MR Poovamma: ಉದ್ದೀಪನ ಮದ್ದು ಸೇವನೆ, ಕನ್ನಡತಿ ಅಥ್ಲೀಟ್​ಗೆ 2 ವರ್ಷ ನಿಷೇಧ

MR Poovamma: ಭಾರತದ ಹಿರಿಯ ಓಟಗಾರ್ತಿ ಮತ್ತು ಏಷ್ಯನ್ ಗೇಮ್ಸ್ (Asian Games) ಪದಕ ವಿಜೇತೆ ಆಗಿರುವ ಕರ್ನಾಟಕದ ಹಿರಿಯ ಅಥ್ಲಿಟ್‌ ಎಂಆರ್‌ ಪೂವಮ್ಮ (MR Poovamma) ಅವರು ಉದ್ದೀಪನ ಮದ್ದು (Doping) ಸೇವನೆ ಅಪರಾಧದಲ್ಲಿ ಸಿಕ್ಕಿ ಬಿದ್ದಿದ್ದು 2 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.

ಎಂಆರ್‌ ಪೂವಮ್ಮ

ಎಂಆರ್‌ ಪೂವಮ್ಮ

  • Share this:
ಭಾರತದ ಹಿರಿಯ ಓಟಗಾರ್ತಿ ಮತ್ತು ಏಷ್ಯನ್ ಗೇಮ್ಸ್ (Asian Games) ಪದಕ ವಿಜೇತೆ ಆಗಿರುವ ಕರ್ನಾಟಕದ ಹಿರಿಯ ಅಥ್ಲಿಟ್‌ ಎಂಆರ್‌ ಪೂವಮ್ಮ (MR Poovamma) ಅವರು ಉದ್ದೀಪನ ಮದ್ದು (Doping) ಸೇವನೆ ಅಪರಾಧದಲ್ಲಿ ಸಿಕ್ಕಿ ಬಿದ್ದಿದ್ದು 2 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಪೂವಮ್ಮ ಅವರು ಈ ಹಿಂದೆ 3 ತಿಂಗಳ ತನಕ ನಿಷೇಧಕ್ಕೆ ಒಳಗಾಗಿದ್ದರು. ಇದರ ನಂತರ ಅವರು, ಈ ಕೇಸ್​ನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. 2022ರ ಫೆಬ್ರವರಿ 18ರಂದು ಪಾಟಿಯಾಲದಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ ಗೇಮ್ಸ್ನಲ್ಲಿ 32 ವರ್ಷದ ಪೂವಮ್ಮ ಅವರು ಉದ್ದೀಪನ ಮದ್ದು ಸೇವನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (NADA) ಪೂವಮ್ಮಾ ಅವರ ಬಳಿ ಸ್ಯಾಂಪಲ್‌ ಪಡೆದಿತ್ತು. ಅವರು ಉತ್ತೇಜಕ ಮೀಥೈಲ್‌ಹೆಕ್ಸಾನಿಯಮೈನ್‌ ತೆಗೆದುಕೊಂಡಿರುವುದು ಪತ್ತೆಯಾಗಿದೆ. ಜೂನ್‌ ತಿಂಗಳಲ್ಲಿ ಅವರ 3 ತಿಂಗಳು ನಿ‍ಷೇಧ ಶಿಕ್ಷೆ ಹೇರಲಾಗಿತ್ತು.

2 ವರ್ಷ ನಿಷೇದಕ್ಕೆ ಒಳಗಾದ ಪೂವಮ್ಮ:

ಏಷ್ಯನ್ ಗೇಮ್ಸ್  ಪದಕ ವಿಜೇತೆ ಆಗಿರುವ ಕರ್ನಾಟಕದ ಹಿರಿಯ ಅಥ್ಲಿಟ್‌ ಎಂಆರ್‌ ಪೂವಮ್ಮ ಅವರ ಉದ್ದೀಪನ ಮದ್ದು ಸೇವನೆ ಆರೋಪ ಇದೀಗ ಸಾಭೀತಾಗಿದ್ದು, ಅಥ್ಲೀಟ್​ ಯಿಂದ 2 ವರ್ಷಗಳ ನಿಷೇಧವನ್ನು ಹೇರಲಾಗಿದೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆಯು ಮೇಲ್ಮನವಿ ಸಲ್ಲಿಸಿದ ನಂತರ, ಎಡಿಎಪಿ ಸಮಿತಿಯು ಪೂವಮ್ಮ ಅವರನ್ನು 2 ವರ್ಷಗಳ ಕಾಲದ ನಿಷೇಧ ಶಿಕ್ಷೆಯನ್ನು ವಿಸ್ತರಿಸಿದೆ. ಇದರಿಂದಾಗಿ ಪೂವಮ್ಮ ಮುಂದಿನ ವರ್ಷದ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ನಿಂದ ಹೊರಗುಳಿಯಲಿದ್ದಾರೆ.





ಆಯುರ್ವೇದ ಉತ್ಪನ್ನ ಸೇವಿಸಿದ್ದೆ:

ಪೂವಮ್ಮರ A ಮತ್ತು B ಮಾದರಿಗಳೆರಡೂ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಅವರನ್ನು ನಿಷೇಧ ಮಾಡಲಾಗಿದೆ​. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪೂವಮ್ಮ ಅವರು ಡೂಪಿಂಗ್​ ಮಾಡಿರುವುದನ್ನು ನಿರಾಕರಿಸಿದ್ದು, ನಾನು ಬೆಡ್‌ಟೈಮ್ ಲ್ಯಾಟೆ ಎಂಬ ಆಯುರ್ವೇದ ಉತ್ಪನ್ನವನ್ನು ಸೇವಿಸಿದ್ದೆ ಎಂದು ಹೇಳಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಸಮೀತಿಯು, ‘ನಾವು ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿಯು ಅಂಗೀಕರಿಸಿದ ಆದೇಶವನ್ನು ಮೊದಲಿಗೆ ಪರಿಗಣಿಸಿಲ್ಲ. ಜೊತೆಗೆ NADAದ ಮೇಲ್ಮನವಿಯನ್ನು ಅನುಮತಿಸುತ್ತೇವೆ. ಅದರ ಪರಿಣಾಮವಾಗಿ ಅಥ್ಲೀಟ್ ಮೇಲೆ ಆರ್ಟಿಕಲ್ 10.2.2 ಅನರ್ಹತೆಯ ಅಡಿಯಲ್ಲಿ 2 ವರ್ಷಗಳ ನಿಷೇಧವನ್ನು ವಿಧಿಸುತ್ತೇವೆ‘ ಎಂದು ಅಭಿನವ್ ಮುಖರ್ಜಿ ನೇತೃತ್ವದ ಸಮಿತಿಯು ತಿಳಿಸಿದೆ.

ಇದನ್ನೂ ಓದಿ: IND vs AUS: ಇಂದು ಭಾರತ-ಆಸ್ಟ್ರೇಲಿಯಾ ಪಂದ್ಯ; ಇಲ್ಲಿದೆ ಉಭಯ ತಂಡಗಳ ಹೆಡ್​ ಟು ಹೆಡ್​, ಪ್ಲೇಯಿಂಗ್​ 11

ಕೊಡಗು ಜಿಲ್ಲೆಯ ಗೋಣಿಕೊಪ್ಪ ಊರಿನ ಎಂಆರ್‌ ಪೂವಮ್ಮ ಅವರು 2018ರ ಏಷ್ಯನ್‌ ಕ್ರೀಡಾಕೂಟದಲ್ಲಿ ಮಹಿಳೆಯರ ಹಾಗೂ ಮಿಶ್ರ ರಿಲೇ 4x400 ಮೀಟರ್‌ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೇ ಪೂವಮ್ಮ ಅವರು 2014ರ ಏಷ್ಯನ್‌ ಗೇಮ್ಸ್‌ನಲ್ಲಿಯೂ 4x400 ಮೀಟರ್ ಮಹಿಳೆಯರ ರಿಲೇಯಲ್ಲಿ ಚಿನ್ನದ ಪದಕ ಪಡೆದಿದ್ದರು.
Published by:shrikrishna bhat
First published: