ಏಷ್ಯನ್ ಗೇಮ್ಸ್ 2018: ಹಾಕಿಯಲ್ಲಿ ಕಜಕಿಸ್ತಾನ್ ವಿರುದ್ಧ ಭಾರತೀಯ ವನಿತೆಯರಿಗೆ ಭರ್ಜರಿ ಜಯ

news18
Updated:August 21, 2018, 11:15 PM IST
ಏಷ್ಯನ್ ಗೇಮ್ಸ್ 2018: ಹಾಕಿಯಲ್ಲಿ ಕಜಕಿಸ್ತಾನ್ ವಿರುದ್ಧ ಭಾರತೀಯ ವನಿತೆಯರಿಗೆ ಭರ್ಜರಿ ಜಯ
pic: twitter
news18
Updated: August 21, 2018, 11:15 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಹಾಕಿ ತಂಡ ಕಜಕಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಬಿ ಪೂಲ್​​ನ ಎರಡನೇ ಪಂದ್ಯದಲ್ಲಿ 21-0ಯಿಂದ ಕಜಕಿಸ್ತಾನವನ್ನು ಸೋಲಿಸಿ ಭಾರತ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದೆ. ಈ ಮೂಲಕ ಭಾರತ ಮಹಿಳಾ ಹಾಕಿ ತಂಡ ಎರಡನೇ ಬಾರಿಗೆ ಒಂದು ತಂಡವನ್ನು ಸೋಲಿಸಿ ಹೆಚ್ಚು ಗೋಲು ದಾಖಲಿಸಿದ ಕೀರ್ತಿಗೆ ಪಾತ್ರವಾಗಿದೆ. ಆರಂಭದಿಂದಲೇ ಎದುರಾಳಿಗೆ ಕಠಿಣ ಸವಾಲು ನೀಡಿದ ಭಾರತ ಕಜಕಿಸ್ತಾನಕ್ಕೆ ಒಂದೂ ಗೋಲು ದಾಖಲಿಸಲು ಅವಕಾಶ ಮಾಡಿ ಕೊಟ್ಟಿಲ್ಲ. ಭಾರತ ಪರ ಗುರ್ಜಿತ್ ಕೌರ್ 4 ಗೋಲು ಸಿಡಿಸಿ ಮಿಂಚಿದರೆ, ಲಾಲ್ಮೆಮಿಯಾಮಿ 3, ನವನೀತ್ ಕೌರ್ ಹಾಗೂ ಲಿಲಿಮಾ ಮಿಂಜ್ ತಲಾ 2, ನೇಹಾ, ಉದಿತಾ, ದೀಪ್ ಗ್ರೇಸ್, ಮೋನಿಕಾ ತಲಾ 1 ಗೋಲು ದಾಖಲಿಸಿದರು.

ಈ ಮೂಲಕ ಮಹಿಳಾ ಹಾಕಿಯಲ್ಲಿ ಪದಕ ಗೆಲ್ಲುವ ಸಾಲಿನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಗೆಲುವಿನ ಹೆಜ್ಜೆಯನ್ನಿಟ್ಟು ಮುನ್ನುಗ್ಗುತ್ತಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ