ಕೇವಲ 1 ಎಸೆತದಲ್ಲಿ ಬರೋಬ್ಬರಿ 17 ರನ್ ನೀಡಿದ ಬೌಲರ್: ಹೇಗೆ ಇಲ್ಲಿದೆ ವಿಡಿಯೋ ನೋಡಿ

ಸದ್ಯ ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಬಿಗ್​ ಬ್ಯಾಶ್​ ಲೀಗ್​ನಲ್ಲಿ ಈ ಘಟನೆ ನಡೆದಿದ್ದು, ಹಾಬರ್ಟ್​ ಹರಿಕೇನ್ಸ್​ ತಂಡದ ಬೌಲರ್​​ ರಿಲೆ ಮೆರೆಡಿತ್ ತನ್ನ 1 ಎಸೆತದಲ್ಲಿ 17 ರನ್ ನೀಡಿದವರಾಗಿದ್ದಾರೆ.

Vinay Bhat | news18
Updated:February 7, 2019, 8:06 PM IST
ಕೇವಲ 1 ಎಸೆತದಲ್ಲಿ ಬರೋಬ್ಬರಿ 17 ರನ್ ನೀಡಿದ ಬೌಲರ್: ಹೇಗೆ ಇಲ್ಲಿದೆ ವಿಡಿಯೋ ನೋಡಿ
Pic: Twitter
Vinay Bhat | news18
Updated: February 7, 2019, 8:06 PM IST
ಕ್ರಿಕೆಟ್​ನಲ್ಲಿ ಒಂದಲ್ಲಾ ಒಂದು ವಿಚಿತ್ರ ಘಟನೆಗಳು ನಡೆಯುತ್ತಲೆ ಇರುತ್ತವೆ. ಇದಕ್ಕೆ ಹೊಸ ಸೇರ್ಪಡೆ ಆಸ್ಟ್ರೇಲಿಯಾ ಬೌಲರ್ ಒಬ್ಬ ತನ್ನ ಒಂದೇ ಎಸೆತದಲ್ಲಿ ಬರೋಬ್ಬರಿ 17 ರನ್ ನೀಡಿರುವುದು. ಹೇಗೆ ಅಂತಿರ ಈ ಸ್ಟೋರಿ ಓದಿ..

ಸದ್ಯ ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಬಿಗ್​ ಬ್ಯಾಶ್​ ಲೀಗ್​ನಲ್ಲಿ ಈ ಘಟನೆ ನಡೆದಿದ್ದು, ಹಾಬರ್ಟ್​ ಹರಿಕೇನ್ಸ್​ ತಂಡದ ಬೌಲರ್​​ ರಿಲೆ ಮೆರೆಡಿತ್ ತನ್ನ 1 ಎಸೆತದಲ್ಲಿ 17 ರನ್ ನೀಡಿದವರಾಗಿದ್ದಾರೆ. ಹಾಬರ್ಟ್​ ತಂಡದ ನೀಡಿದ್ದ 184 ರನ್​ಗಳ ಸವಾಲು ಸ್ವೀಕರಿಸಿದ ಮೆಲ್ಬೋರ್ನ್​​​ ರೆನೆಗೇಡ್ಸ್​​ ತಂಡಕ್ಕೆ ಮೊದಲ ಓವರ್​ನಲ್ಲೇ ಒಟ್ಟು 23 ರನ್ ದಕ್ಕಿತು.

ಮೊದಲ ಓವರ್​​ನ ಮೆರೆಡಿತ್ ಅವರ ಒಂದು ಹಾಗೂ ಎರಡನೇ ಎಸೆತ ಡಾಟ್ ಬಾಲ್ ಆದರೆ, ಮೂರನೇ ಎಸೆತದಲ್ಲಿ 1 ರನ್ ಬಂತು. 4ನೇ ಎಸೆತ ನೋಬಾಲ್​​​​ ಆಗಿದೆ. ಹೀಗಾಗಿ ಮತ್ತೆ 4ನೇ ಎಸೆತ ಎಸೆದಿದ್ದು​​​ ಬಾಲ್ ವೈಡ್​​ ಜೊತೆಗೆ ಬೌಂಡರಿ ಗೆರೆ ದಾಟಿದೆ. ವೈಡ್ ಆಗಿದ್ದರಿಂದ ನೋ ಬಾಲ್ ಹಾಗೆ ಉಳಿದಿದ್ದು, ಮುಂದಿನ ಎಸೆತದಲ್ಲಿ ಬ್ಯಾಟ್ಸ್​ಮನ್​​​ ಬೌಂಡರಿ ಬಾರಿಸಿದ್ದಾನೆ. ಗ್ರಹಚಾರ ಎಂದರೆ ಈ ಎಸೆತವು ನೋ ಬಾಲ್ ಆಗಿದೆ. ಹೀಗಾಗಿ ಮತ್ತೊಂದು ನೋ ಬಾಲ್​ನಲ್ಲಿ ಬ್ಯಾಟ್ಸ್​ಮನ್​ ಚೆಂಡನ್ನು ಮತ್ತೆಮ್ಮೆ ಬೌಂಡರಿಗೆ ಅಟ್ಟಿದ್ದಾನೆ. ಈ ಮೂಲಕ ಬೌಲರ್​ನ ಒಂದು ಎಸೆತ ಮುಗಿವ ಹೊತ್ತಿಗೆ 17 ರನ್ ನೀಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

 ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹಾಬರ್ಡ್ ತಂಡ 20 ಓವರ್​​ಗೆ 6 ವಿಕೆಟ್ ಕಳೆದುಕೊಂಡು 183 ರನ್ ಬಾರಿಸಿತು. 184 ರನ್​ಗಳ ಗುರಿ ಬೆನ್ನತ್ತಿದ ಮೆಲ್ಬೋರ್ನ್​​ ತಂಡ 20 ಓವರ್​ಗೆ 8 ವಿಕೆಟ್ ಕಳೆದುಕೊಂಡು 167 ರನ್​​ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿದೆ. ಹಾಬರ್ಟ್​ ತಂಡ 16 ರನ್​ಗಳ ಜಯ ಸಾಧಿಸಿದೆ.
First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...