ಕ್ರಿಕೆಟ್ ಆಟಗಾರರು ಮತ್ತು ಬಾಲಿವುಡ್ ನಟರಿಗೆ ಐಷಾರಾಮಿ ಕಾರುಗಳು ಮತ್ತು ಹೊಸ ಹೊಸ ಬೈಕ್ ಗಳ ಬಗ್ಗೆ ಕ್ರೇಜ್ ತುಂಬಾನೇ ಇರುತ್ತದೆ. ಅದರಲ್ಲೂ ಈ ಕ್ರಿಕೆಟ್ ಆಟಗಾರರಂತೂ ಸ್ವಲ್ಪ ದುಡ್ಡು ಮಾಡಿದರೆ ಸಾಕು ಮನೆಯ ಮುಂದೆ ದೊಡ್ಡ ದೊಡ್ಡ ಸ್ಟೈಲಿಶ್ ಕಾರುಗಳು, ಬೈಕುಗಳು ಸಾಲು ಸಾಲಾಗಿ ಬಂದು ನಿಂತಿರುತ್ತವೆ. ಈಗೇಕೆ ಕ್ರಿಕೆಟಿಗರ ಕಾರುಗಳ ಬಗ್ಗೆ ಮಾತು ಅಂತೀರಾ? ಇಲ್ಲೊಂದು ಹಳೆಯ ಆಡಿ ಆರ್8 (Audi Car 8) ಕಾರೊಂದು ಮಹಾರಾಷ್ಟ್ರದ ಪೊಲೀಸ್ (Police) ಠಾಣೆಯ ಹೊರಗೆ ತುಂಬಾನೇ ಶಿಥಿಲಾವಸ್ಥೆಯಲ್ಲಿ ನಿಂತಿದೆ. ಈ ಕಾರು ಒಂದೊಮ್ಮೆ ವಿರಾಟ್ ಕೊಹ್ಲಿ (Virat Kohli) ಅವರದ್ದಾಗಿತ್ತಂತೆ.
ವಿರಾಟ್ ಆಡಿ ಆರ್8 ಕಾರು:
ವಿರಾಟ್ ಕೊಹ್ಲಿ ಅವರು ಆಡಿ ಇಂಡಿಯಾದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ, ಅದಕ್ಕಾಗಿಯೇ ಅವರು ತಮ್ಮ ಕಾರ್ ಗ್ಯಾರೇಜ್‌ನಲ್ಲಿ ಆಡಿ ಕಾರುಗಳ ಹಲವಾರು ಮಾದರಿಗಳನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಅವರ ಆಡಿ ಆರ್8 ಕಾರೊಂದು ಮಹಾರಾಷ್ಟ್ರದ ಪೊಲೀಸ್ ಠಾಣೆಯ ಹೊರಗೆ ಶಿಥಿಲಾವಸ್ಥೆಯಲ್ಲಿ ಪತ್ತೆಯಾಗಿದೆ. ವಿರಾಟ್ ಅವರು ಆಡಿ ಇಂಡಿಯಾದ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದರಿಂದ, ಅವರ ಗ್ಯಾರೇಜ್ ಜರ್ಮನ್ ಐಷಾರಾಮಿ ಕಾರು ತಯಾರಕರಿಂದ ತಯಾರಿಸಲ್ಪಟ್ಟ ಅನೇಕ ಕಾರುಗಳಿಂದ ತುಂಬಿದೆ ಅಂತ ಹೇಳಬಹುದು. ಆದರೆ ಈ ಆಡಿ ಆರ್8 ಕಾರು ರಸ್ತೆ ಬದಿಯಲ್ಲಿ ನಿಂತು ಧೂಳು ತಿನ್ನುತ್ತಿದೆ ನೋಡಿ.
ಕೊಹ್ಲಿ ಕಾರು ಮಾರಿದ್ರಂತೆ:
ಮಹಾರಾಷ್ಟ್ರದ ಪೊಲೀಸ್ ಠಾಣೆಯಲ್ಲಿ ಕೈಬಿಡಲಾದ ಆಡಿ ಆರ್8 ಅನ್ನು ಇದರಲ್ಲಿ ನಾವು ನೋಡಬಹುದು. ಈ ವೀಡಿಯೋ ಕ್ಲಿಪ್‌ನಲ್ಲಿರುವ ಮಾಹಿತಿಯ ಪ್ರಕಾರ, ವಿರಾಟ್ ಕೊಹ್ಲಿ ಈ ಆಡಿ ಆರ್8 ಕಾರನ್ನು ಬ್ರೋಕರ್ ಒಬ್ಬರ ಮೂಲಕ 2.5 ಕೋಟಿ ರೂಪಾಯಿಗೆ ಮಾರಾಟ ಮಾಡಿದರು. ಆದಾಗ್ಯೂ, ಬ್ರೋಕರ್ ಅದನ್ನು ಶಾಗಿ ಎಂಬ ಇನ್ನೊಬ್ಬರಿಗೆ ಮಾರಾಟ ಮಾಡಲು ಹೋದರು.
ಇದನ್ನೂ ಓದಿ: Rohit Sharma: ರೋಹಿತ್ ಕೈ ತಪ್ಪುತ್ತಾ ಟೀಂ ಇಂಡಿಯಾ ಕ್ಯಾಪ್ಟನ್ಸಿ? ಹಿಟ್ಮ್ಯಾನ್ ಸ್ಥಾನಕ್ಕೆ ಬರ್ತಾರಾ ಪಾಂಡ್ಯಾ?
ವರದಿಯ ಪ್ರಕಾರ, ಶಾಗಿ ಈ ಸೂಪರ್ ಕಾರನ್ನು ತನ್ನ ಗೆಳತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಸುದ್ದಿ ಕೇಳಿದ ಯಾರಿಗಾದರೂ ಅಬ್ಬಬ್ಬಾ ಎಂತಹ ದುಬಾರಿ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಅಂತ ಅನ್ನಿಸದೆ ಇರದು.
ಕಾರನ್ನು ಖರೀದಿಸಿದ ವ್ಯಕ್ತಿ ಈಗ ಪೊಲೀಸರ ಅತಿಥಿ:
ಅಷ್ಟೇ ಅಲ್ಲದೆ ಇದು ಕೆಲವು ಅನುಮಾನಗಳನ್ನು ಸಹ ಹುಟ್ಟುಹಾಕಿತು, ಅದಕ್ಕಾಗಿಯೇ ಪೊಲೀಸರು ಇದರ ಬಗ್ಗೆ ವಿಚಾರಣೆ ಶುರು ಮಾಡಿದರು. ವಿಚಾರಣೆ ಮಾಡುತ್ತಾ ಹೋದಾಗ ಪೊಲೀಸರಿಗೆ 500 ಕೋಟಿ ಕಾಲ್ ಸೆಂಟರ್ ಹಗರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಶಾಗಿ ಬಗ್ಗೆ ತಿಳಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.
ಇದನ್ನು ತಿಳಿದ ಪೋಲೀಸ್ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಶಾಗಿಗೆ ಸಂಬಂಧಪಟ್ಟ ಎಲ್ಲಾ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಅಂತಿಮವಾಗಿ, ಅವರನ್ನು ಪೊಲೀಸರು ಬಂಧಿಸಿದರು ಮತ್ತು ಅವರ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಂಡರು. ಆಗ ಈ ಆಡಿ ಆರ್8 ಕಾರು ಆ ತನಿಖೆಯ ಭಾಗವಾಗಿತ್ತು, ಅದಕ್ಕಾಗಿಯೇ ಅದು ಈಗ ಪೊಲೀಸ್ ಠಾಣೆಯ ಹೊರಗೆ ಧೂಳು ತಿನ್ನುತ್ತಿದೆ. ಆಡಿ ಆರ್8 ಅನ್ನು ಈಗ ಸ್ಥಗಿತಗೊಳಿಸಲಾಗಿದ್ದರೂ, ಇದು ಆಡಿಯ ಅತ್ಯಂತ ಸಾಂಪ್ರದಾಯಿಕ ಉತ್ಪನ್ನಗಳಲ್ಲಿ ಒಂದಾಗಿತ್ತು. ಆಗ ಈ ಕಾರಿನ ಬೆಲೆ ಸುಮಾರು 2.72 ಕೋಟಿ ರೂಪಾಯಿಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ