ಏಷ್ಯನ್ ಗೇಮ್ಸ್ 2018: ಕಬಡ್ಡಿ ಸೆಮಿಫೈನಲ್​​ನಲ್ಲಿ ಭಾರತಕ್ಕೆ ಸೋಲು; ಇತಿಹಾಸ ನಿರ್ಮಿಸಿದ ಇರಾನ್

news18
Updated:August 23, 2018, 6:54 PM IST
ಏಷ್ಯನ್ ಗೇಮ್ಸ್ 2018: ಕಬಡ್ಡಿ ಸೆಮಿಫೈನಲ್​​ನಲ್ಲಿ ಭಾರತಕ್ಕೆ ಸೋಲು; ಇತಿಹಾಸ ನಿರ್ಮಿಸಿದ ಇರಾನ್
news18
Updated: August 23, 2018, 6:54 PM IST
ನ್ಯೂಸ್ 18 ಕನ್ನಡ

ಏಷ್ಯನ್ ಗೇಮ್ಸ್​​​ನಲ್ಲಿ ಪುರುಷರ ಕಬಡ್ಡಿ ವಿಭಾಗದ ಸೆಮಿಫೈನಲ್​ ಪಂದ್ಯದಲ್ಲಿ ಇರಾನ್ ವಿರುದ್ಧ ಭಾರತ ಸೋಲುಂಡಿದೆ. ಏಳು ಸಲದ ಏಷ್ಯನ್ ಗೇಮ್ಸ್ ಚಾಂಪಿಯನ್ ಭಾರತವನ್ನು ಇರಾನ್ ತಂಡ 27-18 ಅಂಕಗಳ ಅಂತರದಿಂದ ಸೋಲಿಸಿ ಇತಿಹಾಸ ಬರೆದಿದೆ. ಈ ಮೂಲಕ ಚಿನ್ನ ಗೆಲ್ಲುವ ಭಾರತದ ಕನಸು ಭಗ್ನಗೊಂಡಿದೆ.

ಆರಂಭದಲ್ಲಿ ಉತ್ತಮ ಮುನ್ನಡೆಯಲ್ಲಿದ್ದ ಭಾರತ ಬಳಿಕ ಇದನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಇದರೊಂದಿಗೆ ಭಾರತ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಇರಾನ್ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಫೈನಲ್​ಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾದರು.

ಈ ಮೂಲಕ ಭಾರತ ಕಬಡ್ಡಿ ತಂಡ ಇದೇ ಮೊದಲ ಬಾರಿ ಪೈನಲ್ ಪ್ರವೇಶಿಸದೆ ಸೆಮಿಫೈನಲ್​​ನಲ್ಲಿ ಹೊರಬಿದ್ದಂತಾಗಿದೆ. ಈ ಹಿಂದೆ 1990ರಲ್ಲಿ ಭಾರತ ಏಷ್ಯನ್ ಗೇಮ್ಸ್​ನಲ್ಲಿ ಆಡಲು ಆರಂಭಿಸಿದಾಗಿನಿಂದ ಕಬಡ್ಡಿಯಲ್ಲಿ ಚಿನ್ನ ಗೆಲ್ಲುತ್ತಾ ಬಂದಿತ್ತು.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...