ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯನ್ ಕ್ರಿಕೆಟ್ ತಂಡವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (Melbourne Cricket Ground) ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು (AUS vs SA) ಇನ್ನಿಂಗ್ಸ್ ಮತ್ತು 182 ರನ್ಗಳಿಂದ ಸೋಲಿಸಿ 3 ಪಂದ್ಯಗಳಲ್ಲಿ ಅಜೇಯ 2-0 ಅಂತರದ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಆಸ್ಟ್ರೇಲಿಯ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ 16 ವರ್ಷಗಳ ಬರ ನೀಗಿಸಿದೆ. ಈ ಗೆಲುವಿನೊಂದಿಗೆ ಕಾಂಗರೂ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ (WTC ) ಫೈನಲ್ಗೆ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಸತತ 3 ಟೆಸ್ಟ್ ಸರಣಿಗಳನ್ನು ಕಳೆದುಕೊಂಡಿತ್ತು.
ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದ ಆಸೀಸ್:
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಮತ್ತು ವೇಗಿ ಸ್ಕಾಟ್ ಬೋಲ್ಯಾಂಡ್ ಅವರ ಅಮೋಘ ಬೌಲಿಂಗ್ನಿಂದಾಗಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು ಎರಡನೇ ಇನ್ನಿಂಗ್ಸ್ನಲ್ಲಿ 204 ರನ್ಗಳಿಗೆ ಆಲೌಟ್ ಮಾಡಿತು. ಪ್ರೋಟೀಸ್ ತಂಡದ ಮಾಜಿ ನಾಯಕ ತೆಂಬಾ ಬಾವುಮಾ ಅವರು ಒಂದು ತುದಿಯನ್ನು ಏಕಾಂಗಿಯಾಗಿ ಹೋರಾಡಿದರೂ ಅಂತಿಮವಾಗಿ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ನಡುವೆ ಬಾವುಮಾ 65 ರನ್ಗಳ ಇನಿಂಗ್ಸ್ ಆಡಿದರು. ಅತಿಥಿ ಡೀನ್ ಎಲ್ಗರ್ ಸಾರಥ್ಯದ ದಕ್ಷಿಣ ಆಫ್ರಿಕಾ ತಂಡದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 387 ರನ್ಗಳ ಮುನ್ನಡೆ ಸಾಧಿಸಿತ್ತು. ಆದರೆ ಪ್ರೋಟೀಸ್ ತಂಡ 182 ರನ್ಗಳಿಂದ ಸೋಲನ್ನಪ್ಪಿತು.
Yes boys! Our Aussie men have defeated South Africa by an innings and 182 runs at the MCG, and have claimed the series with one match still to play 🙌🏻 pic.twitter.com/mWJ4quWTKV
— Cricket Australia (@CricketAus) December 29, 2022
ಇನ್ನು, ಆಸೀಸ್ ಬೌಲರ್ ನಾಥನ್ ಲಿಯಾನ್ 3 ವಿಕೆಟ್ ಪಡೆದರು, ಸ್ಕಾಟ್ ಬೋಲ್ಯಾಂಡ್ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು, ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್ 189 ರನ್ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ 8 ವಿಕೆಟ್ಗೆ 575 ರನ್ ಗಳಿಸಿ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಾಲ್ಕನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ 1 ವಿಕೆಟ್ಗೆ 15 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ ಕೀಪರ್ ಕೈಲ್ ವೆರೀನ್ 33 ರನ್ ಗಳಿಸಿದರೆ, ಥೆನಿಸ್ ಡಿ ಬ್ರಿಯಾನ್ 28 ರನ್ ಕೊಡುಗೆ ನೀಡಿದರು. ಆರಂಭಿಕ ಆಟಗಾರ ಸಾರೆಲ್ ಇರ್ವಿ 21 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು.
ಇದನ್ನೂ ಓದಿ: ICC Awards 2022: ಐಸಿಸಿ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ರೇಸ್ನಲ್ಲಿ ಟೀಂ ಇಂಡಿಯಾ ಪ್ಲೇಯರ್, ತಂಡದಲ್ಲಿ ಈಗ ಇವರದ್ದೇ ಹವಾ!
ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ:
ಪಂದ್ಯದ ಗೆಲುವಿನ ಬಳಿಕ ಡೇವಿಡ್ ವಾರ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಡೇವಿಡ್ ವಾರ್ನರ್ ಅವರ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಈ ಟೆಸ್ಟ್ ಪಂದ್ಯ ಸ್ಮರಣೀಯವಾಗಿತ್ತು. ವಾರ್ನರ್ ಮೊದಲ ಇನ್ನಿಂಗ್ಸ್ನಲ್ಲಿ 255 ಎಸೆತಗಳಲ್ಲಿ 200 ರನ್ ಗಳಿಸಿದರು, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದರು. ಮಾಜಿ ನಾಯಕ ಸ್ಟೀವ್ ಸ್ಮಿತ್ 15 ರನ್ ಗಳಿಂದ ಶತಕ ವಂಚಿತರಾದರು. ಸ್ಮಿತ್ 161 ಎಸೆತಗಳಲ್ಲಿ 85 ರನ್ ಗಳಿಸಿ ಔಟಾದರು. ವಾರ್ನರ್ ಅವರ ಅದ್ಭುತ ಇನ್ನಿಂಗ್ಸ್ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ