ಮಗನ ಚಿನ್ನದ ಪದಕ ಕಣ್ತುಂಬಿಕೊಳ್ಳುವ ಮೊದಲೇ ಕಣ್ಮುಚ್ಚಿದ ತೇಜಿಂದರ್ ತಂದೆ

news18
Updated:September 4, 2018, 7:24 PM IST
ಮಗನ ಚಿನ್ನದ ಪದಕ ಕಣ್ತುಂಬಿಕೊಳ್ಳುವ ಮೊದಲೇ ಕಣ್ಮುಚ್ಚಿದ ತೇಜಿಂದರ್ ತಂದೆ
news18
Updated: September 4, 2018, 7:24 PM IST
ನ್ಯೂಸ್ 18 ಕನ್ನಡ

ಇತ್ತೀಚೆಗಷ್ಟೇ ಏಷ್ಯನ್ ಗೇಮ್ಸ್​​ನ ಗುಂಡು ಎಸೆತದಲ್ಲಿ ತೇಜಿಂದರ್ ಪಾಲ್ ಸಿಂಗ್ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು. ಆದರೆ ಮಗನ ಚಿನ್ನದ ಪದಕವನ್ನ ಕಣ್ತುಂಬಿಕೊಳ್ಳುವ ಮೊದಲೇ ತೇಜಿಂದರ್ ಅವರ ತಂದೆ ಕರಮ್ ಸಿಂಗ್ ಇಹಲೋಕ ತ್ಯಜಿಸಿದ್ದಾರೆ.

23 ವರ್ಷದ ಪಂಜಾಬ್ ಮೂಲದ ತೇಜಿಂದರ್ ಪಾಲ್ 20.75 ಮೀಟರ್ ದೂರ ಶಾಟ್​ಪುಟ್​​ ಎಸೆಯುವುದರೊಂದಿಗೆ ಏಷ್ಯನ್ ಗೇಮ್ಸ್'ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದರು. ಪ್ರಶಸ್ತಿ ಗೆದ್ದ ಬೆನ್ನಲ್ಲೇ ಚಿನ್ನದ ಪದಕವನ್ನು ಕಳೆದೆರಡು ವರ್ಷಗಳಿಂದ ಕ್ಯಾನ್ಸರ್'ನೊಂದಿಗೆ ಹೋರಾಡುದ್ದ ತನ್ನ ತಂದೆಗೆ ಅರ್ಪಿಸುವುದಾಗಿ ಹೇಳಿದ್ದರು. ದೇಶಕ್ಕಾಗಿ ಚಿನ್ನ ಗೆಲ್ಲಬೇಕು ಎನ್ನುವ ತಂದೆಯ ಆಸೆಯನ್ನು ಈಡೇರಿಸಿದ್ದ ತೇಜಿಂದರ್ ಆದಷ್ಟು ಬೇಗ ತಂದೆಯನ್ನು ಭೇಟಿಯಾಗುವ ಆಸೆಯಿಂದ ತವರಿಗೆ ಮರಳಿದ್ದರು. ಆದರೆ ನಿನ್ನೆ ರಾತ್ರಿ ದೆಹಲಿ ಏರ್ಪೋರ್ಟ್ ಬಂದಿಳಿದು ಹೋಟೆಲ್​​ಗೆ ತೆರಳುವ ವೇಳೆ ತೇಜಿಂದರ್​ಗೆ ಆಘಾತಕಾರಿ ಸುದ್ದಿ ಕಾದಿತ್ತು. ತೇಜಿಂದರ್ ಪಾಲ್ ಸಿಂಗ್ ತಂದೆ ಕರಮ್ ಸಿಂಗ್ ಇಹಲೋಕ ತ್ಯಜಿಸಿದ್ದರು. ಈ ಕುರಿತು ಇಂದು ವಿಷಯ ಬಹಿರಂಗಗೊಂಡಿದ್ದು, ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಸಂತಾಪ ಸೂಚಿಸಿದೆ. ಅಲ್ಲದೆ ತೇಜಿಂದರ್ ಪಾಲ್​​ರ ತಂದೆಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಕಟಿಸಿದೆ.

 


Loading...

First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ