ವರ್ಲ್ಡ್ಕಪ್(World cup) ಕ್ರಿಕೆಟ್(Cricket)ನಲ್ಲಿ ಭಾರತ(India), ಪಾಕಿಸ್ತಾನ(Pakistan) ವಿರುದ್ಧ ಸೋಲನುಭವಿಸುತ್ತು. ಆದರೆ, ಅದಕ್ಕೆ ಇಂದು ಭಾರತೀಯ ಹಾಕಿ ತಂಡ(Indian Hockey Team) ರಿವೇಂಜ್ ತಿರಿಸಿಕೊಂಡಿದೆ. ಲೀಗ್ ಪಂದ್ಯದಲ್ಲೇ ಪಾಕಿಸ್ತಾನವನ್ನು ಮಣಿಸಿದ್ದ ಭಾರತದ ಪುರುಷರ ಹಾಕಿ ತಂಡ ಮೂರನೇ ಸ್ಥಾನದ ಪಂದ್ಯದಲ್ಲಿ ಮತ್ತೆ ಪಾಕಿಸ್ತಾನ(Pakistan)ದ ವಿರುದ್ಧ ಗೆದ್ದು ಕಂಚಿನ ಪದಕಕ್ಕೆ ಮುತ್ತಿಟ್ಟಿದೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2021 ರ ಮೂರನೇ ಸ್ಥಾನದ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 4-3 ರೋಚಕ ಜಯವನ್ನು ದಾಖಲಿಸಿತು. ಕಳೆದ ಬಾರಿ ಈ ಟೂರ್ನಮೆಂಟ್ ಅನ್ನು ಗೆದ್ದಿದ್ದ ಟೀಮ್ ಇಂಡಿಯಾ ಈ ಬಾರಿ ಜಪಾನ್ ವಿರುದ್ಧ ದುರ್ಬಲ ಆಟದಿಂದ ಪ್ರಶಸ್ತಿಯನ್ನು ಕೈಯಿಂದ ಕಳೆದುಕೊಂಡಿತು. ಈ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ(India)ಕ್ಕೆ ಇದು ಎರಡನೇ ಗೆಲುವು. ಇದಕ್ಕೂ ಮೊದಲು ರೌಂಡ್ ರಾಬಿನ್ ಹಂತದಲ್ಲಿ ಪಾಕಿಸ್ತಾನವನ್ನು 3-1 ಗೋಲುಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಭಾರತವು ಒಟ್ಟು 11 ಪೆನಾಲ್ಟಿ ಕಾರ್ನರ್(Penalty Corner)ಗಳನ್ನು ಗಳಿಸಿತು. ಆದರೆ ಕೇವಲ ಎರಡು ಗೋಲುಗಳನ್ನು ಪರಿವರ್ತಿಸಲು ಸಾಧ್ಯವಾಯಿತು.
ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದ ಭಾರತ!
ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್, ಸುಮಿತ್ ಕುಮಾರ್ (45ನೇ ನಿ), ವರುಣ್ ಕುಮಾರ್ (53ನೇ ನಿ) ಮತ್ತು ಆಕಾಶದೀಪ್ ಸಿಂಗ್ (57ನೇ ನಿ) ಗೋಲು ಗಳಿಸಿದರು. ಮತ್ತೊಂದೆಡೆ ಪಾಕಿಸ್ತಾನ ಪರ ಅಫ್ರಾಜ್ (10ನೇ), ಅಬ್ದುಲ್ ರಾಣಾ (33ನೇ) ಮತ್ತು ಅಹ್ಮದ್ ನದೀಮ್ (57ನೇ ನಿಮಿಷ) ಗೋಲು ಗಳಿಸಿದರು. ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮೊದಲ ನಿಮಿಷದಿಂದಲೇ ಮುನ್ನಡೆ ಸಾಧಿಸಿತ್ತು. ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಈ ಗೋಲು ದಾಖಲಿಸಿದರು. ಭಾರತ ಆರಂಭಿಕ ಕ್ಷಣಗಳಲ್ಲಿ ಪೆನಾಲ್ಟಿ ಕಾರ್ನರ್‌ಗಳನ್ನು ಕಲೆಹಾಕಿತು ಆದರೆ ಹರ್ಮನ್‌ಪ್ರೀತ್ ಮಾತ್ರ ಗೋಲು ಗಳಿಸಲು ಸಾಧ್ಯವಾಯಿತು. ಈ ಮೂಲಕ ಕ್ರಿಕೆಟ್ ಸೋಲಿಗೆ ಭಾರತದ ಪರುಷರ ಹಾಕಿ ತಂಡ ತಕ್ಕ ಪ್ರತ್ಯುತ್ತರ ನೀಡಿದೆ.
ಜಿದ್ದಾ ಜಿದ್ದಿನಿಂದ ಕೂಡಿದ್ದ ರೋಚಕ ಪಂದ್ಯ!
ಜಿದ್ದಾ ಜಿದ್ದಿನಿಂದ ನಡೆದ ಎರಡನೇ ಕ್ವಾರ್ಟರ್‌ನಲ್ಲಿ ಎರಡು ತಂಡಗಳಿಂದ ಯಾವುದೇ ಗೋಲ್ ಸಿಡಿಯಲಿಲ್ಲ. 3ನೇ ಕ್ವಾರ್ಟರ್‌ನಲ್ಲಿ ಪಾಕಿಸ್ತಾನದ ಯುವ ಆಟಗಾರ ಅಬ್ದುಲ್ ರಾಣಾ ಸಿಡಿಸಿದ ಭರ್ಜರಿ ಗೋಲ್‍ನಿಂದ ಪಾಕಿಸ್ತಾನ ತಂಡ 2-1 ಗೋಲ್‍ಗಳ ಮುನ್ನಡೆ ಪಡೆದುಕೊಂಡಿತು. ಇದಾದ ಕೆಲಹೊತ್ತಿನಲ್ಲೇ ಭಾರತ ಪರ ಸುಮಿತ್ ಸಿಡಿಸಿದ ಗೋಲ್‍ನಿಂದ 2-2 ಸಮಬಲ ಸಾಧಿಸಿತು. ಇದೇ ಲಯ ಮುಂದುವರಿಸಿದ ಭಾರತ ತಂಡ 4ನೇ ಕ್ವಾರ್ಟರ್‌ನಲ್ಲಿ ವರುಣ್ ಕುಮಾರ್ ಸಿಡಿಸಿದ ಗೋಲ್‍ನಿಂದ 3-2 ಗೋಲ್‍ಗಳ ಮುನ್ನಡೆ ಕಾಯ್ದುಕೊಂಡಿತು.
ಇದನ್ನು ಓದಿ: ಮತ್ತೆ ಬಂತು ಪ್ರೊ ಕಬಡ್ಡಿ.. ತೊಡೆ ತಟ್ಟಿ ಗುಮ್ಮೋಕೆ ರೆಡಿಯಾದ ಬೆಂಗಳೂರು ಬುಲ್ಸ್!
ನಿನ್ನೆ ಸೋಲು ಮರೆಸಿದ ಭಾರತ ಹಾಕಿ ತಂಡ!
ಇಂದು ಮೂರನೇ ಸ್ಥಾನಕ್ಕಾಗಿ ಪಾಕಿಸ್ತಾನ ಜೊತೆ ಇಂದು ಆಡಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ ತಂಡ 3-5 ಗೋಲ್‍ಗಳ ಅಂತರದಿಂದ ಸೋತು ಸೆಮಿಫೈನಲ್‍ನಿಂದ ಹೊರಬಿದ್ದು, ಮೂರನೇ ಸ್ಥಾನಕ್ಕಾಗಿ ಪಾಕಿಸ್ತಾನ ಜೊತೆ ಇಂದು ಆಡಿತ್ತು. ಭಾರತ ಹಾಗೂ ಜಪಾನ್ ತಂಡಗಳು ಈ ಪಂದ್ಯಕ್ಕೂ ಮುನ್ನ 18 ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ 16 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಜಪಾನ್ ಕೇವಲ 1 ಪಂದ್ಯದಲ್ಲಿ ಗೆದ್ದಿತ್ತು. ಇನ್ನೊಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಆ ನೋವನ್ನು ಇಂದು ಪುರಷರ ಹಾಕಿ ತಂಡ ಮರೆಸಿದೆ. ಬದ್ಧ ವೈರಿ ಪಾಕಿಸ್ತಾನ ತಂಡವನ್ನು ಮಣಿಸಿ ಕಂಚಿನ ಪದಕ ಗೆದ್ದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ