ಏಷ್ಯನ್ ಗೇಮ್ಸ್​​ನಲ್ಲಿ ಭಾರತದ ಶುಭಾರಂಭ; ಅಪೂರ್ವಿ-ರವಿಕುಮಾರ್​​ಗೆ ಕಂಚು

  • News18
  • 2-MIN READ
  • Last Updated :
  • Share this:

    ನ್ಯೂಸ್ 18 ಕನ್ನಡ

    ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್​​ನಲ್ಲಿ ಭಾರತದ ಪದಕದ ಖಾತೆ ತೆರೆದಿದೆ. 10 ಮೀಟರ್ ಏರ್ ರೈಫಲ್ ಮಿಶ್ರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಪೂರ್ವಿ ಚಾಂದೇಲಾ ಹಾಗೂ ರವಿಕುಮಾರ್ ಕಂಚಿನ ಪದಕ ಗೆದ್ದು ಬೀಗಿದ್ದಾರೆ.

    ಒಟ್ಟು 429.9 ಪಾಯಿಂಟ್ ಕಲೆಹಾಕಿದ ಭಾರತದ ಜೋಡಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ. ಇನ್ನು ಬಂಗಾರ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಮನು ಭಾಕರ್ ಅವರಿಗೆ ನಿರಾಸೆಯಾಗಿದೆ.

     



    ಇನ್ನು ಭಾರತದ ಮಹಿಳಾ ಕಬಡ್ಡಿ ತಂಡವು ಜಪಾನ್ ವಿರುದ್ದ ಗೆಲುವಿದ ಶುಭಾರಂಭ ಮಾಡಿದೆ. ಮೊದಲಾರ್ಧದಲ್ಲಿ ಭಾರತ 19-18ರ ಮುನ್ನಡೆ ಸಾಧಿಸಿತ್ತು. ಗ್ರೂಪ್ ಎ ತಂಡದಲ್ಲಿ ಆಡುತ್ತಿರುವ ಭಾರತ, ಜಪಾನ್ ತಂಡವನ್ನು ಅಂತಿಮವಾಗಿ 43-12 ಅಂಕಗಳ ಅಂತರದಿಂದ ಜಯ ಸಾಧಿಸಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು