ಏಷ್ಯನ್ ಗೇಮ್ಸ್ 2018: ಬೆಳ್ಳಿಗೆ ಗುರಿಯಿಟ್ಟ ಶಾರ್ದೂಲ್; ಟೆನ್ನಿಸ್​ನಲ್ಲಿ ಭಾರತಕ್ಕೆ ಕಂಚು

news18
Updated:August 23, 2018, 3:54 PM IST
ಏಷ್ಯನ್ ಗೇಮ್ಸ್ 2018: ಬೆಳ್ಳಿಗೆ ಗುರಿಯಿಟ್ಟ ಶಾರ್ದೂಲ್; ಟೆನ್ನಿಸ್​ನಲ್ಲಿ ಭಾರತಕ್ಕೆ ಕಂಚು
news18
Updated: August 23, 2018, 3:54 PM IST
ನ್ಯೂಸ್ 18 ಕನ್ನಡ

ಭಾರತದ ನಂಬರ್ 1 ಟೆನಿಸ್ ತಾರೆ ಅಂಕಿತಾ ರೈನಾ ಅವರು ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಮಹಿಳೆಯ ಸಿಂಗಲ್ಸ್​​ನ ಸೆಮಿಫೈನಲ್ ಕಾದಾಟದಲ್ಲಿ ಚೀನಾದ ಶುಯಿ ಜಾಂಗ್ ಅವರ ವಿರುದ್ಧ 4-6, 6-7 ನೇರ ಸೆಟ್​​ಗಳಿಂದ ಸೋಲುಂಡರು. ಇನ್ನು ಪುರುಷರ ಡಬಲ್ಸ್​​ ವಿಭಾಗದಲ್ಲಿ ರೋಹನ್ ಬೋಪಣ್ಣ ಹಾಗೂ ಡಿವಿಜ್ ಶರಣ್ ಅವರು ಫೈನಲ್​​ಗೆ ಲಗ್ಗೆ ಇಟ್ಟಿದ್ದು ಚಿನ್ನ ಅಥವಾ ಬೆಳ್ಳಿ ಪಡೆದಯುವುದು ದೃಢಪಡಿಸಿದ್ದಾರೆ.

ಇನ್ನು ಪುರುಷರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶಾರ್ದೂಲ್ ವಿಹಾನ್ ಅವರು ಬೆಳ್ಳೆ ಪದಕ ತಮ್ಮದಾಗಿಸಿದ್ದಾರೆ. ಶೂಟಿಂಗ್​​ನ ಡಬಲ್ ಟ್ರಾಪ್ ಸ್ಪರ್ಧೆಯಲ್ಲಿ 15ರ ಹರೆಯದ ಶಾರ್ದೂಲ್ ಅವರು ಶೂಟಿಂಗ್ ವಿಭಾದಗಲ್ಲೇ ಮತ್ತೊಂದು ಪದಕ ಭಾರತಕ್ಕೆ ತಂದು ಕೊಟ್ಟಿದ್ದಾರೆ. ಉ. ಪ್ರದೇಶದ ಮೀರತ್​ನ ಶಾರ್ದೂಲ್ ಅವರು ಫೈನಲ್ ಸುತ್ತಿನಲ್ಲಿ ಒಟ್ಟು 73 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು.

ಸದ್ಯ ಶೂಟಿಂಗ್​​ನಲ್ಲಿ ಭಾರತಕ್ಕೆ 8 ಪದಕಗಳು ಬಂದಿದ್ದರೆ, ಒಟ್ಟಾರೆಯಾಗಿ 17 ಪದಕ ಭಾರತದ ಖಾತೆಯಲ್ಲಿದೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ