ಫಿಫಾ ರ‍್ಯಾಂಕಿಂಗ್: ಕತಾರ್ ಸರ್ವಶ್ರೇಷ್ಠ ಸಾಧನೆ, ನೂರರ ಪಟ್ಟಿಯಿಂದ ಹೊರಬಿದ್ದ ಭಾರತ!

ಫುಟ್​ಬಾಲ್ ಜಗತ್ತಿನ ಬಲಿಷ್ಠ ಪಡೆ ಬ್ರೆಜಿಲ್​ ಮೂರನೇ ಸ್ಥಾನದಲ್ಲಿದ್ದು, ವಿಶ್ವಕಪ್ ರನ್ನರ್ ಕ್ರೊವೇಷಿಯಾ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

zahir | news18
Updated:February 8, 2019, 9:30 AM IST
ಫಿಫಾ ರ‍್ಯಾಂಕಿಂಗ್: ಕತಾರ್ ಸರ್ವಶ್ರೇಷ್ಠ ಸಾಧನೆ,  ನೂರರ ಪಟ್ಟಿಯಿಂದ ಹೊರಬಿದ್ದ ಭಾರತ!
@Rediffmail
zahir | news18
Updated: February 8, 2019, 9:30 AM IST
ಏಷ್ಯಾ​ ಫುಟ್​ಬಾಲ್​ನಲ್ಲಿ ಹೊಸ ಪಾರುಪತ್ಯ ಮೆರೆದ ಕತಾರ್​ ತಂಡ ಈಗ ಮತ್ತೊಂದು ಸಾಧನೆ ಮಾಡಿದೆ. ಏಷ್ಯನ್​ ಕಪ್​ ಮುಡಿಗೇರಿಸಿಕೊಂಡ ಬೆನ್ನಲ್ಲೇ ಫಿಫಾ ರ‍್ಯಾಂಕಿಂಗ್​ನಲ್ಲಿ ಏರಿಕೆ ಕಂಡು  ಜೀವನಶ್ರೇಷ್ಠ ಸಾಧನೆ ಮಾಡಿದೆ. ಏಷ್ಯಾ ಕಪ್​ಗೂ ಮುನ್ನ 93ನೇ ಸ್ಥಾನದಲ್ಲಿದ್ದ ಕತಾರ್ ಈಗ ಏಕಾಏಕಿ 38 ಸ್ಥಾನಗಳ ಜಿಗಿತ ಕಂಡು 55ನೇ ಸ್ಥಾನವನ್ನು ಅಲಂಕರಿಸಿದೆ. ಈ ಮೂಲಕ 26 ವರ್ಷಗಳಲ್ಲೇ ಅತ್ಯುತ್ತಮ ರ‍್ಯಾಂಕಿಂಗ್ ಸ್ಥಾನವನ್ನು ಕತಾರ್ ಪಡೆದುಕೊಂಡಿದೆ.

ಕಳೆದ ವಾರ ಯುಎಇನಲ್ಲಿ ನಡೆದ ಏಷ್ಯಾ ಕಪ್​ ಫುಟ್​ಬಾಲ್​ ಫೈನಲ್​ನಲ್ಲಿ ಜಪಾನ್​ಗೆ 3-1 ರಿಂದ ಸೋಲುಣಿಸಿ ಕತಾರ್​ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ನಾಕೌಟ್​ ಹಂತದಲ್ಲಿ ವಿಶ್ವ ರ‍್ಯಾಂಕಿಂಗ್​ನ ಬಲಿಷ್ಠ ತಂಡಗಳನ್ನೇ ಎದುರಿಸಿದ್ದ ಕತಾರ್ ಅದ್ಭುತ ಆಟ ಪ್ರದರ್ಶಿಸಿ ಇತಿಹಾಸ ಸೃಷ್ಟಿಸಿತು.

ಇದನ್ನೂ ಓದಿ: ಅವಮಾನಗಳ ನಡುವೆ ಕತಾರ್​ ಈ ಬಾರಿಯ ಏಷ್ಯಾ ​ಫುಟ್​ಬಾಲ್ ಚಾಂಪಿಯನ್

ಏಷ್ಯಾದ ಬಲಿಷ್ಠ ತಂಡಗಳಲ್ಲಿ ಮೊದಲಿಗೆ ಸೌದಿ ಅರೇಬಿಯಾ (70) ತಂಡವನ್ನು ಸೋಲಿಸಿದಲ್ಲದೆ, ನಂತರದ ಪಂದ್ಯಗಳಲ್ಲಿ ಇರಾನ್(22), ಜಪಾನ್(27), ದ.ಕೊರಿಯ(38) ಹಾಗೂ ಆಸ್ಟ್ರೇಲಿಯಾ(42) ತಂಡಗಳಿಗೆ ಸೋಲಿನ ರುಚಿ ತೋರಿಸಿತ್ತು. ಈ ಮೂಲಕ ಕತಾರ್​ ರ‍್ಯಾಂಕಿಂಗ್ ​ ಪಟ್ಟಿಯಲ್ಲಿ 93ನೇ ಸ್ಥಾನದಿಂದ 55ನೇ ಸ್ಥಾನಕ್ಕೆ ಧುಮುಕಿದೆ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯ ನೇಮಕಾತಿ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ, ತಿಂಗಳ ವೇತನ 28 ಸಾವಿರ ರೂ.

ಇನ್ನು ಫಿಫಾ ಬಿಡುಗಡೆ ಮಾಡಿರುವ ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ 6 ಸ್ಥಾನ ಕುಸಿತ ಕಂಡಿದೆ. 97ನೇ ಸ್ಥಾನದಲ್ಲಿದ್ದ ಸುನಿಲ್ ಚೆಟ್ರಿ ಪಡೆ 100ರ ಪಟ್ಟಿಯಿಂದ ಹೊರಬಿದ್ದಿದ್ದು, 103ನೇ ಸ್ಥಾನಕ್ಕೆ ತಲುಪಿದೆ. ವಿಶ್ವದ ಬಲಿಷ್ಠ ತಂಡವಾಗಿ ಬೆಲ್ಜಿಯಂ ಮೊದಲ ಸ್ಥಾನ ಅಲಂಕರಿಸಿದ್ದರೆ, ವಿಶ್ವ ಚಾಂಪಿಯನ್ ಫ್ರಾನ್ಸ್​ ಎರಡನೇ ಸ್ಥಾನದಲ್ಲಿದೆ. ಫುಟ್​ಬಾಲ್ ಜಗತ್ತಿನ ಬಲಿಷ್ಠ ಪಡೆ ಬ್ರೆಜಿಲ್​ ಮೂರನೇ ಸ್ಥಾನದಲ್ಲಿದ್ದು, ವಿಶ್ವಕಪ್ ರನ್ನರ್ ಕ್ರೊವೇಷಿಯಾ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಪಂದ್ಯ: ಆಸ್ಟ್ರೇಲಿಯಾ ತಂಡ ಕೇವಲ 10 ರನ್​ಗೆ ಆಲೌಟ್!
Loading...

First published:February 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...