ಏಷ್ಯನ್ ಗೇಮ್ಸ್ 2018: 5ನೇ ದಿನ ಮೂರು ಪದಕ: 10ನೇ ಸ್ಥಾನಕ್ಕೆ ಕುಸಿದ ಭಾರತ

news18
Updated:August 23, 2018, 9:22 PM IST
ಏಷ್ಯನ್ ಗೇಮ್ಸ್ 2018: 5ನೇ ದಿನ ಮೂರು ಪದಕ: 10ನೇ ಸ್ಥಾನಕ್ಕೆ ಕುಸಿದ ಭಾರತ
news18
Updated: August 23, 2018, 9:22 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 5ನೇ ದಿನದಾಟದಲ್ಲಿ ಭಾರತ 3 ಪದಕಗಳನ್ನ ತನ್ನದಾಗಿಸಿಕೊಂಡಿದೆ.

ಮೊದಲಿಗೆ ಮಹಿಳೆಯರ ಟೆನಿಸ್ ಸಿಂಗಲ್ಸ್​​ನಲ್ಲಿ ಭಾರತದ ಭರವಸೆಯ ಆಟಗಾರ್ತಿ ಅಂಕಿತಾ ರೈನಾ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಜಾಂಗ್ ಶುಯಿ ವಿರುದ್ಧ 4-6, 6-7 ಸೆಟ್​​ಗಳಿಂದ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಜೊತೆಗೆ ಸಾನಿಯಾ ಮಿರ್ಜಾ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಆಟಗಾರ್ತಿ ಎಂಬ ಸಾಧನೆಗೆ ಕಾರಣರಾಗಿದ್ದಾರೆ. ಸಾನಿಯಾ ಅವರು 2006ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಗೇಮ್ಸ್​​ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇನ್ನು ಪುರುಷರ ಡಬಲ್ ಟ್ರಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಉತ್ತರ ಪ್ರದೇಶ ಮೂಲದ 15 ವರ್ಷದ ಶಾರ್ದೂಲ್ ವಿಹಾನ್ ಬೆಳ್ಳಿ ಪದಕ ಜಯಿಸಿದ್ದಾರೆ. 73 ಶಾಟ್​ಗಳಿಂದ 2ನೇ ಸ್ಥಾನಕ್ಕೆ ತೃಪ್ತಿಪಟ್ಟ ವಿಹಾನ್ ಕೇವಲ 1 ಶಾಟ್​ನಲ್ಲಿ ಸ್ವರ್ಣ ಪದಕ ಕೈ ಚೆಲ್ಲಿದರು. ಇನ್ನು ಪುರುಷರ ಕಬಡ್ಡಿಯಲ್ಲಿ ಚಿನ್ನದ ಪದಕವನ್ನ ನಿರೀಕ್ಷಿಸಲಾಗಿತ್ತು. ಆದರೆ, ಪುರುಷರ ಕಬಡ್ಡಿ ತಂಡ ಸೆಮಿಫೈನಲ್​​ನಲ್ಲಿ ಇರಾನ್ ವಿರುದ್ಧ 18-27 ಅಂತರದಲ್ಲಿ ಸೋಲುವ ಮೂಲಕ ಆಘಾತ ಮೂಡಿಸಿದೆ. ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಫೈನಲ್ ತಲುಪದೆ ಹೊರನಡೆದಿರುವ ಪುರುಷರ ಕಬಡ್ಡಿ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

ಈ ಮೂಲಕ ಭಾರತ ಒಟ್ಟಾರೆ 4 ಚಿನ್ನದ ಪದಕ ಸೇರಿದಂತೆ ಒಟ್ಟು 18 ಪದಕಗಳನ್ನು ಸಂಪಾದಿಸಿದ್ದು, ಪದಕಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...