ಏಷ್ಯನ್ ಗೇಮ್ಸ್​ 2018: ಹಾಕಿಯಲ್ಲಿ ಹಾಂಕಾಂಗ್​ ವಿರುದ್ಧ ಗೆದ್ದು ದಾಖಲೆ ಬರೆದ ಭಾರತ

news18
Updated:August 22, 2018, 7:44 PM IST
ಏಷ್ಯನ್ ಗೇಮ್ಸ್​ 2018: ಹಾಕಿಯಲ್ಲಿ ಹಾಂಕಾಂಗ್​ ವಿರುದ್ಧ ಗೆದ್ದು ದಾಖಲೆ ಬರೆದ ಭಾರತ
news18
Updated: August 22, 2018, 7:44 PM IST
ನ್ಯೂಸ್ 18 ಕನ್ನಡ

ಜಕಾರ್ತ(ಆ. 22): ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಪುರುಷರ ಹಾಕಿ ತಂಡ ಹಾಂಕಾಂಗ್ ಚೀನಾ ವಿರುದ್ಧದ ಪಂದ್ಯದಲ್ಲಿ ಐತಿಹಾಸಿ ಗೆಲುವು ಸಾಧಿಸಿದೆ. 86 ವರ್ಷಗಳ ಹಿಂದೆ ಭಾರತ ನಿರ್ಮಿಸಿದ್ದ 24-1 ಗೋಲುಗಳ ಗೆಲುವನ್ನು ಏಷ್ಯಾಡ್ ಪಂದ್ಯದಲ್ಲಿ ಭಾರತವೇ 26-0 ಗೋಲುಗಳಿಂದ ಹಾಕಾಂಗ್ ಅನ್ನು ಹೀನಾಯವಾಗಿ ಸೋಲಿಸಿ ಹೊಸದೊಂದು ದಾಖಲೆ ಬರೆದಿದೆ.

ಪಂದ್ಯ ಆರಂಭವಾದ ಮೂರನೇ ನಿಮಿಷದಲ್ಲಿ ಭಾರತದ ಗೋಲುಗಳ ಸುರಿಮಳೆ ಬರಲಾರಂಭಿಸಿತು. ರೂಪಿಂದರ್ ಸಿಂಗ್ 3ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿ ತಂಡದ ಖಾತೆ ತೆರೆದರೆ, ಬಳಿಕ ಹಮರ್ನ್​ಪ್ರೀತ್ ಸಿಂಗ್ ಮತ್ತು ಆಕಾಶ್​​​​​ದೀಪ್ ಸಿಂಗ್ ತಲಾ ಒಂದೊಂದು ಹ್ಯಾಟ್ರಿಕ್ ಗೋಲು ದಾಖಲಿಸಿದರು. ಅಂತೆಯೆ ಮನ್​​ಪ್ರೀತ್​ ಸಿಂಗ್, ಲಲಿತ್ ಉಪಾಧ್ಯಾಯ, ವರುಣ್ ಕುಮಾರ್, ಎಸ್​ವಿ ಸುನಿಲ್, ವಿವೇಕ್ ಸಾಗರ್ ಪ್ರಸಾದ್, ಮಂದೀಪ್ ಸಿಂಗ್, ಅಮಿತ್ ರೋಹಿದಾಸ್, ದಿಲ್​​ಪ್ರೀತ್ ಸಿಂಗ್, ಚಿಂಗ್ಲೆಸನಾ ಸಿಂಗ್, ಸಿಮ್ರಾನ್​​ಜೀತ್ ಸಿಂಗ್ ಮತ್ತು ಸುರೇಂದ್ರ ಸಿಂಗ್ ಭಾರತ ಪರ ಗೋಲು ಬಾರಿಸಿ ಇತಿಹಾಸ ಬರೆದರು. ಅದರಲ್ಲೂ ಭಾರತ ತಂಡದ ಗೋಲ್​ಕೀಪರ್ ಮೈದಾನಕ್ಕಿಳಿದು ಗೋಲು ದಾಖಲಿಸಿದ್ದು ಭಾರತಕ್ಕೆ ವಿಶೇಷವಾಗಿದ್ದರೆ ಹಾಂಕಾಂಗ್​​ಗೆ ತಲೆ ಎತ್ತದಂತೆ ಮಾಡಿತು.

ಪ್ರಥಮ ಸುತ್ತು ಮುಕ್ತಾಯದ ವೇಳೆಗೆ ಭಾರತ 14-0ಯಿಂದ ಮುನ್ನಡೆ ಸಾಧಿಸಿ, ಅಂತಿಮವಾಗಿ 26-0 ಗೋಲುಗಳಿಂದ ಹಾಂಕಾಂಗ್ ತಂಡವನ್ನು ಸೋಲಿಸಿ ಹಾಕಿಯಲ್ಲಿ  ದಾಖಲೆ ಬರೆದಿದೆ. ಮುಂದಿನ ಪಂದ್ಯ ಆ. 24(ಶುಕ್ರವಾರ) ರಂದು ಜಪಾನ್ ವಿರುದ್ದ ನಡೆಯಲಿದೆ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...