ಏಷ್ಯನ್ ಗೇಮ್ಸ್ 2018: ಭಾರತೀಯರು 65-70 ಪದಕವನ್ನು ತಮ್ಮದಾಗಿಸಲಿದ್ದಾರೆ; ನರೀಂದರ್ ಬಾತ್ರಾ

news18
Updated:August 15, 2018, 3:35 PM IST
ಏಷ್ಯನ್ ಗೇಮ್ಸ್ 2018: ಭಾರತೀಯರು 65-70 ಪದಕವನ್ನು ತಮ್ಮದಾಗಿಸಲಿದ್ದಾರೆ; ನರೀಂದರ್ ಬಾತ್ರಾ
  • Advertorial
  • Last Updated: August 15, 2018, 3:35 PM IST
  • Share this:
ನ್ಯೂಸ್ 18 ಕನ್ನಡ

ಇದೇ ಆಗಸ್ಟ್​ 18ರಿಂದ ಆರಂಭವಾಗುವ ಏಷ್ಯನ್ ಗೇಮ್ಸ್​​ನಲ್ಲಿ ಭಾರತದ ಕ್ರೀಡಾಪಟುಗಳು ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.

2014ರ ಇಂಚೋನ್​​​​ ಏಷ್ಯಾಡ್​ನಲ್ಲಿ ಭಾರತ 11 ಸ್ವರ್ಣ, 37 ಕಂಚು, 9 ಬೆಳ್ಳಿ ಸೇರಿದಂತೆ ಒಟ್ಟು 57 ಪದಕವನ್ನು ಪಡೆದಿದ್ದರು. ಆದರೆ ಈ ಬಾರಿ ಭಾರತದ ಕ್ರೀಡಾಪಟುಗಳು 65 ರಿಂದ 70 ಪದಕವನ್ನು ತಮ್ಮದಾಗಿಸಲಿದ್ದಾರೆ ಎಂದು ಹೇಳಿದ್ದಾರೆ. ಹಾಕಿ ತಂಡಗಳು ಉತ್ತಮ ರೀತಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಇನ್ನು ಅಥ್ಲೆಟಿಕ್ಸ್​​ನಲ್ಲಿ ಹೆಚ್ಚಿನ ನಿರೀಕ್ಷೆಯಿದ್ದು, ಹಿಮಾ ದಾಸ್ ಅವರಿಂದ 3 ಪದಕಗಳನ್ನು ನಿರೀಕ್ಷಿಸುತ್ತೇವೆ ಎಂದಿದ್ದಾರೆ. ಅಂತೆಯೆ ಟೇಬಲ್ ಟೆನ್ನಿಸ್ ಹಾಗೂ ಬ್ಯಾಡ್ಮಿಂಟನ್​ಲ್ಲೂ ಉತ್ತಮ ಬೆಳವಣಿಗೆ ಕಾಣುತ್ತಿದೆ. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಫಾರ್ಮ್​​ನಲ್ಲಿರುವುದು ನಮಗೆ ಪ್ಲಸ್ ಪಾಯಿಂಟ್. ಶೂಟಿಂಗ್​ನಲ್ಲೂ ಹೊಸ ಪ್ರತಿಭೆಗಳು ಮಿಂಚುತ್ತಿದ್ದು, ಕೆಲ ಅಚ್ಚರಿಗಳನ್ನು ನಿರೀಕ್ಷಿಸಬಹುದು ಎಂದು ಬಾತ್ರಾ ಹೇಳಿದ್ದಾರೆ.

ಈ ಬಾರಿ ಭಾರತವನ್ನು ಪ್ರತಿನಿಧಿಸಲು 804 ಸದಸ್ಯರ ಕ್ರೀಡಾ ನಿಯೋಗಕ್ಕೆ ಈಗಾಗಲೇ ಕ್ರೀಡಾ ಸಚಿವಾಲಯ ಹಸಿರು ನಿಶಾನೆ ತೋರಿದೆ. 572 ಅಥ್ಲೆಟಿಕ್ಸ್​ನೊಂದಿಗೆ 183 ಮಂದಿ ಅಧಿಕಾರಿಗಳು, 119 ಕೋಚ್​​ಗಳು, 21 ವೈದ್ಯರು ಹಾಗೂ ಫಿಜಯೋಗಳಿದ್ದಾರೆ. ಒಟ್ಟು 36 ಕ್ರೀಡೆಗಳಲ್ಲಿ 572 ಕ್ರೀಡಾಪಟುಗಳು ಭಾಗವಹಿಸಲಿದ್ದು, 312 ಪುರುಷರು ಹಾಗೂ 260 ಮಹಿಳಾ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟ ಆಗಸ್ಟ್​ 18ರಿಂದ ಆರಂಭಗೊಂಡು ಸೆಪ್ಟೆಂಬರ್ 2ರ ವರೆಗೆ ನಡೆಯಲಿದೆ.
First published:August 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ