ್ ಗಳು ಅಕ್ಷರಶಃ ಪದಕದ ಮಳೆ ಸುರಿಸಿದರು. 67 ಚಿನ್ನ, 57 ಬೆಳ್ಳಿ ಮತ್ತು 54 ಕಂಚಿನ ಪದಕಗಳೊಂದಿಗೆ ಆಸ್ಟ್ರೇಲಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಕಿ ಮತ್ತು ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಆದರೂ ಭಾರತ ತಂಡ ಈ ಬಾರಿ ಉತ್ತಮ ಪ್ರದರ್ಶನ ತೋರಿದ್ದು, 61 ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ.
Published by:shrikrishna bhat
First published: