ಆಗಸ್ಟ್​ 14 ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ದಿನ: ಸಚಿನ್ ಯುಗಾರಂಭ: ಬ್ರಾಡ್​​ಮನ್​​​​ ಯುಗಾಂತ್ಯ

news18
Updated:August 14, 2018, 3:47 PM IST
ಆಗಸ್ಟ್​ 14 ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ದಿನ: ಸಚಿನ್ ಯುಗಾರಂಭ: ಬ್ರಾಡ್​​ಮನ್​​​​ ಯುಗಾಂತ್ಯ
news18
Updated: August 14, 2018, 3:47 PM IST
ನ್ಯೂಸ್ 18 ಕನ್ನಡ

'ಆಗಸ್ಟ್​ 14' ಈ ದಿನ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ದಿನ. ಯಾಕೆಂದರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಿಗ್ಗಜ ಡಾನ್ ಬ್ರಾಡ್​​ಮನ್​​​​ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರು ಕ್ರಿಕೆಟ್ ದಿಗ್ಗಜರಿಗೆ ಇಂದಿನ ದಿನ ಪ್ರಮುಖವಾಗಿದ್ದು.

1948 ಆಗಸ್ಟ್​ 14ರಂದು ಬ್ರಾಡ್​​ಮನ್​​​​ ಅವರು ತನ್ನ ವೃತ್ತಿ ಜೀವನದ ಕೊನೆಯ ಕ್ರಿಕೆಟ್ ಪಂದ್ಯವನ್ನಾಡಿದ ದಿನ. ಅದು ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯ, ಬ್ರಾಡ್​​ಮನ್​​​​ ಅವರು ಬ್ಯಾಟ್​ ಮಾಡಲು ಕ್ರೀಸ್​ಗೆ ಬಂದಾಗ ಇಡೀ ಸ್ಟೇಡಿಯಂನಲ್ಲಿರುವ ಪ್ರೇಕ್ಷಕರು ಎದ್ದು ನಿಂತು ಅವರಿಗೆ ಗೌರವ ಸಲ್ಲಿದ್ದರು. ಅಲ್ಲದೆ ಮೈದಾನದಲ್ಲಿದ್ದ ಇಂಗ್ಲೆಂಡ್ ತಂಡದ ಆಟಗಾರರು ಕ್ಯಾಪ್ ತೆಗೆದು ಕ್ರಿಕೆಟ್ ದಿಗ್ಗಜನಿಗೆ ಮಹಾನ್ ಗೌರವ ನೀಡಿದ್ದರು. ಈ ಪಂದ್ಯದಲ್ಲಿ ಬ್ರಾಡ್​​ಮನ್​​​​ ಅವರು 4 ರನ್ ಗಳಿಸಿದರೆ ಅವರ ಟೆಸ್ಟ್​ ಸರಾಸರಿ 100 ಆಗುತ್ತಿತ್ತು. ಆದರೆ ಬೇಸರದ ಸಂಗತಿ ಎಂದರೆ ಇಂಗ್ಲೆಂಡ್ ಸ್ಪಿನ್ನರ್ ಎರಿಕ್ ಹೊಲೀಸ್ ಅವರ ಗೂಗ್ಲಿ ಎಸೆತಕ್ಕೆ ಮೊದಲ ಬಾಲ್​ನಲ್ಲೇ ಬ್ರಾಡ್​​ಮನ್​​​​ ಔಟ್ ಆಗಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಶೂನ್ಯ ರನ್ ಗಳಿಸುವ ಮೂಲಕ ಅಂತ್ಯಗೊಳಿಸಿದರು. ಈ ಮೂಲಕ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದೇ ಖ್ಯಾತಿ ಪಡೆದಿದ್ದ ಬ್ರಾಡ್​​ಮನ್​​​​ ಅವರ ಕ್ರಿಕೆಟ್ ಜೀವನ 1948 ಆಗಸ್ಟ್​ 14ರಂದು ಅಂತ್ಯಗೊಂಡಿತು.

ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು 1990 ಆಗಸ್ಟ್ 14ರಂದು ತಮ್ಮ ಮೊದಲ ಅಂತರಾಷ್ಟ್ರೀಯಾ ಶತಕ ಬಾರಿಸಿದ ದಿನ. ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​​ನಲ್ಲಿ ಸಚಿನ್ ಅವರು ಸಿಡಿಸಿದ ಶತಕದಿಂದ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳಲು ಕಾರಣವಾಯಿತು. ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 519 ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ 432 ರನ್ ಬಾರಿಸಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ 320/4 ಕ್ಕೆ ಡಿಕ್ಲೇರ್ ಮಾಡಿ 408 ರನ್ ಟಾರ್ಗೆಟ್ ನೀಡಿತ್ತು. ಬಳಿಕ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿದ ಭಾರತ 127 ರನ್ ಆಗುವ ಹೊತ್ತಿಗೆ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭ ಕ್ರೀಸ್ ಕಚ್ಚಿ ಆಡಿದ ಸಚಿನ್ 19 ಬೌಂಡರಿಗಳ ಜೊತೆಗೆ 119 ರನ್ ಬಾರಿಸಿದ್ದರು. ಇದರ ಫಲವಾಗಿ ಕೊನೆಯ ದಿನದಾಟದ ಅಂತ್ಯಕ್ಕೆ ಭಾರತ 343 ರನ್ ಬಾರಿಸಿ 6 ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳಲು ಕಾರಣವಾಯಿತು. ಈ ವೇಳೆ 17 ವರ್ಷ ಪ್ರಾಯದ ಸಚಿನ್ ಬಾರಿಸಿದ ಶತಕ ತಂಡಕ್ಕೆ ನೆರವಾಗಿತ್ತು. ಅಲ್ಲದೆ ಈ ಪಂದ್ಯದಲ್ಲಿ ಸಚಿನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...