ಏಷ್ಯನ್ ಗೇಮ್ಸ್ 2018: 3ನೇ ದಿನ 5 ಪದಕ ಬಾಜಿಕೊಂಡ ಭಾರತ

news18
Updated:August 21, 2018, 9:40 PM IST
ಏಷ್ಯನ್ ಗೇಮ್ಸ್ 2018: 3ನೇ ದಿನ 5 ಪದಕ ಬಾಜಿಕೊಂಡ ಭಾರತ
news18
Updated: August 21, 2018, 9:40 PM IST
ನ್ಯೂಸ್ 18 ಕನ್ನಡ

ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್​​ನಲ್ಲಿ ಮೂರನೇ ದಿನದಲ್ಲಿ ಭಾರತ ಒಟ್ಟು 5 ಪದಕಗಳನ್ನು ಬಾಚಿಕೊಂಡಿದೆ.

3ನೇ ದಿನದಾಟದಲ್ಲಿ ಇಂದು ಮೊದಲಿಗೆ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಉತ್ತರಪ್ರದೇಶ ಮೂಲದ 16 ವರ್ಷದ ಬಾಲಕ ಸೌರಭ್ ಚೌದರಿ 240.7 ಪಾಯಿಂಟ್ ಗಿಟ್ಟಿಸಿ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ. ಇದೇ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮಾ ಕಂಚಿನ ಪದಕ ತನ್ನದಾಗಿಸಿಕೊಂಡರು. ಇನ್ನು 50 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಸಂಜೀವ್ ರಜಪೂತ್ ಸ್ವಲ್ಪದರಲ್ಲೇ ಸ್ವರ್ಣ ಪದಕ ವಂಚಿತರಾಗಿದ್ದು, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದಾದ ಬಳಿಕ ಮಹಿಳೆಯರ 68 ಕೆ.ಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ದಿವ್ಯಾ ಕಕ್ರನ್ ಅವರು ಕಂಚಿನ ಪದಕವನ್ನು ಗೆದ್ದರು. ಕೊನೆಯಲ್ಲಿ ಸೆಪಕ್ ಟಾಕ್ರಾ ವಿಭಾಗದಲ್ಲಿ ಪುರುಷರ ರೆಗು ತಂಡ ಕಂಚಿನ ಪದಕ ಜಯಿಸಿದೆ. ಸೆಮಿಫೈನಲ್ ಹಂತದಲ್ಲಿ ಥಾಯ್ ಲೆಂಡ್ ವಿರುದ್ಧ 0-2  ಅಂತರದಲ್ಲಿ ಸೋಲುಂಡಿರುವ ಭಾರತ ತಂಡ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದೆ. ಇದು ಏಷ್ಯನ್ ಗೇಮ್ಸ್​ನಲ್ಲಿ ಸೆಪಕ್ ಟಾಕ್ರಾ ಗೇಮ್​​ನಲ್ಲಿ ಭಾರತ ಗೆದ್ದ ಮೊದಲ ಪದಕವಾಗಿದೆ.

ಈ ಮೂಲಕ ಭಾರತ ಒಟ್ಟಾರೆ 10 ಪದಕ ಗೆದ್ದಿದ್ದು 3 ಚಿನ್ನ, 3 ಬೆಳ್ಳಿ ಹಾಗೂ 4 ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಒಟ್ಟಾರೆ ಪದಕಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 7ನೇ ಸ್ಥಾನ ಅಲಂಕರಿಸಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...