ಭಾರತ-ಆಸೀಸ್ ಎ ತಂಡಗಳ ಟೆಸ್ಟ್​: ಶ್ರೀಕರ್-ಕುಲ್ದೀಪ್ ಭರ್ಜರಿ ಬ್ಯಾಟಿಂಗ್

news18
Updated:September 10, 2018, 5:10 PM IST
ಭಾರತ-ಆಸೀಸ್ ಎ ತಂಡಗಳ ಟೆಸ್ಟ್​: ಶ್ರೀಕರ್-ಕುಲ್ದೀಪ್ ಭರ್ಜರಿ ಬ್ಯಾಟಿಂಗ್
  • Advertorial
  • Last Updated: September 10, 2018, 5:10 PM IST
  • Share this:
ನ್ಯೂಸ್ 18 ಕನ್ನಡ

ಬೆಂಗಳೂರಿನ ಹೊರವಲಯದ ಆಲೂರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎ ವಿರುದ್ಧದ 2ನೇ ಅನಧಿಕೃತ ಟೆಸ್ಟ್​ನಲ್ಲಿ 3ನೇ ದಿನವಾದ ಇಂದು ಭಾರತ ಎ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ.

2ನೇ ದಿನದಾಟದ ಅಂತ್ಯತಕ್ಕೆ 3 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿದ್ದ ಭಾರತ ಎ 3ನೇ ದಿನವಾದ ಇಂದು ಆರಂಭದಲ್ಲೇ ಶ್ರೇಯಸ್ ಅಯ್ಯರ್(42) ವಿಕೆಟ್ ಕಳೆದುಕೊಂಡಿತು. ಬಳಿಕ ಶ್ರೀಕರ್ ಭರತ್ ಜೊತೆಯಾದ ಶುಭ್ಮನ್ ಗಿಲ್ ಉತ್ತಮ ಆಟ ಪ್ರದರ್ಶಿಸಿದರಾದರು, ಅರ್ಧಶತಕ ಬಾರಿಸಿ ಗಿಲ್ ಔಟ್ ಆದರು. ಇದರ ಬೆನ್ನಲ್ಲೆ ಕೃಷ್ಣಪ್ಪ ಗೌತಮ್(20), ದೀಪಕ್ ಚಾಹರ್(6) ಬೇಗನೆ ಪೆವಿಲಿಯನ್ ಸೇರಿಕೊಂಡರು. ಆದರೆ 8ನೇ ವಿಕೆಟ್​​ಗೆ ಜೊತೆಯಾದ ಕುಲ್ದೀಪ್ ಯಾದವ್ ಹಾಗೂ ಶ್ರೀಕರ್ ಭರ್ಜರಿ ಜೊತೆಯಾಟ ಪ್ರದರ್ಶಿಸಿದರು. 113 ರನ್​​ಗಳ ಕಾಣಿಕೆ ನೀಡಿದ ಈ ಜೋಡಿ, ಶ್ರೀಕರ್ ಶತಕ ಸಿಡಿಸಿ 106 ರನ್​ಗೆ ಔಟ್ ಆದರೆ, ಕುಲ್ದೀಪ್ ಅರ್ಧಶತಕ ಬಾರಿಸಿ 52 ರನ್​ಗೆ ನಿರ್ಗಮಿಸಿದರು. ಅಂತಿಮವಾಗಿ ಭಾರತ ಎ 505 ರನ್​ಗೆ ಆಲೌಟ್ ಆಯಿತು.

ಇದಕ್ಕುತ್ತರವಾಗಿ 2ನೇ ಇನ್ನಿಂಗ್ಸ್​ ಆರಂಭಿಸಿದ ಆಸೀಸ್ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿದೆ. 3ನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಎ 2 ವಿಕೆಟ್ ಕಳೆದುಕೊಂಡು 38 ರನ್ ಕಲೆಹಾಕಿದ್ದು, 121 ರನ್​ಗಳ ಹಿನ್ನಡೆಯಲ್ಲಿದೆ. ಟ್ರಾವಿಸ್ ಹೆಡ್ 4 ಹಾಗೂ ಪೀಟರ್ ಹ್ಯಾಂಡ್​​​​ಸ್ಕಾಂಬ್ 1 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ನದೀಮ್ ಹಾಗೂ ಕೃಷ್ಣಪ್ಪ ಗೌತಮ್ ತಲಾ 1 ವಿಕೆಟ್ ಪಡೆದಿದ್ದಾರೆ.
First published:September 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ