ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಶುಭ ಶುಕ್ರವಾರ; ದಿನದ ಆರಂಭದಲ್ಲೇ ಚಿನ್ನ; ಕಬಡ್ಡಿಯಲ್ಲಿ ಬೆಳ್ಳಿ

news18
Updated:August 24, 2018, 2:49 PM IST
ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಶುಭ ಶುಕ್ರವಾರ; ದಿನದ ಆರಂಭದಲ್ಲೇ ಚಿನ್ನ; ಕಬಡ್ಡಿಯಲ್ಲಿ ಬೆಳ್ಳಿ
news18
Updated: August 24, 2018, 2:49 PM IST
ನ್ಯೂಸ್ 18 ಕನ್ನಡ

ಜಕಾರ್ತ (ಆ. 24): ಏಷ್ಯನ್ ಗೇಮ್ಸ್​​ನಲ್ಲಿ ಭಾರತ ಮತ್ತೊಂದು ಸ್ವರ್ಣಪದಕ ತನ್ನದಾಗಿಸಿದೆ. ಪುರುಷರ ರೋಯಿಂಗ್ ತಂಡ ಇಂದು ಬೆಳಗ್ಗೆಯೇ ಮೂರು ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಹೊಸ ದಾಖಲೆ ಬರೆದಿದೆ. ಜೊತೆಗೆ ಭಾರತದ ಮಹಿಳಾ ಕಬಡ್ಡಿ ತಂಡ ಇರಾನ್ ವಿರುದ್ಧ ಗೆದ್ದು ಬೆಳ್ಳಿ ಪದಕ ತನ್ನದಾಗಿಸಿದೆ.

ಲೈಟ್​​​ವೇಟ್​​​​​​ ಡಬಲ್ ಸ್ಕಲ್ಸ್​​ನಲ್ಲಿ ರೋಹಿತ್ ಕುಮಾರ್, ಭಗವಾನ್ ಅವರು ಕಂಚಿನ ಪದಕಕ್ಕೆ ಮುತ್ತಿಕ್ಕಿದರೆ, ರೋಯಿಂಗ್ ತಂಡ 6:17:13 ನಿಮಿಷದಲ್ಲಿ ಸವರ್ಣ್ ಸಿಂಗ್, ಭೋಕ್ನಲ್, ಓಂ ಪ್ರಕಾಶ್, ಹಾಗೂ ಸುಖ್​​ಮಿತ್ ಜೋಡಿ ಗುರಿ ತಲುಪಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಸಾಧನೆ ಮಾಡಿದ್ದಾರೆ.

ಇರಾನ್ ವಿರುದ್ಧ ನಡೆದ ಕಬಡ್ಡಿ ಪಂದ್ಯದಲ್ಲಿ ಭಾರತದ ವನಿತೆಯರು 24-27 ಅಂತರದಿಂದ ಗೆದ್ದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

 ಇದೀಗ ಭಾರತ 6 ಚಿನ್ನ, 5 ಬೆಳ್ಳಿ ಹಾಗೂ 13 ಕಂಚಿನೊಂದಿಗೆ ಒಟ್ಟು 24 ಪದಕಗಳೊಂದಿಗೆ 7ನೇ ಸ್ಥಾನದಲ್ಲಿದೆ.
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ