18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ; ಗಮನಸೆಳೆಯಿತು ಭಾರತದ ಪಥಸಂಚಲನ

news18
Updated:August 18, 2018, 8:47 PM IST
18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ; ಗಮನಸೆಳೆಯಿತು ಭಾರತದ ಪಥಸಂಚಲನ
  • News18
  • Last Updated: August 18, 2018, 8:47 PM IST
  • Share this:
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಇಂದು ಅದ್ದೂರಿ ಚಾಲನೆ ದೊರೆತಿದೆ. ರಾಜಧಾನಿ ಜಕಾರ್ತಾದ ಗೆಲೋರಾ ಬಂಗ್ ಕರ್ನೊ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭದ ಮೂಲಕ ಪ್ರತಿಷ್ಠಿತ ಕ್ರೀಡಾಕೂಟ ಆರಂಭಗೊಂಡಿದೆ. ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೋ ಅವರು ಏಷ್ಯಾಡ್ ಗೇಮ್​​ಗೆ ಅದ್ದೂರಿ ಚಾಲನೆ ಘೋಷಿಸಿದರು.

ಬಳಿಕ ಆಯಾಯ ರಾಷ್ಟ್ರದ  ಕ್ರೀಡಾಪಟುಗಳು ತಮ್ಮ ದೇಶದ ರಾಷ್ಟ್ರ ಧ್ವಜ ಹಿಡಿದು ಪಥಸಂಚಲನವನ್ನು ನಡೆಸಿದರು. ಅದರಲ್ಲು ಭಾರತ ಕ್ರೀಡಾಪಟುಗಳ ತಂಡವನ್ನು ಜಾವಲಿನ್ ಕ್ರೀಡಾಪಟು ನೀರಜ್ ಚೋಪ್ರಾ ಅವರು ಧ್ವಜಾಧಾರಿಯಾಗಿ ಮುನ್ನಡೆಸಿದ್ದು ವಿಶೇಷವಾಗಿತ್ತು.

 ಸುಮಾರು 4 ಸಾವಿರಕ್ಕೂ ಅಧಿಕ ನೃತ್ಯಕಲಾವಿದರು ನರ್ತನದ ಮೂಲಕ 46 ರಾಷ್ಟ್ರಗಳ ಎಲ್ಲ ಕ್ರೀಡಾಪಟುಗಳನ್ನು ಸ್ವಾಗತಿಸಿದರು. ಬಳಿಕ ಇಂಡೋನೇಷ್ಯಾದ ಪ್ರಸಿದ್ದ ಗಾಯಕಿ ವಯಾ ಮೆರೈಹ್ ಅವರು ಹಾಡನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ಜೊತೆಗೆ ರೈಸಾ, ಎಡೋ ಕೊಂಡೋಲಾಜಿಟ್, ತುಲಸ್ ಸೇರಿದಂತೆ ಪ್ರಖ್ಯಾತ ಗಾಯಕರು ಮನರಂಜನೆ ನೀಡಿದರು.

  ಏಷ್ಯನ್ ಗೇಮ್ಸ್​​ನಲ್ಲಿ 40 ಕ್ರೀಡಾ ವಿಭಾಗಗಳಲ್ಲಿ ಒಟ್ಟು 465 ಸ್ಪರ್ಧೆಗಳು ನಡೆಯಲಿವೆ. 45 ದೇಶಗಳ 11,000ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಕ್ರೀಡೋತ್ಸವದಲ್ಲಿ ಪದಕಗಳನ್ನು ಗೆಲ್ಲಲು ಮುಂಚೂಣಿಯಲ್ಲಿದ್ದಾರೆ.
First published: August 18, 2018, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading