ಏಷ್ಯನ್ ಗೇಮ್ಸ್ 2018ಕ್ಕೆ ಇಂದು ತೆರೆ: ರಾಣಿ ರಾಂಪಾಲ್ ಭಾರತದ ಧ್ಬಜಧಾರಿ

news18
Updated:September 2, 2018, 1:43 PM IST
ಏಷ್ಯನ್ ಗೇಮ್ಸ್ 2018ಕ್ಕೆ ಇಂದು ತೆರೆ: ರಾಣಿ ರಾಂಪಾಲ್ ಭಾರತದ ಧ್ಬಜಧಾರಿ
  • News18
  • Last Updated: September 2, 2018, 1:43 PM IST
  • Share this:
ನ್ಯೂಸ್ 18 ಕನ್ನಡ

ಜಕಾರ್ತ (ಸೆ. 02): ಪ್ರತಿಷ್ಠಿತ ಏಷ್ಯನ್ ಗೇಮ್ಸ್ 2018ಕ್ಕೆ ಇಂದು ತೆರೆಬೀಳಲಿದೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರು ಭಾರತದ ಧ್ವಜಧಾರಿಯಾಗಲಿದ್ದಾರೆ. ಈ ಬಗ್ಗೆ ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ನರಿಂದರ್ ಭಾತ್ರಾ ತಿಳಿಸಿದ್ದಾರೆ.

ಆಗಸ್ಟ್​ 18ರಂದು ನಡೆದಿದ್ದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ನೀರಜ್ ಚೋಪ್ರಾ ಅವರು ಧ್ವಜಧಾರಿಯಾಗಿದ್ದರು. ಇನ್ನು ಈಗಾಗಲೇ ಪದಕ ಗೆದ್ದ ಹೆಚ್ಚಿನ ಕ್ರೀಡಾಪಟುಗಳು ತವರಿಗೆ ವಾಪಸಾಗಿದ್ದು, ಭಾರತದ ಸ್ಕ್ವಾಷ್, ಹಾಕಿ ಹಾಗೂ ಬ್ರಿಜ್ ತಂಡಗಳು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ.

ಸಮಾರೋಪ ಸಮಾರಂಭಕ್ಕೆ ಸಕಲ ತಯಾರಿ ನಡೆಸಿರುವ ಜಕಾರ್ತ, ಟ್ರಾಫಿಕ್ ನಿವಾರಣೆಗಾಗಿ ಕ್ರೀಡಾ ಸಂಕೀರ್ಣಕ್ಕೆ ಪ್ರವೇಶ ಕಲ್ಪಿಸುವ ಮಾರ್ಗಗಳಲ್ಲಿ ಖಾಸಗಿ ವಾಹನಗಳಿಗೆ ನಿಷೇಧಿಸಲಾಗಿದೆ.
First published: September 2, 2018, 1:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading