ಏಷ್ಯನ್ ಗೇಮ್ಸ್ ಹಾಕಿ: ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ


Updated:August 18, 2018, 5:45 PM IST
ಏಷ್ಯನ್ ಗೇಮ್ಸ್ ಹಾಕಿ: ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಭಾರತೀಯ ಹಾಕಿ ತಂಡ

Updated: August 18, 2018, 5:45 PM IST
- ನ್ಯೂಸ್18 ಕನ್ನಡ

ಜಕಾರ್ತ: ಭಾರತ ಹಾಕಿ ತಂಡವು ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಮುನ್ನ ನಡೆದ ಅಭ್ಯಾಸ ಪಂದ್ಯವೊಂದರಲ್ಲಿ ಬಾಂಗ್ಲಾದೇಶ ವಿರುದ್ಧ 7-1 ಗೋಲುಗಳಿಂದ ಜಯಭೇರಿ ಭಾರಿಸಿದೆ. ಈ ಮೂಲಕ ಆತ್ಮವಿಶ್ವಾಸದೊಂದಿಗೆ ಕ್ರೀಡಾಕೂಟಕ್ಕೆ ಭಾರತ ಅಡಿ ಇಡಲಿದೆ. ಕಳೆದ ಬಾರಿ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಚಿನ್ನದ ಪದಕ ಜಯಿಸಿತ್ತು. ಭಾರತದ ಇತ್ತೀಚಿನ ಪ್ರದರ್ಶನ ಕೂಡ ಗಮನಾರ್ಹವೆನಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಏಷ್ಯಾಡ್​ ಹಾಕಿಯಲ್ಲೂ ಭಾರತ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಒಂದು ವೇಳೆ ಇಲ್ಲಿ ಚಿನ್ನ ಗೆದ್ದರೆ 2020ರ ಟೋಕಿಯೋ ಒಲಿಂಪಿಕ್ಸ್ ಹಾಕಿಗೆ ಭಾರತ ನೇರವಾಗಿ ಪ್ರವೇಶ ಪಡೆಯಲಿದೆ.

ಕೆಲ ವರ್ಷಗಳ ಹಿಂದಷ್ಟೇ ವಿಶ್ವದ ನಂ. 11ರಲ್ಲಿದ್ದ ಭಾರತ ಈಗ ಐದನೇ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ, ಜರ್ಮನಿ, ನೆದರ್​ಲೆಂಡ್ಸ್, ಬೆಲ್ಜಿಯಂ, ಇಂಗ್ಲೆಂಡ್ ಮೊದಲಾದ ಟಾಪ್ ತಂಡಗಳೊಂದಿಗೆ ಭಾರತೀಯರು ಸರಿಸಮನಾಗಿ ಸೆಣಸುತ್ತಿದ್ದಾರೆ. ಹೀಗಾಗಿ, ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡ ಚಿನ್ನ ಗೆಲ್ಲುವ ನಿರೀಕ್ಷೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.

ನಾಳೆ ಭಾನುವಾರದಿಂದ ಏಷ್ಯನ್ ಗೇಮ್ಸ್​ ಹಾಕಿ ಆಟ ಪ್ರಾರಂಭವಾಗುತ್ತದೆ. ಒಟ್ಟು 12 ತಂಡಗಳಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ದಕ್ಷಿಣ ಕೊರಿಯಾ, ಜಪಾನ್, ಶ್ರೀಲಂಕಾ, ಹಾಂಕಾಂಗ್ ಮತ್ತು ಇಂಡೋನೇಷ್ಯಾ ತಂಡಗಳಿವೆ. ಬಿ ಗುಂಪಿನಲ್ಲಿ ಮಲೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ, ಓಮನ್, ಥಾಯ್ಲೆಂಡ್ ಮತ್ತು ಕಜಕಸ್ತಾನ್ ತಂಡಗಳಿವೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ದಕ್ಷಿಣ ಕೊರಿಯಾ ಮತ್ತು ಜಪಾನ್ ತಂಡಗಳು ಭಾರತಕ್ಕೆ ಪ್ರಮುಖ ಎದುರಾಳಿಗಳಾಗಿವೆ. ಭಾರತದ ಸೆಮಿಫೈನಲ್ ಹಾದಿ ಕಠಿಣವೇನಿಲ್ಲ. ಪ್ರಶಸ್ತಿ ಗೆಲ್ಲಲು ಭಾರತದ ಜೊತೆ ದಕ್ಷಿಣ ಕೊರಿಯಾ, ಪಾಕಿಸ್ತಾನ ಮತ್ತು ಮಲೇಷ್ಯಾ ತಂಡಗಳು ಫೇವರಿಟ್ ಎನಿಸಿವೆ. ಆದರೆ, ಈಗಿನ ಫಾರ್ಮ್ ಗಣಿಸಿದರೆ ಭಾರತವೇ ಎಲ್ಲರಿಗಿಂತ ನೆಚ್ಚಿನ ತಂಡವಾಗಿದೆ.
First published:August 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ