#PHOTOS: ಏಷ್ಯನ್ ಗೇಮ್ಸ್ 2018: ಪದಕಕ್ಕೆ ಕೊರಳೊಡ್ಡಿದ ಭಾರತೀಯ ಕ್ರೀಡಾಪಟುಗಳು

news18
Updated:August 21, 2018, 8:29 PM IST
#PHOTOS: ಏಷ್ಯನ್ ಗೇಮ್ಸ್ 2018: ಪದಕಕ್ಕೆ ಕೊರಳೊಡ್ಡಿದ ಭಾರತೀಯ ಕ್ರೀಡಾಪಟುಗಳು
news18
Updated: August 21, 2018, 8:29 PM IST
ಪುರುಷರ 50 ಮೀ. ರೈಫಲ್ ವಿಭಾಗದಲ್ಲಿ ಹರಿಯಾಣದ ಸಂಜೀವ್ ರಜಪೂತ್ ಅವರು ಬೆಳ್ಳಿ ಪದಕ ತಮ್ಮದಾಗಿಸಿದರು


18ನೇ ಏಷ್ಯನ್ ಗೇಮ್ಸ್​ನಲ್ಲಿ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಜಯ ಗಳಿಸಿದ ವೇಳೆ ಭಾರತದ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸುತ್ತಿರುವ ಸೌರಭ್ ಚೌದರಿ ಹಾಗೂ ಅಭಿಷೇಕ್ ವರ್ಮಾ


10 ಮೀ. ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ 16 ವರ್ಷದ ಬಾಲಕ ಸೌರಭ್ ಚೌದರಿ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ


ಫ್ರೀಸ್ಟೈಲ್ ಕುಸ್ತಿ 50 ಕಿಮೀ ವಿಭಾಗದ ಫೈನಲ್​​ನಲ್ಲಿ ವಿನೇಶ್ ಫೋಗಾಟ್ ಅವರು ಚಿನ್ನ ಜಯಿಸಿದ್ದಾರೆ. ಜೊತೆಗೆ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ದಾಖಲೆ ಬರೆದಿದ್ದಾರೆ.


ಭಾರತದ ಕುಸ್ತಿಪಟು ಬಜರಂಗ್ ಪೊನಿಯಾ ಅವರು 65 ಕೆಜಿ ವಿಭಾಗದ ಕುಸ್ತಿಯಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿದ್ದಾರೆ


10 ಮೀಟರ್ ಏರ್ ರೈಫಲ್ ಮಿಶ್ರ ಶೂಟಿಂಗ್ ಸ್ಪರ್ಧೆಯಲ್ಲಿ ಅಪೂರ್ವಿ ಚಾಂದೇಲಾ ಹಾಗು ರವಿಕುಮಾರ್ ಅವರು ಕಂಚಿನ ಪದಕ ಗೆದ್ದು ಬೀಗಿದ್ದಾರೆ


68 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಮಹಿಳಾ ಕುಸ್ತಿಪಟು ದಿವ್ಯ ಕಕ್ರನ್ ಅವರು ಕಂಚಿನ ಪದಕ ತಮ್ಮದಾಗಿಸಿದ್ದಾರೆ
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ