ಏಷ್ಯನ್ ಗೇಮ್ಸ್ 2018: ಈ ಕ್ರೀಡಾಪಟುಗಳಿಂದ ಭಾರತಕ್ಕೆ ಪದಕ ಖಚಿತ

news18
Updated:August 17, 2018, 4:11 PM IST
ಏಷ್ಯನ್ ಗೇಮ್ಸ್ 2018: ಈ ಕ್ರೀಡಾಪಟುಗಳಿಂದ ಭಾರತಕ್ಕೆ ಪದಕ ಖಚಿತ
news18
Updated: August 17, 2018, 4:11 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದಲ್ಲಿ ನಡೆಯಲಿರುವ 18ನೇ ಏಷ್ಯನ್ ಗೇಮ್ಸ್​ಗೆ ಕ್ಷಣಗಣನೆ ಶುರುವಾಗಿದೆ. ರಾಜಾಧಾನಿ ಜಕಾರ್ತ ಮತ್ತು ಪಲೆಮ್​​​​​​​​​​​​​​​​​​​​​​​​​ಬ್ಯಾಂಗ್ ನಗರಗಳಲ್ಲಿ ನಡೆಯುವ ಏಷ್ಯನ್ ಗೇಮ್ಸ್​ನಲ್ಲಿ 40 ಕ್ರೀಡಾ ವಿಭಾಗಗಳಲ್ಲಿ ಒಟ್ಟು 465 ಸ್ಪರ್ಧೆಗಳು ನಡೆಯಲಿವೆ. 45 ದೇಶಗಳ 11,000ಕ್ಕೂ ಅಧಿಕ ಕ್ರೀಡಾಪಟುಗಳು ಈ ಕ್ರೀಡೋತ್ಸವದಲ್ಲಿ ಪದಕಗಳನ್ನು ಗೆಲ್ಲಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ಬಾರಿ ಭಾರತ ತಂಡದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿದ್ದಾರೆ. ಹಿಂದಿನ ಇಂಚಿಯಾನ್ ಗೇಮ್ಸ್​ನಲ್ಲಿ ಭಾರತಕ್ಕೆ ಒಟ್ಟು 11 ಚಿನ್ನ, 9 ಬೆಳ್ಳಿ ಹಾಗೂ 37 ಕಂಚಿನ ಪದಕದೊಂದಿಗೆ ಒಟ್ಟು 57 ಪದಕಗಳನ್ನು ತಮ್ಮದಾಗಿಸಿದ್ದವು. ಈ ಬಾರಿ ಭಾರತ ತಂಡ ಇನ್ನಷ್ಟು ಬಲಿಷ್ಠವಾಗಿದ್ದು, ಪದಕ ಗೆಲ್ಲಲುವ ಪ್ರಮುಖ ಸ್ಪರ್ಧಿಗಳು ಯಾರು ಎಂಬುದನ್ನು ನೋಡೋಣ...

ಶೂಟಿಂಗ್​ನಲ್ಲಿ ಹೆಚ್ಚಿನ ನಿರೀಕ್ಷೆಭಾರತ ತಂಡಕ್ಕೆ ಹೆಚ್ಚು ಪದಕ ತರುವ ವಿಭಾಗದಲ್ಲಿ ಶೂಟಿಂಗ್ ಪ್ರಮುಖವಾಗಿದೆ. ಈ ಹಿಂದೆ ನಡೆದ ಗೋಲ್ಡ್ ಕೋಸ್ಟ್ಕಾಮನ್​​​​ವೆಲ್ತ್ ಗೇಮ್ಸ್​​ನಲ್ಲೂ ಭಾರತಕ್ಕೆ ಶೂಟಿಂಗ್​ನಲ್ಲಿ ಹೆಚ್ಚಿನ ಪದಕ ಸಿಕ್ಕಿತ್ತು. ಅದರಲ್ಲು 16ರ ಹರೆಯದ ಮನು ಭಾಕರ್ ಅವರ ಮೇಲೆ ಚಿನ್ನದ ಪದಕದ ನಿರೀಕ್ಷೆಯಿದೆ.

ಅಥ್ಲೆಟೆಕ್ಸ್​​ನಲ್ಲಿ ಹಿಮಾ ದಾಸ್
Loading...ಅಥ್ಲೆಟಿಕ್ಸ್​ನಲ್ಲಿ ಹಿಮಾ ದಾಸ್ ಅವರಿಂದ 400 ಮೀ ಓಟದಲ್ಲಿ ಗೆಲುವು ಖಚಿತ ಎನ್ನಬಹುದು. ಇನ್ನು ಜಾವೆಲಿನ್​ನಲ್ಲಿ ನೀರಜ್ ಚೋಪ್ರಾ, ಡಿಸ್ಕಸ್ ಥ್ರೋನಲ್ಲಿ ಸೀಮಾ ಪೊನಿಯಾ, 100 ಮೀ ಓಟದಲ್ಲಿ ದ್ಯುತಿ ಚಂದ್ ಮೇಲೆಯೂ ಹೆಚ್ಚಿನ ನಿರೀಕ್ಷೆ ಇದೆ.

ರಸ್ಲಿಂಗ್ ಮೇಲೆ ಭಾರತದ ಕಣ್ಣುರಸ್ಲಿಂಗ್ ವಿಭಾಗದಲ್ಲಿ ಭಾರತದ ಸುಶೀಲ್ ಕುಮಾರ್ 50 ಕೆ.ಜಿ., ವಿನೇಶ್ ಪೋಗಟ್ 50 ಕೆ.ಜಿ. ಹಾಗೂ ಬಜರಂಗ್ ಪೊನಿಯಾ 65 ಕೆ. ಜಿ. ಇವರು ಭಾರತಕ್ಕೆ ಪದಕ ತರಬಲ್ಲರು.

ಭರವಸೆಯ ಆಟಗಾರ್ತಿ ಪಿ. ವಿ ಸಿಂಧುಬ್ಯಾಡ್ಮಿಂಟನ್​​ನಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧು ಈ ಬಾರಿ ಪದಕ ಗೆಲ್ಲವ ಮುಂಚೂಣಿಯಲ್ಲಿದ್ದಾರೆ. ಅಂತೆಯೆ ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್ ಅವರಿಗೂ ಪದಕ ಗೆಲ್ಲಲುವ ಸಾಮರ್ಥ್ಯವಿದೆ. ಟೆನಿಸ್​ನಲ್ಲಿ ರೋಹನ್ ಬೋಪಣ್ಣ, ದಿವಿಜ್ ಶರಣ್, ರಮಾನಾಥನ್ ಮೇಲು ನಿರೀಕ್ಷೆ ಇಡಲಾಗಿದೆ.

ಬಾಕ್ಸಿಂಗ್ ವಿಭಾಗದಲ್ಲೂ ಪದಕಬಾಕ್ಸಿಂಗ್​​ನಲ್ಲೂ ಭಾರತ ತಂಡ ಬಲಿಷ್ಠವಾಗಿದ್ದು ವಿಕಾಸ್ ಕೃಷ್ಣನ್, ಸೋನಿಯಾ ಲಾದರ್ ಹಾಗೂ ಶಿವ ತಾಪ ಅವರಿಂದ ಪದಕ ನಿರೀಕ್ಷಿಸಲಾಗಿದೆ.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ