News18 India World Cup 2019

18ನೇ ಏಷ್ಯನ್ ಗೇಮ್ಸ್​ಗೆ ವರ್ಣರಂಜಿತ ತೆರೆ

news18
Updated:September 2, 2018, 10:44 PM IST
18ನೇ ಏಷ್ಯನ್ ಗೇಮ್ಸ್​ಗೆ ವರ್ಣರಂಜಿತ ತೆರೆ
news18
Updated: September 2, 2018, 10:44 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದ ಜಕಾರ್ತ ಹಾಗೂ ಪಾಲೆಂಬಾಗ್​​ನಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್​​ಗೆ ತೆರೆಬಿದ್ದಿದೆ.

ಕಳೆದ 15 ದಿನಗಳು ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 45 ರಾಷ್ಟ್ರಗಳ 11 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದರು. ಇದರಲ್ಲಿ ಭಾರತದ 572 ಕ್ರೀಡಾಪಟುಗಳು ವಿವಿಧ ಗೇಮ್​ನಲ್ಲಿ ಭಾಗವಹಿಸಿದ್ದರು. ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಹಿಂದೆದೂ ಮಾಡದ ಸಾಧನೆಯನ್ನು ಈ ಬಾರಿ ಭಾರತ ಮಾಡಿದ್ದು, ಈಗಾಗಲೇ ದಾಖಲೆ ಪ್ರಮಾಣದಲ್ಲಿ ಪದಕ ಗೆದ್ದಿದೆ. 15 ಚಿನ್ನ 24 ಬೆಳ್ಳಿ ಹಾಗೂ 30 ಕಂಚಿನ ಸೇರಿದಂತೆ ಒಟ್ಟಾರೆ 69 ಪದಕಗಳನ್ನ ಗೆಲ್ಲುವ ಮೂಲಕ 8ನೇ ಸ್ಥಾನಿಯಾಗಿ ಕ್ರೀಡಾಕೂಟ ಅಂತಿಮಗೊಳಿಸಿದೆ.

ಇನ್ನು ಕ್ರೀಡಾಕೂಟದ ಕೊನೆಯದಾಗಿ ನಡೆದ ಸಮಾರೋಪ ಸಂದರ್ಭದಲ್ಲಿ ಏಷ್ಯಾದ ಒಲಿಂಪಿಕ್ ಫೆಡರೇಶನ್ ಅಧ್ಯಕ್ಷ  ಶೇಖ್ ಅಹ್ಮದ್ ಅಲ್ ಅಫಾದ್  ಟೂರ್ನಿಗೆ ಅಂತಿಮ ವಿದಾಯ ಭಾಷಣ ಮಾಡಿದರು. ಜೊತೆಗೆ ಮುಂದಿನ ಬಾರಿ 2022ರಲ್ಲಿ ಏಷ್ಯನ್ ಗೇಮ್ಸ್ ಆತಿಥ್ಯ ವಹಿಸುವ ಚೀನಾಗೆ ಕ್ರೀಡಾ ಜ್ಯೋತಿಯನ್ನ ಹಸ್ತಾಂತರಿಸಲಾಯಿತು. ಅಲ್ಲದೆ ಇದೇ ಸಂದರ್ಭದಲ್ಲಿ ಚೀನಾದ ಸಂಸ್ಕೃತಿಯನ್ನು ವಿವಿಧ ಕಲಾವಿದರು ನೃತ್ಯದ ಮೂಲಕ ಬಿಂಬಿಸಿದರು.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...