ಏಷ್ಯನ್ ಗೇಮ್ಸ್ 2018: 4ನೇ ದಿನ 5 ಪದಕ ಬಾಜಿಕೊಂಡ ಭಾರತ

news18
Updated:August 22, 2018, 8:28 PM IST
ಏಷ್ಯನ್ ಗೇಮ್ಸ್ 2018: 4ನೇ ದಿನ 5 ಪದಕ ಬಾಜಿಕೊಂಡ ಭಾರತ
news18
Updated: August 22, 2018, 8:28 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್​​ನ 4ನೇ ದಿನದಲ್ಲಿ, ಭಾರತ 1 ಚಿನ್ನ ಸೇರಿದಂತೆ 5 ಪದಕಗಳನ್ನು ಗೆದ್ದು ಬೀಗಿದೆ.

ಮೊದಲಿಗೆ ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ಮೂಲದ ರಾಹಿ ಸರ್ನೋಬಾತ್ ಚಿನ್ನದ ಪದಕಕ್ಕೆ ಗುರಿಯಿಡುವ ಮೂಲಕ ಭಾರತಕ್ಕೆ ಸ್ವರ್ಣ ಗೆದ್ದುಕೊಟ್ಟಿದ್ದಾರೆ. ಅಲ್ಲದೆ ಇತಿಹಾಸವನ್ನು ನಿರ್ಮಿಸಿದ್ದು, ಏಷ್ಯನ್ ಗೇಮ್ಸ್​ನ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ದಾಖಲೆ ಸೃಷ್ಟಿಸಿದ್ದಾರೆ.

ಇದಾದ ಬಳಿಕ ವುಶು ಸ್ಪರ್ಧೆಯಲ್ಲಿ ಭಾರತದ ತೆಕ್ಕೆಗೆ ನಾಲ್ಕು ಕಂಚಿನ ಪದಕಗಳು ಲಭಿಸಿವೆ. ಸಂತೋಷ್ ಕುಮಾರ್, ಸೂರ್ಯ ಭಾನು ಪ್ರತಾಪ್ ಮತ್ತು ರೋಶಿಬಿನಾ ದೇವಿ, ನರೇಂದ್ರ ಗ್ರವಾಲ್ ಅವರು ಕ್ರಮವಾಗಿ ಭಾರತಕ್ಕೆ ಕಂಚು ತಂದುಕೊಟ್ಟಿದ್ದಾರೆ. ಈ ಮೂಲಕ ಭಾರತ 4ನೇ ದಿನದಲ್ಲಿ ಒಟ್ಟು 5 ಪದಕ ಗೆದ್ದಿದ್ದು ಪದಕಗಳ ರ್ಯಾಕಿಂಗ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಚೀನಾ, ಜಪಾನ್ ರಾಷ್ಟ್ರಗಳು ಅಗ್ರ 2 ಸ್ಥಾನ ಅಲಂಕರಿಸಿವೆ.

First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ