ಏಷ್ಯನ್ ಗೇಮ್ಸ್ 2018: ಎಷ್ಟು ಕ್ರೀಡೆ, ಎಷ್ಟು ಚಿನ್ನ, ಎಷ್ಟು ಸ್ಪರ್ಧಿಗಳು? ಇಲ್ಲಿದೆ ವಿವರ


Updated:August 15, 2018, 4:25 PM IST
ಏಷ್ಯನ್ ಗೇಮ್ಸ್ 2018: ಎಷ್ಟು ಕ್ರೀಡೆ, ಎಷ್ಟು ಚಿನ್ನ, ಎಷ್ಟು ಸ್ಪರ್ಧಿಗಳು? ಇಲ್ಲಿದೆ ವಿವರ
ಏಷ್ಯನ್ ಗೇಮ್ಸ್

Updated: August 15, 2018, 4:25 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 15): ಇಂಡೋನೇಷ್ಯಾದ ಜಕಾರ್ತ ಮತ್ತು ಪಾಲೆಂಬಾಂಗ್​ನಲ್ಲಿ ಆ. 18ರಿಂದ ಸೆ. 2ರವರೆಗೆ ನಡೆಯಲಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಏಷ್ಯಾ ಖಂಡದ ವಿವಿಧ ರಾಷ್ಟ್ರಗಳ ವಿವಿಧ ಕ್ರೀಡಾ ಸ್ಪರ್ಧಿಗಳು ಅಖಾಡಕ್ಕೆ ಇಳಿಯಲಿದ್ದಾರೆ. ಭಾರತ ಸೇರಿ ಒಟ್ಟು 45 ದೇಶಗಳ 12,062 ಸ್ಪರ್ಧಾಳುಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 40 ಕ್ರೀಡೆಗಳ 465 ಸ್ಪರ್ಧೆಗಳು ನಡೆಯಲಿವೆ. ಅಂದರೆ 465 ಚಿನ್ನದ ಪದಕಗಳನ್ನ ಗೆಲ್ಲಲು 12 ಸಾವಿರ ಸ್ಪರ್ಧಿಗಳು ಪೈಪೋಟಿ ನಡೆಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನಿಗಳಂತೆ ಬದ್ಧವೈರಿ ರಾಷ್ಟ್ರಗಳೆನಿಸಿದ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಈ ಬಾರಿ ಮೂರು ಕ್ರೀಡೆಗಳಲ್ಲಿ ಒಗ್ಗೂಡಿ ಸ್ಪರ್ಧಿಸುತ್ತಿವೆ. ಬ್ಯಾಸ್ಕೆಟ್​ಬಾಲ್, ಕ್ಯಾನೋಯಿಂಗ್ ಮತ್ತು ರೋವಿಂಗ್ ಕ್ರೀಡೆಗಳಲ್ಲಿ ಏಕೀಕೃತ ಕೊರಿಯಾ ತಂಡ ಪಾಲ್ಗೊಳ್ಳಲಿದೆ. ಇದರ ಜೊತೆಗೆ ಎರಡೂ ದೇಶಗಳು ಮಾಮೂಲಿಯಂತೆ ಪ್ರತ್ಯೇಕವಾಗಿಯೂ ಇನ್ನುಳಿದ ಕ್ರೀಡೆಗಳಲ್ಲಿ ಸೆಣಸಲಿವೆ.

ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ವಿಶೇಷತೆಗಳು:
ಕ್ರೀಡಾಕೂಟದ ಅವಧಿ: ಆ. 18 ರಿಂದ ಸೆ. 2ರವರೆಗೆ

ಒಟ್ಟು ರಾಷ್ಟ್ರಗಳು: 45
ಒಟ್ಟು ಸ್ಪರ್ಧಾಳುಗಳು: 12,062
ಒಟ್ಟು ಕ್ರೀಡೆಗಳು: 40
Loading...

ಒಟ್ಟು ಸ್ಪರ್ಧೆಗಳು: 465 (ಚಿನ್ನದ ಪದಕ)
ಒಟ್ಟು ಪದಕಗಳು: 1500-1600

ಅತೀ ಹೆಚ್ಚು ಸ್ಪರ್ಧಿಗಳನ್ನ ಕಳುಹಿಸಿರುವ ರಾಷ್ಟ್ರಗಳು:
ಇಂಡೋನೇಷ್ಯಾ: 951
ಥಾಯ್ಲೆಂಡ್: 816
ದಕ್ಷಿಣ ಕೊರಿಯಾ: 807
ಜಪಾನ್: 784
ಹಾಂಕಾಂಗ್: 586
ಭಾರತ: 572
ಚೀನೀ ಥೈಪೆ: 558
ಕಜಕಸ್ತಾನ್: 514
ಮಲೇಷ್ಯಾ: 446
ಇರಾನ್: 382

ಅತೀ ಹೆಚ್ಚು ಚಿನ್ನದ ಪದಕಗಳಿರುವ ಕ್ರೀಡೆಗಳು:
ಕರಾಟೆ ಮತ್ತಿತರ ಮಾರ್ಷಲ್ ಆರ್ಟ್ಸ್: 75
ಅಥ್ಲೆಟಿಕ್ಸ್: 48
ಸ್ವಿಮ್ಮಿಂಗ್: 41
ಕ್ಯಾನೋಯಿಂಗ್: 26
ಸೈಕ್ಲಿಂಗ್: 26
ದೋಣಿಗಾರಿಕೆ: 25
ಶೂಟಿಂಗ್: 20
ಜಿಮ್ನಾಸ್ಟಿಕ್ಸ್: 18
ಕುಸ್ತಿ: 18
ಜೂಡೋ: 15
ವೇಟ್​ಲಿಫ್ಟಿಂಗ್: 15
ಬಾಕ್ಸಿಂಗ್: 13
ಫೆನ್ಸಿಂಗ್: 12
ಡೈವಿಂಗ್: 10
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ