ಏಷ್ಯನ್ ಗೇಮ್ಸ್​ 2018: ಹಾಕಿ ಫೈನಲ್​​ನಲ್ಲಿ ಭಾರತಕ್ಕೆ ಸೋಲು: ಬೆಳ್ಳಿಗೆ ತೃಪ್ತಿ ಪಟ್ಟ ವನಿತೆಯರು

news18
Updated:August 31, 2018, 9:13 PM IST
ಏಷ್ಯನ್ ಗೇಮ್ಸ್​ 2018: ಹಾಕಿ ಫೈನಲ್​​ನಲ್ಲಿ ಭಾರತಕ್ಕೆ ಸೋಲು: ಬೆಳ್ಳಿಗೆ ತೃಪ್ತಿ ಪಟ್ಟ ವನಿತೆಯರು
news18
Updated: August 31, 2018, 9:13 PM IST
ನ್ಯೂಸ್ 18 ಕನ್ನಡ

ಜಕಾರ್ತದಲ್ಲಿ ನಡೆಯುತ್ತಿರುವ  ಏಷ್ಯನ್ ಗೇಮ್ಸ್​ನ 13ನೇ ದಿನದಾಟದಲ್ಲಿ ಭಾರತ 2 ಬೆಳ್ಳಿ ಸೇರಿದಂತೆ 4 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಇದರಲ್ಲಿ ಭಾರತದ ಮಹಿಳಾ ಹಾಕಿ ತಂಡಕ್ಕೆ ಆಘಾತವಾಗಿದೆ. ಜಪಾನ್ ವಿರುದ್ಧ ನಡೆದ ಫೈನಲ್ ಕಾದಾಟದಲ್ಲಿ ಭಾರತದ ವನಿತೆಯರು 1-2 ಗೋಲುಗಳಿಂದ ಸೋಲುಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಉಭಯ ತಂಡಗಳು ಕಠಿಣ ಹೋರಾಟ ನಡೆಸಿದರಾದರು ಅಂತಿಮ ಘಟ್ಟದಲ್ಲಿ ಜಪಾನ್​ ವನಿತೆಯರು ಅದ್ಭುತ ಪ್ರದರ್ಶನ ತೋರಿದ ಪರಿಣಾಮ ಭಾರತಕ್ಕೆ ಹಿನ್ನಡೆಯಾಗಿದೆ.

ಇನ್ನು ಪುರುಷರ ಹಾಗೂ ಮಹಿಳೆಯರ ಸೈಲಿಂಗ್ ಸ್ಪರ್ಧೆಯಲ್ಲಿ 3 ಪದಕಗಳು ಭಾರತಕ್ಕೆ ಸಿಕ್ಕಿದೆ. ಮಿಶ್ರ ಓಪನ್ ಲೇಸರ್ 4.7 ವಿಭಾಗದಲ್ಲಿ 16ರ ಹರೆಯದ ಹರ್ಷಿತಾ ತೋಮರ್ ಕಂಚಿನ ಪದಕ ಗೆದ್ದಿದ್ದಾರೆ. ಇದೇ ಗೇಮ್​​ನಲ್ಲಿ ಸ್ಪರ್ಧಿಸಿದ್ದ ವರುಣ್-ಗಣಪತಿ ಜೋಡಿಗೆ ಕಂಚಿನ ಪದಕ ಲಭಿಸಿದೆ. ಮಹಿಳೆಯರ ವಿಭಾಗದಲ್ಲಿ ವರ್ಷಾ ಗೌತಮ್ ಮತ್ತು ಶ್ವೇತಾ ಶೇರ್ವಗರ್ ಬೆಳ್ಳಿಯ ಪದಕ ಜಯಿಸಿದ್ದಾರೆ. ಆದರೆ ಪುರುಷರ 75 ಕೆ.ಜಿ. ವಿಭಾಗದ ಬಾಕ್ಸಿಂಗ್ ಸೆಮಿಫೈನಲ್​​​ನಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಎಡ ಕಣ್ಣಿನ ಗಾಯಕ್ಕೊಳಗಾಗಿದ್ದ ವಿಕಾಸ್ ಕೃಷ್ಣ ವೈದ್ಯಕೀಯ ಕಾರಣಗಳಿಂದ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿದಿದ್ದು, ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಆದರೆ 49 ಕೆಜಿ ವಿಭಾಗದ ಲೈಟ್ ವೈಟ್ ಬಾಕ್ಸಿಂಗ್ಸ್​ನಲ್ಲಿ ಅಮಿತ್ ವಂಘಲ್ ಫಿಲಿಫೈನ್ಸ್ ಸ್ಪರ್ಧಿಯೆದುರು ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಮಹಿಳೆಯರ ಸ್ಕ್ವಾಶ್ ಟೀಮ್, ಮಲೇಷ್ಯಾ ವಿರುದ್ಧ ಸೆಮಿಫೈನಲ್​​ನಲ್ಲಿ ಗೆದ್ದು  ಫೈನಲ್ ತಲುಪಿದ್ದಾರೆ. ಈ ಮೂಲಕ ಚಿನ್ನ ಇಲ್ಲವೇ ಬೆಳ್ಳಿ ಪದಕವನ್ನು ಖಚಿತ ಪಡಿಸಿದ್ದಾರೆ.

ಒಟ್ಟಾರೆ ಭಾರತ 13 ಚಿನ್ನ 23 ಬೆಳ್ಳಿ ಹಾಗೂ 29 ಕಂಚಿನ ಪದಕಗಳು ಸೇರಿದಂತೆ 65 ಪದಕಗಳನ್ನ ಗೆದ್ದು 8ನೇ ಸ್ಥಾನದಲ್ಲೇ ಮುಂದುವರಿದಿದೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ